ಮುದರಂಗಡಿ: ಅನಧಿಕೃತ ಗೇಟ್ ಕಾಪು ತಹಶೀಲ್ದಾರರಿಂದ ತೆರವು

(Mudarangadi) ಮುದರಂಗಡಿ: ಮುದರಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಂತೂರು ಗ್ರಾಮದ ಶೇಡಿ ಎಂಬಲ್ಲಿ ಸಾರ್ವಜನಿಕ ಪೊರಂಬೋಕು ರಸ್ತೆಗೆ ವ್ಯಕ್ತಿಯೋರ್ವರು ಅಡ್ಡಲಾಗಿ ಅಳವಡಿಸಲಾದ ಅನಧಿಕೃತ ಗೇಟನ್ನು ದೂರಿನನ್ವಯ ಕಾಪು ತಹಶೀಲ್ದಾರ್ ಡಾ. ಪ್ರತಿಭಾ ಆರ್ ಮತ್ತು ಕಂದಾಯ ಅಧಿಕಾರಿಗಳು ತೆರವುಗೊಳಿಸಿದ ಘಟನೆ ಘಟಿಸಿದೆ.
ಹಿರಿಯ ನಾಗರಿಕರಾದ ಫಿಲೋಮಿನಾ ಮಥಾಯಾಸ್‌ರವರು ನೀಡಿದ ದೂರಿನ ಅನ್ವಯ ಕಾಪು ತಹಶೀಲ್ದಾರ್ ಪ್ರತಿಭಾ, ಗ್ರಾಮ ಆಡಳಿತ ಅಧಿಕಾರಿ ಅರುಣ್ ಕುಮಾರ್ ಬಿಕೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಮುತ್ತು ಇವರ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.
ಈ ಸಂದರ್ಭ ದೂರುದಾರರ ಪರ ನ್ಯಾಯವಾದಿ ಎಸ್.ಪಿ. ಬರ್ಬೋಜ, ಮುದರಂಗಡಿ ಗ್ರಾ.ಪಂ. ಅಧ್ಯಕ್ಷರಾದ ಕು. ನಮಿತಾ, ಸದಸ್ಯರಾದ ಡೇವಿಡ್ ಡಿಸೋಜ, ಶಿವರಾಮ ಭಂಡಾರಿ, ರವೀಂದ್ರ ಪ್ರಭು, ತಾಲೂಕು ಭೂಮಾಪಕರು, ದೂರುದಾರರಾದ ಶಫಿಲೋಮಿನಾ ಮಥಾಯಾಸ್, ಗ್ರಾಮ ಸಹಾಯಕ ದೇವದಾಸ್ ಪ್ರಭು, ಪೋಲಿಸ್ ಸಿಬ್ಬಂದಿ ರುದ್ರೇಶ್, ಸ್ಥಳೀಯರಾದ ಮಾರಿಯೋ ಬರ್ಬೋಜ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

