ಜೂನ್ 26: ಕಾಪುವಿನಲ್ಲಿ ಮುಕ್ತ ಹಾಗೂ ಮಕ್ಕಳ ರಾಪಿಡ್ ಚೆಸ್ ಸ್ಪರ್ಧೆ
ಕಾಪುವಿನ ಶ್ರೀ ಹಳೇ ಮಾರಿಯಮ್ಮ ಸಭಾಭವನದಲ್ಲಿ ನಡೆಯಲಿರುವ ಚೆಸ್ ಸ್ಪರ್ಧೆ
(Kaup) ಕಾಪು: ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ಕಾಪು ವತಿಯಿಂದ 29 ನೇ ಶ್ರೀ ನಾರಾಯಣ ಗುರು ಟ್ರೋಫಿ ಚೆಸ್ ಸ್ಪರ್ಧೆ ಕಾಪುವಿನ ಶ್ರೀ ಹಳೇ ಮಾರಿಯಮ್ಮ ಸಭಾಭವನದಲ್ಲಿ ಜೂನ್ 26 ರಂದು ಜರುಗಲಿದೆ ಎಂದು ಸಂಸ್ಥೆಯ ಮುಖ್ಯಸ್ಥ ಸಾಕ್ಷಾತ್ ಯುಕೆ ಹೇಳಿದ್ದಾರೆ.
ಅವರು ಮಂಗಳವಾರ ಕಾಪು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮುಕ್ತ ವಿಭಾಗದಲ್ಲಿ 15 ನಗದು ಬಹುಮಾನಗಳು ಮೂರು ಟ್ರೋಫಿ ಹಾಗೂ ವಯೋಮಿತಿ 7, 9, 11, 13 ವರ್ಷ. ಮತ್ತು 17ರಲ್ಲಿ ಪ್ರತಿ ವಿಭಾಗದಲ್ಲಿ 20 ಟ್ರೋಫಿಯನ್ನು ಕೊಡಲಾಗುವುದು.
ಹಿರಿಯ ನಾಗರಿಕರಿಗೆ 750 ರೂ. ನಗದಿನೊಂದಿಗೆ ಪ್ರಥಮ ನಗದು ಹಾಗೂ ಒಟ್ಟು ಐದು ಟ್ರೋಫಿ, ಉತ್ತಮ ಮಹಿಳಾ ಆಟಗಾರರಿಗೆ 750 ಪ್ರಥಮ ನಗದು ಹಾಗೂ ಒಟ್ಟು 5 ಟ್ರೋಫಿ ಅತಿ ಕಿರಿಯ ಬಾಲಕ ಬಾಲಕಿಯರಿಗೆ ಎರಡು ಟ್ರೋಫಿ ವಯೋಮಿತಿ ಏಳರಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಳುಗಳಿಗೆ ಬಹುಮಾನವನ್ನು ಕೊಡಲಾಗುವುದು. ಒಟ್ಟಿಗೆ ನಗದು ರೂ. 25500 ರೂ. ಮತ್ತು ಟ್ರೋಫಿ 115 ಒಳಗೊಂಡಿರುತ್ತದೆ
ಜೂನ್ 26ರಂದು ಬೆಳಗ್ಗೆ ಉದ್ಘಾಟನಾ ಸಮಾರಂಭದಲ್ಲಿ ಅಪಿಲಿಯನ್ಸ್ ಟೆಕ್ನಾಲಜಿ ಮಂಗಳೂರು ಸಂಸ್ಥಾಪಕ ಅವಿನಾಶ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.
ನಿವೃತ್ತ ಉಡುಪಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸೀತಾನದಿ ವಿಠಲ ಶೆಟ್ಟಿ ಹೆಬ್ರಿ ದೀಪ ಪ್ರಜ್ವಲನೆ ಮಾಡಲಿದ್ದಾರೆ.
ಎಸ್ ಎನ್ ಜಿ ಸ್ಪೋರ್ಟ್ಸ್ ಅಂಡ್ ಎಜುಕೇಶನ್ ಟ್ರಸ್ಟ್ ಕಾಪು ಅಧ್ಯಕ್ಷ ಉಮಾನಾಥ್ ಕಾಪು, ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಶನ್ ಕಾರ್ಯದರ್ಶಿ ಸಿದ್ದಕೃಷ್ಣ, ಆಸರೆ ಚಾರಿ ಟೇಬಲ್ ಟ್ರಸ್ಟ್ ಪಾಂಗಳ ಇದರ ಸಂಸ್ಥಾಪಕ ಪೆನ್ವಿಲ್ ಸೋನ್ಸ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ
ಜೂನ್ 26 ರಂದು ಸಂಜೆ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಎಸ್ ಎನ್ ಜಿ ಸ್ಪೋರ್ಟ್ಸ್ & ಎಜುಕೇಶನ್ ಟ್ರಸ್ಟ್ ಕಾಪು ಅಧ್ಯಕ್ಷ ಉಮಾನಾಥ ಕಾಪು, ಉದ್ಯಮಿ ಪ್ರಭಾಕರ ಪೂಜಾರಿಯವರು ಬಹುಮಾನವನ್ನು ವಿತರಿಸಲಿದ್ದಾರೆ.
ಶ್ರೀ ಸಿದ್ಧಿ ವಿನಾಯಕ ಚೆಸ್ ಅಕಾಡೆಮಿ ಕುಂದಾಪುರ ಸಂಸ್ಥಾಪಕ ಬಾಬು ಪೂಜಾರಿ, ಸುನಿಲ್ ಪೂಜಾರಿ ಎಸ್ ಬಿ ಐ, ನಾಗೇಶ್ ಕಾರಂತ್ ಪಾಂಗಳ ಉಪಸ್ಥಿತಿಯಿರುವರು.
ಪತ್ರಿಕಾಗೋಷ್ಠಿಯಲ್ಲಿ ಉಮಾನಾಥ ಕಾಪು, ಲೋಕೇಶ್ ಬೆಲ್ಚಡ ಉಪಸ್ಥಿತರಿದ್ದರು.

