• Home  
  • ಜೇಸಿಐ ವಲಯ ತರಬೇತುದಾರರಾಗಿ ಮನು ಶೆಟ್ಟಿ ಇನ್ನಾ ಆಯ್ಕೆ(Manu Shetty Inna selected as JCI zonal coach)
- ಸಂಘ, ಸಂಸ್ಥೆಗಳು - ಸನ್ಮಾನ, ಅಭಿನಂದನೆ

ಜೇಸಿಐ ವಲಯ ತರಬೇತುದಾರರಾಗಿ ಮನು ಶೆಟ್ಟಿ ಇನ್ನಾ ಆಯ್ಕೆ(Manu Shetty Inna selected as JCI zonal coach)

Share: ಜೇಸಿಐ ವಲಯ ತರಬೇತುದಾರರಾಗಿ ಮನು ಶೆಟ್ಟಿ ಇನ್ನಾ ಆಯ್ಕೆ.  ವಲಯ ಹದಿನೈದರ ಅತಿ ಕಿರಿಯ ವಯಸ್ಸಿನ ತರಬೇತುದಾರೆ. (Kaup) ಕಾಪು: ಇತ್ತೀಚೆಗೆ ಕಾಪುವಿನಲ್ಲಿ ನಡೆದ ಜೆಸಿಐ ಭಾರತದ ವಲಯ ತರಬೇತುದಾರರ ಮೂರು ದಿನಗಳ  ಕಾರ್ಯಾಗಾರದಲ್ಲಿ ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ತುಮಕೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮೊದಲಾದ 7 ಜಿಲ್ಲೆಗಳನ್ನೊಳಗೊಂಡ 3 ವಲಯಗಳ ಸುಮಾರು 35 ಜೇಸಿ ಸ್ಪರ್ಧಿಗಳು ಭಾಗವಹಿಸಿದ್ದು, ಜೇಸಿಐ ಪಡುಬಿದ್ರಿಯ ಸದಸ್ಯೆ ಮನು ಶೆಟ್ಟಿ ಇನ್ನಾರವರು ಜೇಸಿಐ ಭಾರತದ ವಲಯ ತರಬೇತುದಾರರಾಗಿ […]

(Kaup) ಕಾಪು: ಇತ್ತೀಚೆಗೆ ಕಾಪುವಿನಲ್ಲಿ ನಡೆದ ಜೆಸಿಐ ಭಾರತದ ವಲಯ ತರಬೇತುದಾರರ ಮೂರು ದಿನಗಳ  ಕಾರ್ಯಾಗಾರದಲ್ಲಿ ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ತುಮಕೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮೊದಲಾದ 7 ಜಿಲ್ಲೆಗಳನ್ನೊಳಗೊಂಡ 3 ವಲಯಗಳ ಸುಮಾರು 35 ಜೇಸಿ ಸ್ಪರ್ಧಿಗಳು ಭಾಗವಹಿಸಿದ್ದು, ಜೇಸಿಐ ಪಡುಬಿದ್ರಿಯ ಸದಸ್ಯೆ ಮನು ಶೆಟ್ಟಿ ಇನ್ನಾರವರು ಜೇಸಿಐ ಭಾರತದ ವಲಯ ತರಬೇತುದಾರರಾಗಿ ಆಯ್ಕೆಯಾಗಿರುತ್ತಾರೆ.

  ಜೇಸಿಐ ಭಾರತದ ವಲಯ 15 ರ ಪೂರ್ವ ವಲಯಾದ್ಯಕ್ಷ ದಿ. ಇನ್ನಾ ಉದಯ ಕುಮಾರ್ ಶೆಟ್ಟಿ ಮತ್ತು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ರೇಶ್ಮಾ ಉದಯ ಶೆಟ್ಟಿಯವರ ಪುತ್ರಿ.    

  ಮನು ಶೆಟ್ಟಿಯವರು ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾನಿಲಯದಲ್ಲಿ ದ್ವಿತೀಯ ವರ್ಷದ ಬಿಎ ವ್ಯಾಸಂಗ ಮಾಡುತ್ತಿದ್ದಾರೆ.

 ಮನು ಶೆಟ್ಟಿಯವರು ವಲಯ ಹದಿನೈದರ ಅತಿ ಕಿರಿಯ ವಯಸ್ಸಿನ ತರಬೇತುದಾರರೆನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.