• Home  
  • ಖ್ಯಾತ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ಕಾಪು ಹೊಸ ಮಾರಿಗುಡಿ ಭೇಟಿ (Famous Indian playback singer Vijay Prakash Kaup visits Marigudi)
- ಧಾರ್ಮಿಕ - ಸನ್ಮಾನ, ಅಭಿನಂದನೆ

ಖ್ಯಾತ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ಕಾಪು ಹೊಸ ಮಾರಿಗುಡಿ ಭೇಟಿ (Famous Indian playback singer Vijay Prakash Kaup visits Marigudi)

Share: ಖ್ಯಾತ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ಕಾಪು ಹೊಸ ಮಾರಿಗುಡಿ ಭೇಟಿ  ಒಂದು ದಿನದ ವಿಶೇಷ ಅನ್ನದಾನ ಸೇವೆ ನೀಡಿದ ವಿಜಯ ಪ್ರಕಾಶ್ (Kaup) ಕಾಪು: ಖ್ಯಾತ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ಅವರು ಕಾಪು ಶ್ರೀ ಹೊಸ ಮಾರಿಗುಡಿಗೆ ಭೇಟಿ ನೀಡಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನ ದರುಶನ ಪಡೆದರು.    ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯರವರು ವಿಷೇಶ ಪೂಜೆ ಸಲ್ಲಿಸಿ ಮಾರಿಯಮ್ಮನ ಅನುಗ್ರಹ ಪ್ರಸಾದ ನೀಡಿದರು.   ನಂತರ ನಿತ್ಯ […]

(Kaup) ಕಾಪು: ಖ್ಯಾತ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ಅವರು ಕಾಪು ಶ್ರೀ ಹೊಸ ಮಾರಿಗುಡಿಗೆ ಭೇಟಿ ನೀಡಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನ ದರುಶನ ಪಡೆದರು.

   ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯರವರು ವಿಷೇಶ ಪೂಜೆ ಸಲ್ಲಿಸಿ ಮಾರಿಯಮ್ಮನ ಅನುಗ್ರಹ ಪ್ರಸಾದ ನೀಡಿದರು.

  ನಂತರ ನಿತ್ಯ ಅನ್ನದಾನ ನಡೆಯುತ್ತಿರುವುದರಿಂದ ಒಂದು ದಿನದ ವಿಶೇಷ ಅನ್ನದಾನ ಸೇವೆಯನ್ನು ನೀಡಿ ಕೃತಾರ್ಥರಾಗಿದ್ದಾರೆ.  

ಹೊಸ ಮಾರಿಗುಡಿ ವ್ಯವಸ್ಥಾಪನಾ ಸಮಿತಿಯ  ವತಿಯಿಂದ ವಿಜಯ ಪ್ರಕಾಶ್‌ ರವರನ್ನು ಗೌರವಿಸಲಾಯಿತು.

  ಹೊಸಮಾರಿಗುಡಿಯ ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ವ್ಯವಸ್ಥಾಪನಾ ಸಮಿತಿಯ ಸದಸ್ಯ ಮಾದವ ಆರ್. ಪಾಲನ್, ಯೋಗೀಶ್ ವಿ. ಶೆಟ್ಟಿ, ಜಯರಾಮ ಆಚಾರ್ಯ, ಸಾವಿತ್ರಿ ಗಣೇಶ್, ಪ್ರಬಂಧಕ ಗೋವರ್ಧನ್ ಸೇರಿಗಾರ್ ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.