• Home  
  • ಜ. 17: ಅಡ್ವೆ ನಂದಿಕೂರು ಹೊನಲು ಬೆಳಕಿನ ಕೋಟಿ ಚೆನ್ನಯ ಜೋಡುಕರೆ ಕಂಬಳ (Jan. 17  Adve Nandikur flood Light  Koti – Chennaya Jodukare Kambala)
- ಕ್ರೀಡೆ

ಜ. 17: ಅಡ್ವೆ ನಂದಿಕೂರು ಹೊನಲು ಬೆಳಕಿನ ಕೋಟಿ ಚೆನ್ನಯ ಜೋಡುಕರೆ ಕಂಬಳ (Jan. 17  Adve Nandikur flood Light  Koti – Chennaya Jodukare Kambala)

Share: ಜ. 17: ಅಡ್ವೆ ನಂದಿಕೂರು ಹೊನಲು ಬೆಳಕಿನ ಕೋಟಿ ಚೆನ್ನಯ ಜೋಡುಕರೆ ಕಂಬಳ ಗೌರವಾಧ್ಯಕ್ಷ, ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಮಾಹಿತಿ  (Padubidri) ಪಡುಬಿದ್ರಿ : ಅಡ್ವೆ ನಂದಿಕೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿಯಿಂದ  ನಡೆಯಲಿರುವ 33ನೇ ವರ್ಷದ ಹೊನಲು ಬೆಳಕಿನ ಕಂಬಳೋತ್ಸವ ಜನವರಿ 17 ರಂದು ನಡೆಯಲಿದೆ ಎಂದುಕಂಬಳ ಸಮಿತಿಯ ಗೌರವಾಧ್ಯಕ್ಷ, ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಮಾಹಿತಿ ನೀಡಿದರು.    ಅವರು ನಂದಿಕೂರು ಸಮಯ್‌ ಹೊಟೇಲು ಸಭಾಭವನದಲ್ಲಿ ನಡೆದ […]

 (Padubidri) ಪಡುಬಿದ್ರಿ : ಅಡ್ವೆ ನಂದಿಕೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿಯಿಂದ  ನಡೆಯಲಿರುವ 33ನೇ ವರ್ಷದ ಹೊನಲು ಬೆಳಕಿನ ಕಂಬಳೋತ್ಸವ ಜನವರಿ 17 ರಂದು ನಡೆಯಲಿದೆ ಎಂದುಕಂಬಳ ಸಮಿತಿಯ ಗೌರವಾಧ್ಯಕ್ಷ, ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಮಾಹಿತಿ ನೀಡಿದರು.

   ಅವರು ನಂದಿಕೂರು ಸಮಯ್‌ ಹೊಟೇಲು ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

   ಜ. 17 ಶನಿವಾರ ಬೆಳಿಗ್ಗೆ ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಳದ ಆಡಳಿತ ಮೊಕ್ತೇಸರರಾದ ಮಧ್ವರಾಯ ಭಟ್, ಎಲ್ಲೂರು ಗುತ್ತು ವೈ. ಪ್ರಪುಲ್ಲ ಶೆಟ್ಟಿ, ಅಡ್ವೆ ಶ್ರೀ ಮಹಾಗಣಪತಿ ದೇವಳದ ಜನ್ನಿ ರವಿಶಂಕರ ಭಟ್, ಅಡ್ವೆ ಶ್ರೀ ಬ್ರಹ್ಮಬೈದರ್ಕಳ ಸೇವಾ ಸಮಿತಿ ಅಧ್ಯಕ್ಷರಾದ ಸುಂದರ್ ಯು ಸುವರ್ಣ ರವರು ಕಂಬಳವನ್ನು ಉದ್ಘಾಟಿಸಲಿದ್ದಾರೆ. ಕಂಬಳದ ನಿಯಮಾವಳಿಯಂತೆ ಕಂಬಳವು ಜರಗಲಿದೆ ಎಂದು  ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.

   ಕಾರ್ಯಾಧ್ಯಕ್ಷರಾದ ಕೊಂಡೆಟ್ಟು ಸುಕುಮಾರ್ ಮಾತನಾಡಿ, ಅಚ್ಚುಕಟ್ಟಾಗಿ ಮಾಡಿಕೊಂಡು ಬಂದ ಕಂಬಳ ಸರಕಾರದ ಪ್ರೋತ್ಸಾಹವಿದೆ. 150 ಕ್ಕೂ ಅಧಿಕ ಸೀನಿಯರ್ ಜೂನಿಯರ್ ವಿಭಾಗದಲ್ಲಿ ಕೋಣಗಳು ಭಾಗವಹಿಸಲಿದೆ ಎಂದರು.

   ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕ್ಯಾ. ಬ್ರಿಜೇಶ್ ಚೌಟ, ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್, ಶಾಸಕರುಗಳಾದ ಉಮಾನಾಥ ಕೋಟ್ಯಾನ್, ಯಶಪಾಲ್ ಸುವರ್ಣ, ವಿಧಾನ ಪರಿಷತ್‌ ಸದಸ್ಯರುಗಳಾದ ಮಂಜುನಾಥ ಭಂಡಾರಿ, ಕಿಶೋರ್ ಕುಮಾರ್‌, ಐವನ್ ಡಿಸೋಜ, ಡಾ. ಧನಂಜಯ ಸರ್ಜಿ, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಅದಾನಿ ಸಮೂಹ ಸಂಸ್ಥೆಯ ಜಂಟಿ ಅಧ್ಯಕ್ಷ ಕಿಶೋರ್‌ ಆಳ್ವಾ ಮತ್ತಿತರ ರಾಜಕೀಯ, ಸಾಮಾಜಿಕ, ಧಾರ್ಮಿಕ ನಾಯಕರು ಭಾಗಹಿಸಲಿದ್ದಾರೆ.

  ಸುದ್ದಿಗೋಷ್ಠಿಯಲ್ಲಿ ಕಂಬಳ ಸಮಿತಿಯ ಅಧ್ಯಕ್ಷರಾದ ಅಡ್ವೆ ಮೂಡ್ರಗುತ್ತು ಸುರೇಶ್ ಶೆಟ್ಟಿ, ಶೆಟ್ಟಿಬಾಲ್ ಲಕ್ಷ್ಮಣ ಶೆಟ್ಟಿ, ಕಾರ್ಯದರ್ಶಿ ನವೀನ್ ಸುವರ್ಣ ಅಡ್ವೆ ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.