• Home  
  • ಚಿಕ್ಕೋಡಿ: ಹೋಟೆಲ್, ಢಾಬಾಗಳ ಮೇಲೆ ಅಧಿಕಾರಿಗಳ ದಿಢೀರ್ ದಾಳಿ  (Chikkodi: Officials conduct surprise raids on hotels and dhabas)
- ಅಪರಾಧ

ಚಿಕ್ಕೋಡಿ: ಹೋಟೆಲ್, ಢಾಬಾಗಳ ಮೇಲೆ ಅಧಿಕಾರಿಗಳ ದಿಢೀರ್ ದಾಳಿ  (Chikkodi: Officials conduct surprise raids on hotels and dhabas)

Share: ಚಿಕ್ಕೋಡಿ: ಹೋಟೆಲ್, ಢಾಬಾಗಳ ಮೇಲೆ ಅಧಿಕಾರಿಗಳ ದಿಢೀರ್ ದಾಳಿ    29 ಅಕ್ರಮ ಗೃಹಬಳಕೆ ಗ್ಯಾಸ್ ಸಿಲಿಂಡರ್ ಜಪ್ತಿ ​(Chikkodi) ಚಿಕ್ಕೋಡಿ: ಪಟ್ಟಣದ ವಿವಿಧ ಹೋಟೆಲ್‌ ಹಾಗೂ ಢಾಬಾಗಳಲ್ಲಿ ಅನಧಿಕೃತವಾಗಿ ವಾಣಿಜ್ಯ ಉದ್ದೇಶಕ್ಕಾಗಿ ಬಳಕೆ ಮಾಡಲಾಗುತ್ತಿದ್ದ ಗೃಹಬಳಕೆ ಅನಿಲ (ಎಲ್‌ಪಿಜಿ) ಸಿಲಿಂಡರ್‌ಗಳ ವಿರುದ್ಧ ಚಿಕ್ಕೋಡಿ ತಹಶೀಲ್ದಾರ್ ರಾಜೇಶ ಬುರ್ಲಿ ಅವರ ನೇತೃತ್ವದಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಭರ್ಜರಿ ದಾಳಿ ನಡೆಸಿ, ಒಟ್ಟು 29 ಸಿಲಿಂಡರ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ​  ನಿಯಮಗಳನ್ನು ಉಲ್ಲಂಘಿಸಿ ಸಬ್ಸಿಡಿ ಯುಕ್ತ ಗೃಹಬಳಕೆ ಸಿಲಿಂಡರ್‌ಗಳನ್ನು […]

  29 ಅಕ್ರಮ ಗೃಹಬಳಕೆ ಗ್ಯಾಸ್ ಸಿಲಿಂಡರ್ ಜಪ್ತಿ

​(Chikkodi) ಚಿಕ್ಕೋಡಿ: ಪಟ್ಟಣದ ವಿವಿಧ ಹೋಟೆಲ್‌ ಹಾಗೂ ಢಾಬಾಗಳಲ್ಲಿ ಅನಧಿಕೃತವಾಗಿ ವಾಣಿಜ್ಯ ಉದ್ದೇಶಕ್ಕಾಗಿ ಬಳಕೆ ಮಾಡಲಾಗುತ್ತಿದ್ದ ಗೃಹಬಳಕೆ ಅನಿಲ (ಎಲ್‌ಪಿಜಿ) ಸಿಲಿಂಡರ್‌ಗಳ ವಿರುದ್ಧ ಚಿಕ್ಕೋಡಿ ತಹಶೀಲ್ದಾರ್ ರಾಜೇಶ ಬುರ್ಲಿ ಅವರ ನೇತೃತ್ವದಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಭರ್ಜರಿ ದಾಳಿ ನಡೆಸಿ, ಒಟ್ಟು 29 ಸಿಲಿಂಡರ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

​  ನಿಯಮಗಳನ್ನು ಉಲ್ಲಂಘಿಸಿ ಸಬ್ಸಿಡಿ ಯುಕ್ತ ಗೃಹಬಳಕೆ ಸಿಲಿಂಡರ್‌ಗಳನ್ನು ವ್ಯಾಪಾರೀ ಉದ್ದೇಶಗಳಿಗೆ ಬಳಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ಈ ಕಾರ್ಯಾಚರಣೆ ಕೈಗೊಂಡಿದ್ದಾರೆ. ದಾಳಿ ವೇಳೆ ಕೆಲ ಪ್ರತಿಷ್ಠಿತ ಹೋಟೆಲ್ ಹಾಗೂ ಢಾಬಾಗಳಲ್ಲಿ ಅಕ್ರಮವಾಗಿ ಗೃಹಬಳಕೆ ಸಿಲಿಂಡರ್‌ಗಳನ್ನು ಬಳಸುವುದು ಪತ್ತೆಯಾಗಿದ್ದು, ಕೂಡಲೇ ಅಧಿಕಾರಿಗಳು ಅವುಗಳನ್ನು ಜಪ್ತಿ ಮಾಡಿದ್ದಾರೆ.

​ಕಠಿಣ ಕ್ರಮದ ಎಚ್ಚರಿಕೆ:

​   ಸರ್ಕಾರದ ನಿಯಮಾನುಸಾರ ಗೃಹ ಬಳಕೆ ಗ್ಯಾಸ್ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುವುದು ಕಾನೂನುಬಾಹಿರ ಅಪರಾಧವಾಗಿದೆ. ಇಂತಹ ಅಕ್ರಮ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಮುಂದಿನ ದಿನಗಳಲ್ಲಿ ಮತ್ತಷ್ಟು ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ರಾಜೇಶ ಬುರ್ಲಿ ಅವರು ಕರಾರುವಾಕ್ಕಾಗಿ ಎಚ್ಚರಿಕೆ ನೀಡಿದ್ದಾರೆ.

  ಅಲ್ಲದೆ, ಪಟ್ಟಣದ ಎಲ್ಲಾ ಹೋಟೆಲ್ ಮತ್ತು ಧಾಬಾ ಮಾಲೀಕರು ಕಡ್ಡಾಯವಾಗಿ ಅಧಿಕೃತ ವಾಣಿಜ್ಯ ಸಿಲಿಂಡರ್‌ಗಳನ್ನೇ (Commercial Cylinders) ಬಳಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

​  ಈ ಕಾರ್ಯಾಚರಣೆಯಲ್ಲಿ ಆಹಾರ ಇಲಾಖೆ ಶಿರಸ್ತೆದಾರರಾದ ಹಣಮಂತ ಕಾಂಡೆಕರ ಹಾಗೂ ಆಹಾರ ನಿರೀಕ್ಷಕರಾದ ಐಶ್ವರ್ಯ ದಿವಟೆ ಅವರು ಉಪಸ್ಥಿತರಿದ್ದು ಪ್ರಮುಖ ಪಾತ್ರ ವಹಿಸಿದ್ದರು.

​ವರದಿ: ಮಹೇಶ್ ಶರ್ಮಾ  

Leave a comment

Your email address will not be published. Required fields are marked *

eMedia Kannada  @2025. All Rights Reserved.