• Home  
  • ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಡೇವಿಡ್ ಡಿಸೋಜರವರ ಪಿಲಾರು ಚರ್ಚ್ ಬಳಿ ಅಂತಿಮ ಕ್ರಿಯೆ (Funeral held near Pilar Church for David D’Souza, who was shot dead by assailants)
- ಅಪರಾಧ

ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಡೇವಿಡ್ ಡಿಸೋಜರವರ ಪಿಲಾರು ಚರ್ಚ್ ಬಳಿ ಅಂತಿಮ ಕ್ರಿಯೆ (Funeral held near Pilar Church for David D’Souza, who was shot dead by assailants)

Share: ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಡೇವಿಡ್ ಡಿಸೋಜರವರ ಪಿಲಾರು ಚರ್ಚ್ ಬಳಿ ಅಂತಿಮ ಕ್ರಿಯೆ    ಕಾಪು ರಾಜೀವ ಭವನದಲ್ಲಿ ಸಾವಿರಾರು ಜನರಿಂದ ಅಂತಿಮ ದರ್ಶನ (Kaup) ಕಾಪು : ದುಷ್ಕರ್ಮಿಗಳ ಗುಂಡಿಗೆ ಬಲಿಯಾದ   ಕಾಂಗ್ರೆಸ್ ಮುಖಂಡ ಡೇವಿಡ್ ಡಿಸೋಜರವರ ಮೃತದೇಹದ ಅಂತಿಮ ದರ್ಶನವು ಕಾಪು ರಾಜೀವ ಭವನದಲ್ಲಿ ಭಾನುವೃ ಬೆಳಿಗ್ಗೆ ಜರಗಿತು. ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಂತಿಮ ದರ್ಶನ ಪಡೆದರು.   ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಡೇವಿಡ್ […]

(Kaup) ಕಾಪು : ದುಷ್ಕರ್ಮಿಗಳ ಗುಂಡಿಗೆ ಬಲಿಯಾದ   ಕಾಂಗ್ರೆಸ್ ಮುಖಂಡ ಡೇವಿಡ್ ಡಿಸೋಜರವರ ಮೃತದೇಹದ ಅಂತಿಮ ದರ್ಶನವು ಕಾಪು ರಾಜೀವ ಭವನದಲ್ಲಿ ಭಾನುವೃ ಬೆಳಿಗ್ಗೆ ಜರಗಿತು.

ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಂತಿಮ ದರ್ಶನ ಪಡೆದರು.

  ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಡೇವಿಡ್ ರವರು ಮುದರಂಗಡಿ ಗ್ರಾಮೀಣ ಕಾಂಗ್ರೆಸ್ ನ ಅಧ್ಯಕ್ಷರಾಗಿದ್ದರು. 3 ಬಾರಿ ಮುದರಂಗಡಿ ಪಂಚಾಯತ್ ಅಧ್ಯಕ್ಷರಾಗಿ ಅಭಿವೃದ್ಧಿ ಮಾಡಿದ್ದಾರೆ. ಈಗಾಗಲೇ ಮೂವರ ಬಂಧನವಾಗಿದೆ. ಪೋಲಿಸರು ತನಿಖೆ ಚುರುಕುಗೊಳಿಸಿದ್ದು, ಸ್ಥಳೀಯರ ಕೈವಾಡದ ಶಂಕೆಯು ಕಾಣುತ್ತಿದೆ. ಸದ್ಯದಲ್ಲಿಯೇ ಸಮಗ್ರ ಮಾಹಿತಿ ಲಭಿಸಲಿದೆ ಎಂದರು.

 ವಿಧಾನ ಪರಿಷತ್ತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಡೇವಿಡ್ ನನ್ನ ಆತ್ಮೀಯ ಗೆಳೆಯನಾಗಿದ್ದ. ತನ್ನ ವ್ಯವಹಾರದ ಜೊತೆಗೆ ಸಮಾಜ ಸೇವೆಯಲ್ಲಿಯೂ ತೊಡಗಿದ್ದರು. ಸರ್ವ ಧರ್ಮೀಯರೂ ಅವರನ್ನು ಗೌರವದಿಂದ ಕಾಣುತ್ತಿದ್ದರು. ಡೇವಿಡ್ ಸಾವು ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

  ಕಾಪು ರಾಜೀವ ಭವನದಲ್ಲಿ ಮೃತ ದೇಹದ ಅಂತಿಮ ದರ್ಶನದ ಬಳಿಕ ಮೃತದೇಹವನ್ನು ಮುದರಂಗಡಿ ಪಂಚಾಯತ್, ಪಿಲಾರು ಕುಂಜಿಗುಡ್ಡೆ ಕಾಲೋನಿ, ಬಳಿಕ ಅವರ ಮನೆಗೆ ಸಾಗಿಸಿ ಆ ಬಳಿಕ ಪಿಲಾರು ಚರ್ಚ್ ನಲ್ಲಿ ಸಾರ್ವಜನಿಕ ವೀಕ್ಷಣೆಯ ಬಳಿಕ ದಫನ ಕ್ರಿಯೆ ನಡೆಯಿತು.

ಈ ಸಂದರ್ಭ ಉಡುಪಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ವಿಜಯ ಕೊಡವೂರು, ಕಾಪು ಕಾಂಗ್ರೆಸ್‌ ಅಧ್ಯಕ್ಷ ಸುಕುಮಾರ್‌, ವಿವಿಧ ಗ್ರಾಮ ಸಮಿತಿ ಅಧ್ಯಕ್ಷರುಗಳು, ಕಾಂಗ್ರೆಸ್‌  ಕಾರ್ಯಕರ್ತರು, ಡೇವಿಡ್ ರವರ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.