ಚಿಕ್ಕೋಡಿ : ದಾಖಲೆ ವ್ಯತ್ಯಾಸ, ಅಂಗವಿಕಲ ಬೀರಪ್ಪಾ ಸಿದ್ಧಪ್ಪಾರವರವರಿಗೆ ಸಂಕಷ್ಠ
ಮನೆಗೆ ಆಗಮಿಸಿ ದಾಖಲೆ ಪರಿಶೀಲಿಸಿದ ದಂಡಾಧಿಕಾರಿ ಗೌ. ಸುಭಾಷ ಎಸ್. ಸಂಪಗಾವಿ
(Chikkodi) ಚಿಕ್ಕೋಡಿ: ವಿಶೇಷ ತೀವ್ರ ಪರಿಷ್ಕರಣೆ ಅಡಿಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಮುಂದುವರಿಸುವ ಕುರಿತು. ‘ದಾಖಲೆಗಳ ವ್ಯತ್ಯಾಸ ಕಂಡುಬಂದ ಕಾರಣ, ಚಿಂಚಣಿ ಗ್ರಾಮದ ನಿವಾಸಿ ಬೀರಪ್ಪಾ ಸಿದ್ಧಪ್ಪಾ ಹೆಗಡೆಯವರಿಗೆ, ವಿಚಾರಣೆಗೆ ಹಾಜರಾಗಲು ನಿಯಮಾನುಸಾರ ನೋಟಿಸ್ ನೀಡಲಾಗಿತ್ತು.
ಸದರಿ ಮತದಾರರು ಅಂಗವಿಕಲರು ಮತ್ತು ತೀವ್ರತರನಾದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಬಿಎಲ್ಓ ರವರು ಚಿಕ್ಕೋಡಿ ಉಪವಿಭಾಗೀಯ ದಂಡಾಧಿಕಾರಿಗಳಾದ ಗೌ. ಸುಭಾಷ ಎಸ್. ಸಂಪಗಾವಿಯವರಗೆ ಮನವರಿಕೆ ಮಾಡಿದ್ದಾರೆ.
ಚಿಕ್ಕೋಡಿ ಉಪವಿಭಾಗೀಯ ದಂಡಾಧಿಕಾರಿ ಖುದ್ದಾಗಿ ಮತದಾರರ ಮನೆಗೆ ತೆರಳಿ ವಿಚಾರಣೆ ನಡೆಸಿ ಹೆಸರನ್ನು ವಿಶೇಷ ತೀವ್ರ ಪರಿಷ್ಕರಣೆ ಮತದಾರರ ಪಟ್ಟಿಯಲ್ಲಿ ಮುಂದುವರಿಸಲು ಆದೇಶಿಸಿದ್ದಾರೆ.

