• Home  
  • ಜೇಸಿಐ ಕಾಪು ಘಟಕ : ಶಾಶ್ವತ ಯೋಜನೆಯಾಗಿ ಕಾಪು ಪೊಲೀಸ್ ಠಾಣೆಗೆ 2 ಬ್ಯಾರಿಕೇಡ್ ಹಸ್ತಾಂತರ (JCI Kaup Unit: 2 barricades handed over to Kaup Police Station as a permanent project)
- ಸಂಘ, ಸಂಸ್ಥೆಗಳು - ಸನ್ಮಾನ, ಅಭಿನಂದನೆ - ಸಹಾಯ ಹಸ್ತ

ಜೇಸಿಐ ಕಾಪು ಘಟಕ : ಶಾಶ್ವತ ಯೋಜನೆಯಾಗಿ ಕಾಪು ಪೊಲೀಸ್ ಠಾಣೆಗೆ 2 ಬ್ಯಾರಿಕೇಡ್ ಹಸ್ತಾಂತರ (JCI Kaup Unit: 2 barricades handed over to Kaup Police Station as a permanent project)

Share: ಜೇಸಿಐ ಕಾಪು ಘಟಕ : ಶಾಶ್ವತ ಯೋಜನೆಯಾಗಿ ಕಾಪು ಪೊಲೀಸ್ ಠಾಣೆಗೆ 2 ಬ್ಯಾರಿಕೇಡ್ ಹಸ್ತಾಂತರ    ವಲಯಾಧ್ಯಕ್ಷರ ಅಧಿಕೃತ ಭೇಟಿ ಹಾಗೂ “ಆಟಿದ ತಮ್ಮನ” ತುಳು ಪಾರಂಪರಿಕ ಆಚರಣೆ (Kaup) ಕಾಪು: ಜೇಸಿಐ ವಲಯ 15ರ ಘಟಕಗಳಲ್ಲಿ ಒಂದಾಗಿರುವ ಜೇಸಿಐ ಕಾಪು ಘಟಕದ ವಲಯಾಧ್ಯಕ್ಷರ ಅಧಿಕೃತ ಭೇಟಿಯ ಅಂಗವಾಗಿ, ಜೇಸಿಐ ಕಾಪು ಘಟಕ ಹಾಗೂ ಗ್ರೀನ್‌ವುಡ್ ರೆಸಾರ್ಟ್ ವತಿಯಿಂದ ವಲಯಾಧ್ಯಕ್ಷ  ಸಂತೋಷ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಕಾಪು ಪೊಲೀಸ್ ಠಾಣೆಗೆ 2 ಬ್ಯಾರಿಕೇಡ್‌ಗಳನ್ನು ಹಸ್ತಾಂತರಿಸಲಾಯಿತು. […]

(Kaup) ಕಾಪು: ಜೇಸಿಐ ವಲಯ 15ರ ಘಟಕಗಳಲ್ಲಿ ಒಂದಾಗಿರುವ ಜೇಸಿಐ ಕಾಪು ಘಟಕದ ವಲಯಾಧ್ಯಕ್ಷರ ಅಧಿಕೃತ ಭೇಟಿಯ ಅಂಗವಾಗಿ, ಜೇಸಿಐ ಕಾಪು ಘಟಕ ಹಾಗೂ ಗ್ರೀನ್‌ವುಡ್ ರೆಸಾರ್ಟ್ ವತಿಯಿಂದ ವಲಯಾಧ್ಯಕ್ಷ  ಸಂತೋಷ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಕಾಪು ಪೊಲೀಸ್ ಠಾಣೆಗೆ 2 ಬ್ಯಾರಿಕೇಡ್‌ಗಳನ್ನು ಹಸ್ತಾಂತರಿಸಲಾಯಿತು.

  ಕಾಪು ಪೊಲೀಸ್ ತನಿಖಾಧಿಕಾರಿ ಶುಭಕರ್ ಮತ್ತು ಸಹಾಯಕ ಪೊಲೀಸ್ ಉಪ ನಿರೀಕ್ಷಕ ರವೀಶ್ ಹೊಳ್ಳ ಅವರು ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.

 ವಲಯಧ್ಯಕ್ಷ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

 ಅವರು ಮಾತನಾಡಿ, ಜೇಸಿಐ ಕಾಪು ಘಟಕದ ಕಾರ್ಯವೈಖರಿಯನ್ನು ಶ್ಲಾಘಿಸಿದ ಅವರು, ಈ ಹಿಂದೆ ಕಾಪು ಘಟಕದ ಆತಿಥ್ಯದಲ್ಲಿ ನಡೆದ ಮಧ್ಯಂತರ ವಲಯ ಸಮ್ಮೇಳನದ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದರು.

  ಮುಂದಿನ ದಿನಗಳಲ್ಲಿಯೂ ಘಟಕವು ಇನ್ನಷ್ಟು ಉತ್ತಮ ಹಾಗೂ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವಂತೆ ಪ್ರೇರೇಪಿಸಿದರು.

   ತುಳುನಾಡಿನ ಸಾಂಪ್ರದಾಯಿಕ ‘ಆಟಿದ ತಮ್ಮನ’ ಆಚರಣೆಯನ್ನು ವಿಶಿಷ್ಟವಾಗಿ ನೆರವೇರಿಸಲಾಯಿತು. ಅತಿಥಿಗಳನ್ನು ತುಳುನಾಡಿನ ಸಾಂಪ್ರದಾಯಿಕ ಶಾಲು ಹೊದಿಸಿ, ವೀಳ್ಯದೆಲೆ-ಅಡಿಕೆ ನೀಡಿ ಆತ್ಮೀಯವಾಗಿ ಸ್ವಾಗತಿಸಲಾಯಿತು.

  ಪೂರ್ವ ವಲಯ ಅಧ್ಯಕ್ಷ ರಾಕೇಶ್ ಕುಂಜೂರುರವರು ತುಳುವರ ಆಟಿ ತಿಂಗಳು ಹಾಗೂ ಅದರ ವಿಶೇಷ ಆಚರಣೆಗಳ ಕುರಿತು ಮಾಹಿತಿ ನೀಡಿದರು.

 ಈ ಸಂದರ್ಭ ವಲಯಾಧ್ಯಕ್ಷರಾಗಿ ಭೇಟಿ ನೀಡಿದ  ಸಂತೋಷ್ ಶೆಟ್ಟಿ ಮತ್ತು ಜೇಸಿಐ ಆಯೋಜಿಸುವ ಮೌನ ಸಾಧಕರ ಸಾಧನೆಯ ಸನ್ಮಾನಕ್ಕಾಗಿ ರಾಷ್ಟ್ರಮಟ್ಟದಲ್ಲಿ ಕ್ರೀಡಾ ಸಾಧನೆ ಮಾಡಿರುವ ಗಾಯನ್ ಸಿ. ಸುವರ್ಣ ಹಾಗೂ “ಆಟಿದ ತಮ್ಮನ” ಅಂಗವಾಗಿ ತುಳು ಲಿಪಿ ಕಲಿಕೆಗೆ ವಿಶೇಷ ಕೊಡುಗೆ ನೀಡಿರುವ ಅಕ್ಷತಾ ಜ್ಞಾನೇಶ್ ಕುಲಾಲ್ ಅವರನ್ನು ಸನ್ಮಾನಿಸಲಾಯಿತು.

  ಘಟಕದ ಸದಸ್ಯರು ತಮ್ಮ ಮನೆಗಳಲ್ಲಿ ಸಿದ್ಧಪಡಿಸಿ ತಂದಿದ್ದ ವಿವಿಧ ಬಗೆಯ ಸಾಂಪ್ರದಾಯಿಕ ತುಳುನಾಡಿನ ಖಾದ್ಯಗಳನ್ನು ಅತಿಥಿಗಳಿಗೆ ಉಣಬಡಿಸಲಾಯಿತು.

  ಕಾರ್ಯಕ್ರಮದಲ್ಲಿ ವಲಯ ಉಪಾಧ್ಯಕ್ಷ ಅರುಣ್ ಮಾಂಜ, ವಲಯ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಲೂಯಿಸ್ ಮಸ್ಕರೇನಸ್, ನಿಕಟಪೂರ್ವ ಅಧ್ಯಕ್ಷೆ ಅನಿತಾ ಹೆಗ್ಡೆ, ಕಾರ್ಯದರ್ಶಿ ಶೃತಿ ಶೆಟ್ಟಿ, ಲೇಡಿ ಜೆಸಿ ಸಂಯೋಜಕಿ ಕವಿತಾ ಕುಂದರ್, ‘ಆಟಿದ ತಮ್ಮನ’ನಿರ್ದೇಶಕಿ ಸುಖಲಾಕ್ಷಿ ಬಂಗೇರ, ಸಹ ನಿರ್ದೇಶಕಿ ಸತ್ಯವತಿ ಬಂಗೇರ, ಜೂನಿಯರ್ ಜೆಸಿ ಅಧ್ಯಕ್ಷ ಮನ್ವಿತ್ ಬಂಗೇರ ಸೇರಿದಂತೆ ಜೇಸಿಐ ಕಾಪು ಘಟಕದ ಪದಾಧಿಕಾರಿಗಳು, ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.