• Home  
  • ಜುಲೈ 28 ರಂದು ಸುರತ್ಕಲ್ ಬಂಟರ ಸಂಘದಿಂದ  ಆಟಿದ ಪೊರ್ಲು, ಅಭಿನಂದನಾ ಕಾರ್ಯಕ್ರಮ (July 28th Aatida Polru program at Surathkal Bunts sangha)
- fastival

ಜುಲೈ 28 ರಂದು ಸುರತ್ಕಲ್ ಬಂಟರ ಸಂಘದಿಂದ  ಆಟಿದ ಪೊರ್ಲು, ಅಭಿನಂದನಾ ಕಾರ್ಯಕ್ರಮ (July 28th Aatida Polru program at Surathkal Bunts sangha)

Share: ಜುಲೈ 28 ರಂದು ಸುರತ್ಕಲ್ ಬಂಟರ ಸಂಘದಿಂದ  ಆಟಿದ ಪೊರ್ಲು, ಅಭಿನಂದನಾ ಕಾರ್ಯಕ್ರಮ (Surathkal) ಸುರತ್ಕಲ್: ಬಂಟರ ಸಂಘ (ರಿ) ಸುರತ್ಕಲ್ ಮತ್ತು ಮಹಿಳಾ ವೇದಿಕೆ, ಬಂಟರ ಸಂಘ ಸುರತ್ಕಲ್ ಇದರ ಸಹಯೋಗದಲ್ಲಿ ಜುಲೈ 28 ರಂದು ಭಾನುವಾರ ಬೆಳಿಗ್ಗೆ 9.30 ಕ್ಕೆ ಸುರತ್ಕಲ್ ಬಂಟರ ಭವನದಲ್ಲಿ “ಆಟಿದ ಪೊರ್ಲು ಮತ್ತು ಅಭಿನಂದನಾ ಸಮಾರಂಭ” ನಡೆಯಲಿದೆ. ಕಾರ್ಯಕ್ರಮವನ್ನು ಸುರತ್ಕಲ್ ಬಂಟರ ಸಂಘದ ಕಟ್ಟಡ ಸಮಿತಿಯ ಚೇರ್ ಮ್ಯಾನ್ ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು ಉದ್ಘಾಟಿಸಲಿದ್ದಾರೆ.  ಸಂಘದ […]

ಜುಲೈ 28 ರಂದು ಸುರತ್ಕಲ್ ಬಂಟರ ಸಂಘದಿಂದ  ಆಟಿದ ಪೊರ್ಲು, ಅಭಿನಂದನಾ ಕಾರ್ಯಕ್ರಮ

(Surathkal) ಸುರತ್ಕಲ್: ಬಂಟರ ಸಂಘ (ರಿ) ಸುರತ್ಕಲ್ ಮತ್ತು ಮಹಿಳಾ ವೇದಿಕೆ, ಬಂಟರ ಸಂಘ ಸುರತ್ಕಲ್ ಇದರ ಸಹಯೋಗದಲ್ಲಿ ಜುಲೈ 28 ರಂದು ಭಾನುವಾರ ಬೆಳಿಗ್ಗೆ 9.30 ಕ್ಕೆ ಸುರತ್ಕಲ್ ಬಂಟರ ಭವನದಲ್ಲಿ “ಆಟಿದ ಪೊರ್ಲು ಮತ್ತು ಅಭಿನಂದನಾ ಸಮಾರಂಭ” ನಡೆಯಲಿದೆ.

ಕಾರ್ಯಕ್ರಮವನ್ನು ಸುರತ್ಕಲ್ ಬಂಟರ ಸಂಘದ ಕಟ್ಟಡ ಸಮಿತಿಯ ಚೇರ್ ಮ್ಯಾನ್ ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು ಉದ್ಘಾಟಿಸಲಿದ್ದಾರೆ.

 ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು ಅಧ್ಯಕ್ಷತೆ ವಹಿಸಲಿದ್ದಾರೆ.

 ಮುಖ್ಯ ಅತಿಥಿಯಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಮಾಜಿ ಅಧ್ಯಕ್ಷ ಎಮ್ ದೇವಾನಂದ ಶೆಟ್ಟಿ, ಅಭಿಮತ TV ಯ ಆಡಳಿತ ನಿರ್ದೇಶಕಿ ಡಾ. ಮಮತಾ ಪಿ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಸಚ್ಚಿದಾನಂದ ರೈ, ಉದ್ಯಮಿ ಪ್ರಸಾದ್ ಕುಮಾರ್ ಶೆಟ್ಟಿ ಭಾಗವಹಿಸಲಿದ್ದಾರೆ.

ಮಹಿಳಾ ವೇದಿಕೆಯ ಅಧ್ಯಕ್ಷೆ ಭವ್ಯ ಎ ಶೆಟ್ಟಿ ಉಪಸ್ಥಿತರಿರುವರು.

ಸಮಾರಂಭದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ  ಅವರಿಗೆ ಗೌರವ ಸನ್ಮಾನ ನಡೆಯಲಿದೆ.

  ವಿವಿಧ ಕ್ಷೇತ್ರಗಳಲ್ಲಿ ವಿಶ್ವನಾಥ ಶೆಟ್ಟಿ ಕಟ್ಲ ಬಾಳಿಕೆ (ಕೃಷಿ) ಉಮೇಶ್ ದೇವಾಡಿಗ (ಸಮಾಜ ಸೇವೆ), ಅನ್ನು ಪಡ್ರೆ (ಪೌರ ಕಾರ್ಮಿಕ), ಸೇಸಮ್ಮ ಸುಭಾಷಿತ ನಗರ (ನಾಟಿ ವೈದ್ಯೆ) ಅವರನ್ನು ಸನ್ಮಾನಿಸಲಾಗುವುದು.

 ಬೆಳಿಗ್ಗೆ ಮಕ್ಕಳಿಂದ ಸಂಘದ ಮಹಿಳಾ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ‌ ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ ತಿಳಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.