• Home  
  • ಬಂಟಕಲ್ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳಿಂದ  ಡಿಜಿಟಲ್ ಆರೋಗ್ಯ ವ್ಯವಸ್ಥೆ (Bantakal Engineering college Students Develop AI-Driven Healthcare Platform)
- ಶಾಲಾ ಕಾಲೇಜು

ಬಂಟಕಲ್ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳಿಂದ  ಡಿಜಿಟಲ್ ಆರೋಗ್ಯ ವ್ಯವಸ್ಥೆ (Bantakal Engineering college Students Develop AI-Driven Healthcare Platform)

Share:  ಬಂಟಕಲ್ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳಿಂದ  ಡಿಜಿಟಲ್ ಆರೋಗ್ಯ ವ್ಯವಸ್ಥೆ ಕೃತಕ  ಬುದ್ಧಿಮತ್ತೆ ಮತ್ತು ಯಂತ್ರಕಲಿಕಾ ವಿಭಾಗದ  ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ಸಾಧನೆ  (Bantakal) ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಕೃತಕ ಬುದ್ಧಿಮತ್ತೆ ಮತ್ತು ಯಂತ್ರಕಲಿಕಾ ವಿಭಾಗದ  ಅಂತಿಮ ವರ್ಷದ ವಿದ್ಯಾರ್ಥಿಗಳಾದ ನಂದೀಶ್ ಪಿ. ಬಿ, ಶ್ರೇಯಸ್ ಹಾಗೂ ವಿನಾಯಕ ಎಂ ಎನ್  ಇವರು ವಿಭಾಗದ ಮುಖ್ಯಸ್ಥರಾದ ಡಾ. ವಿಘೇಶ್ ಶೆಣೈ ಇವರ ಮಾರ್ಗದರ್ಶನದಲ್ಲಿ  ಗ್ರಾಮೀಣ ಜನರ ಆರೋಗ್ಯ ಸುಧಾರಣೆಗಾಗಿ  ಡಿಜಿಟಲ್ ಆರೋಗ್ಯ ವ್ಯವಸ್ಥೆಯನ್ನು […]

 (Bantakal) ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಕೃತಕ ಬುದ್ಧಿಮತ್ತೆ ಮತ್ತು ಯಂತ್ರಕಲಿಕಾ ವಿಭಾಗದ  ಅಂತಿಮ ವರ್ಷದ ವಿದ್ಯಾರ್ಥಿಗಳಾದ ನಂದೀಶ್ ಪಿ. ಬಿ, ಶ್ರೇಯಸ್ ಹಾಗೂ ವಿನಾಯಕ ಎಂ ಎನ್  ಇವರು ವಿಭಾಗದ ಮುಖ್ಯಸ್ಥರಾದ ಡಾ. ವಿಘೇಶ್ ಶೆಣೈ ಇವರ ಮಾರ್ಗದರ್ಶನದಲ್ಲಿ  ಗ್ರಾಮೀಣ ಜನರ ಆರೋಗ್ಯ ಸುಧಾರಣೆಗಾಗಿ  ಡಿಜಿಟಲ್ ಆರೋಗ್ಯ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿದ್ದಾರೆ.

    ಈ ವ್ಯವಸ್ಥೆಯು ವೈದ್ಯರ ಭೇಟಿಗಾಗಿ ಸಮಯ ನಿಗದಿಪಡಿಸುವಿಕೆ, ಡಿಜಿಟಲ್ ಔಷಧ ಚೀಟಿಗಳು, ಔಷಧಗಳ ಆನ್ ಲೈನ್ ಆರ್ಡರ್ ವ್ಯವಸ್ಥೆ ಹಾಗೂ ರಕ್ತದಾನಿಗಳ ಸಹಾಯವನ್ನು ಒಂದೇ ವೇದಿಕೆಯಲ್ಲಿ ಒದಗಿಸುತ್ತದೆ.

   ಇದರಲ್ಲಿರುವ ಎ ಐ ಆಧಾರಿತ ಶಿಫಾರಸು ವ್ಯವಸ್ಥೆಯು ರೋಗಿಗಳ ಅಗತ್ಯತೆ, ಸ್ಥಳ, ವೆಚ್ಚ ಭರಿಸುವ ಸಾಮರ್ಥ್ಯ ಹಾಗೂ ಆರೋಗ್ಯ ಸೇವಾ ಪೂರೈಕೆದಾರರ ವಿಶ್ವಾಸಾರ್ಹತೆಯನ್ನು ಪರಿಗಣಿಸಿ ಸೂಕ್ತ ಆಸ್ಪತ್ರೆಗಳು ಮತ್ತು ಆರೋಗ್ಯ ಸೇವೆಗಳ ಕುರಿತು ಮಾರ್ಗದರ್ಶನ ನೀಡುತ್ತದೆ.

   ಇದು ತುರ್ತು ರಕ್ತದ ಅಗತ್ಯತೆಗಳಿಗೆ ಆದ್ಯತೆ ನೀಡುವುದರೊಂದಿಗೆ ಸ್ವಯಂಚಾಲಿತ ಹೊಂದಾಣಿಕೆ ತಂತ್ರಜ್ಞಾನದ ಮೂಲಕ ಸೂಕ್ತ ರಕ್ತದಾನಿಗಳನ್ನು ಗುರುತಿಸಿ ಸಂಪರ್ಕಿಸುತ್ತದೆ.

  ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ, ಶಿಕ್ಷಕ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.