ಜು. 28: ಬಿಲ್ಲವ ಯುವ ವೇದಿಕೆ, ಮಹಿಳಾ ವೇದಿಕೆಯಿಂದ ‘ಆಟಿಡೊಂಜಿ ದಿನ‘ ಮತ್ತು ‘ಪ್ರತಿಭಾ ಪುರಸ್ಕಾರ‘
(Belman) ಬೆಳ್ಮಣ್: ಬಿಲ್ಲವ ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ಮುಂಡ್ಕೂರು-ಮುಲ್ಲಡ್ಕ-ಇನ್ನಾ ಇದರ ವತಿಯಿಂದ ಆಟಿ ತಿಂಗಳ ಆಚಾರ ವಿಚಾರಗಳ ವೈಶಿಷ್ಟತೆಯನ್ನು ನೆನಪಿಸುವಂತಹ “ಆಟಿಡೊಂಜಿ ದಿನ” ಹಾಗೂ “ಪ್ರತಿಭಾ ಪುರಸ್ಕಾರ” ಕಾರ್ಯಕ್ರಮ ಜು. 28ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ಮುಂಡ್ಕೂರು ಸಮುದಾಯ ಭವನದಲ್ಲಿ ನಡೆಯಲಿದೆ.
ಯುವ ವೇದಿಕೆಯ ಅಧ್ಯಕ್ಷ ಹರೀಶ್ ಸಚ್ಚರಿಪೇಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

