• Home  
  • ಮೂಲ್ಕಿ: ಜೋಕಟ್ಟೆ ಬಳಿ ಮನೆಕುಸಿದು ಮೃತ ಬಾಲಕನ ಮನೆಗೆ ಶಾಸಕ ಉಮಾನಾಥ ಕೋಟ್ಯಾನ್‌ ಭೇಟಿ (MLA Umanatha Kotian visit a boy who died faling down the house near jokette)
- Mansoon - PROBLEMS

ಮೂಲ್ಕಿ: ಜೋಕಟ್ಟೆ ಬಳಿ ಮನೆಕುಸಿದು ಮೃತ ಬಾಲಕನ ಮನೆಗೆ ಶಾಸಕ ಉಮಾನಾಥ ಕೋಟ್ಯಾನ್‌ ಭೇಟಿ (MLA Umanatha Kotian visit a boy who died faling down the house near jokette)

Share: ಮೂಲ್ಕಿ: ಜೋಕಟ್ಟೆ ಬಳಿ ಮನೆಕುಸಿದು ಮೃತ ಬಾಲಕನ ಮನೆಗೆ ಶಾಸಕ ಉಮಾನಾಥ ಕೋಟ್ಯಾನ್‌ ಭೇಟಿ ಗರಿಷ್ಠ ಪರಿಹಾರ ದೊರಕಿಸಲು ಪ್ರಯತ್ನ:  ಉಮಾನಾಥ್ ಕೋಟ್ಯಾನ್ (Moolki) ಮೂಲ್ಕಿ: ಬುಧವಾರ ರಾತ್ರಿ ಬೀಸಿದ  ಭಾರೀ ಗಾಳಿ ಹಾಗೂ ಮಳೆಗೆ ಸುರತ್ಕಲ್ ಸಮೀಪದ ಜೋಕಟ್ಟೆ ಬಳಿ ಮನೆಯೊಂದರ ಮೇಲೆ ತಡೆಗೋಡೆ ಕುಸಿದು ಬಿದ್ದು, ಮನೆಯಲ್ಲಿ ಮಲಗಿದ್ದ ಬಾಲಕ ಶೈಲೇಶ್ ಮೃತಪಟ್ಟಿದ್ದ.   ಮುಲ್ಕಿ ನಪಂ ವ್ಯಾಪ್ತಿಯ ಕೆಎಸ್ ರಾವ್ ನಗರದಲ್ಲಿರುವ ಆತನ ಮನೆಗೆ ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ […]

ಮೂಲ್ಕಿ: ಜೋಕಟ್ಟೆ ಬಳಿ ಮನೆಕುಸಿದು ಮೃತ ಬಾಲಕನ ಮನೆಗೆ ಶಾಸಕ ಉಮಾನಾಥ ಕೋಟ್ಯಾನ್‌ ಭೇಟಿ

ಗರಿಷ್ಠ ಪರಿಹಾರ ದೊರಕಿಸಲು ಪ್ರಯತ್ನ:  ಉಮಾನಾಥ್ ಕೋಟ್ಯಾನ್

(Moolki) ಮೂಲ್ಕಿ: ಬುಧವಾರ ರಾತ್ರಿ ಬೀಸಿದ  ಭಾರೀ ಗಾಳಿ ಹಾಗೂ ಮಳೆಗೆ ಸುರತ್ಕಲ್ ಸಮೀಪದ ಜೋಕಟ್ಟೆ ಬಳಿ ಮನೆಯೊಂದರ ಮೇಲೆ ತಡೆಗೋಡೆ ಕುಸಿದು ಬಿದ್ದು, ಮನೆಯಲ್ಲಿ ಮಲಗಿದ್ದ ಬಾಲಕ ಶೈಲೇಶ್ ಮೃತಪಟ್ಟಿದ್ದ.

  ಮುಲ್ಕಿ ನಪಂ ವ್ಯಾಪ್ತಿಯ ಕೆಎಸ್ ರಾವ್ ನಗರದಲ್ಲಿರುವ ಆತನ ಮನೆಗೆ ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭ ಅವರು ಮಾಧ್ಯಮದೊಂದಿಗೆ ಮಾತನಾಡಿ, ತೀರಾ ಹಿಂದುಳಿದವರಾದ ಎಸ್ ಟಿ ಕುಟುಂಬದ ಮೃತನ ಮನೆಯವರಿಗೆ ಸರಕಾರದಿಂದ 5 ಲಕ್ಷ ಪರಿಹಾರ ಧನ ಘೋಷಣೆಯಾಗಿದೆ. ಕುಸಿದ ಮನೆಯ ವಾರಿಸುದಾರರಾದ ಬಾಬುರವರಿಗೆ 1 ಲಕ್ಷ ಪರಿಹಾರ ಸಿಗಲಿದೆ. ಮುಂದಿನ ದಿನಗಳಲ್ಲಿ ಸರಕಾರದಿಂದ ಮತ್ತಷ್ಟು ಗರಿಷ್ಠ ಪರಿಹಾರ ದೊರಕಿಸಿಕೊಡಲು ಪ್ರಯತ್ನಿಸಲಿದ್ದೇನೆ ಎಂದರು.

ಈ ಸಂದರ್ಭ ಮೃತನ ಮನೆಯವರು ತಮಗೆ ಆಧಾರ್ ಕಾರ್ಡ್, ಚುನಾವಣಾ ಗುರುತು ಚೀಟಿ ಇನ್ನೂ ಸಿಗದ ಬಗ್ಗೆ ಪ್ರಸ್ತಾಪಿಸಿದಾಗ, ಮೂಲ್ಕಿ ತಹಶಿಲ್ದಾರ್ ಪ್ರದೀಪ್ ಮಾತನಾಡಿ, ಮನೆಯವರಿಗೆ ಸರಕಾರದ ಸೌಲಭ್ಯಗಳನ್ನು ಸಿಗುವ ವ್ಯವಸ್ಥೆ ಮಾಡಲಾಗುವುದು ಎಂದರು.

ಈ ಸಂದರ್ಭ ಮುಲ್ಕಿ ನ.ಪಂ.ಮಾಜಿ ಅಧ್ಯಕ್ಷ ಸುನಿಲ್ ಆಳ್ವ, ಸುಭಾಷ್ ಶೆಟ್ಟಿ, ಸದಸ್ಯರಾದ ಸತೀಶ್ ಅಂಚನ್, ಶೈಲೇಶ್ ಕುಮಾರ್, ಈರಣ್ಣ ಅರಳಗುಂಡಿ, ಬಿಜೆಪಿ ನಾಯಕರಾದ ರಂಗನಾಥ್ ಶೆಟ್ಟಿ, ಹರಿಶ್ಚಂದ್ರ, ಬಸವರಾಜ ಜಮಾದಾರ್, ಪ್ರಶಾಂತ್, ಶಶಿಕುಮಾರ್ ಸ್ಥಳೀಯರಾದ ಜೀವನ ಪೂಜಾರಿ ಕೊಲ್ನಾಡು ಗ್ರಾಮ ಲೆಕ್ಕಾಧಿಕಾರಿ ವಿಜೇತ ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.