ಖ್ಯಾತ ಹಿನ್ನಲೆ ಗಾಯಕ ಡಾ. ವಿಜಯಪ್ರಕಾಶ್ ತಂಡದಿಂದ ‘ಶಾಸ್ತ್ರೀಯ ಮತ್ತು ಭಕ್ತಿಗೀತೆ‘
ವಿಪಿಯವರ ಸಂಗೀತಕ್ಕೆ ಮಾರು ಹೋದ ಉಡುಪಿ ಜನತೆ
(Udupi) ಉಡುಪಿ: ಉಡುಪಿಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ಪ್ರಯುಕ್ತ ರಾಜಾಂಗಣದಲ್ಲಿ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬುಧವಾರ ರಾತ್ರಿ ಖ್ಯಾತ ಹಿನ್ನಲೆ ಗಾಯಕ ಡಾ. ವಿಜಯಪ್ರಕಾಶ್ ತಂಡದಿಂದ ‘ಶಾಸ್ತ್ರೀಯ ಮತ್ತು ಭಕ್ತಿಗೀತೆ’ ನಡೆಯಿತು.
ವಯೋಲಿನ್ ನಲ್ಲಿ ಪ್ರಾದೇಶ ಆಚಾರ್, ಮೃದಂಗದಲ್ಲಿ ಅನಿರುದ್ಧ ಭಟ್, ತಬಲಾದಲ್ಲಿ ಜಗದೀಶ್ ಡಿ. ಕುರ್ತಕೋಟಿ, ರಿಧಮ್ ಪ್ಯಾಡ್ ನಲ್ಲಿ ಮಂಜುನಾಥ್ ಎನ್.ಎಸ್. ಸಾಥ್ ನೀಡಿದರು.
ಮಕ್ಕಳ ತಜ್ಞ ಡಾ. ಶ್ರೀಕಿರಣ ಹೆಬ್ಬಾರ್ ಅವರು ಎಲ್ಲಾ ಕಲಾವಿದರನ್ನು ಶ್ರೀಕೃಷ್ಣ ಮಠದ ಪರವಾಗಿ ಸ್ವಾಗತಿಸಿ, ಪ್ರೇಕ್ಷಕರಿಗೆ ಪರಿಚಯಿಸಿದರು.
ಉಡುಪಿಯ ಸಾವಿರಾರು ಪ್ರೇಕ್ಷಕರು ಡಾ. ವಿಜಯಪ್ರಕಾಶ್ ಸಂಗೀತದ ರುಚಿ ಸವಿದರು.
