• Home  
  • ಜ. 18-19 : ಹೆಜಮಾಡಿ ನೂರುಲ್ ಹುದಾ ಮಸ್ಜಿದ್ ನಅತೇ ಶರೀಫ್, ಮತಪ್ರಭಾಷಣ (Jan. 18-19 Hejmadi Nurul Huda Masjid Naat Sharif, sermon)  
- ಧಾರ್ಮಿಕ

ಜ. 18-19 : ಹೆಜಮಾಡಿ ನೂರುಲ್ ಹುದಾ ಮಸ್ಜಿದ್ ನಅತೇ ಶರೀಫ್, ಮತಪ್ರಭಾಷಣ (Jan. 18-19 Hejmadi Nurul Huda Masjid Naat Sharif, sermon)  

Share: ಜ. 18-19 : ಹೆಜಮಾಡಿ ನೂರುಲ್ ಹುದಾ ಮಸ್ಜಿದ್ ನಅತೇ ಶರೀಫ್, ಮತಪ್ರಭಾಷಣ   ಬೇಂಗಳೆ ಮಸ್ಜಿದ್ ವಠಾರದಲ್ಲಿ ನಡೆಯಲಿರುವ ಕಾರ್ಯಕ್ರಮ  (Hejamady) ಹೆಜಮಾಡಿ: ಕಣ್ಣಂಗಾರು ಕೇಂದ್ರ ಜುಮಾ ಮಸ್ಜಿದ್ ಇದರ ಅಧೀನದಲ್ಲಿರುವ ನೂರುಲ್ ಹುದಾ ಮಸ್ಜಿದ್, ಕಣ್ಣಂಗಾರ್ ಎನ್‌ಎಸ್ ರೋಡ್ ಬೇಂಗಳೆ ಇದರ ವತಿಯಿಂದ ನಅತೇ ಶರೀಫ್, ಮತಪ್ರಭಾಷಣ ಹಾಗೂ ವಾರ್ಷಿಕ ಜಲಾಲಿಯ್ಯ ಜನವರಿ 18-19 ರಂದು ಬೇಂಗಳೆ ಮಸ್ಜಿದ್ ವಠಾರದಲ್ಲಿ ನಡೆಯಲಿದೆ ಎಂದು ನೂರುಲ್ ಹುದಾ ಮಸ್ಜಿದ್‌ನ ಅಧ್ಯಕ್ಷರಾದ ಅಬ್ದುಲ್ ಹಮೀದ್ ಮಿಲಾಫ್ […]

 (Hejamady) ಹೆಜಮಾಡಿ: ಕಣ್ಣಂಗಾರು ಕೇಂದ್ರ ಜುಮಾ ಮಸ್ಜಿದ್ ಇದರ ಅಧೀನದಲ್ಲಿರುವ ನೂರುಲ್ ಹುದಾ ಮಸ್ಜಿದ್, ಕಣ್ಣಂಗಾರ್ ಎನ್‌ಎಸ್ ರೋಡ್ ಬೇಂಗಳೆ ಇದರ ವತಿಯಿಂದ ನಅತೇ ಶರೀಫ್, ಮತಪ್ರಭಾಷಣ ಹಾಗೂ ವಾರ್ಷಿಕ ಜಲಾಲಿಯ್ಯ ಜನವರಿ 18-19 ರಂದು ಬೇಂಗಳೆ ಮಸ್ಜಿದ್ ವಠಾರದಲ್ಲಿ ನಡೆಯಲಿದೆ ಎಂದು ನೂರುಲ್ ಹುದಾ ಮಸ್ಜಿದ್‌ನ ಅಧ್ಯಕ್ಷರಾದ ಅಬ್ದುಲ್ ಹಮೀದ್ ಮಿಲಾಫ್ ಹೇಳಿದ್ದಾರೆ.

    ಗುರುವಾರ ಕಾಪು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

  ಜನವರಿ 18 ರ ಸಂಜೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಮುಹಮ್ಮದ್ ಆಝಮ್ ರಝಾ ಇವರಿಂದ ಇಶ್ಕೆ ಮದೀನಾ ನಅತೇ ಶರೀಫ್ ನಡೆಯಲಿದೆ. ಆ ಬಳಿಕ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.

    ನೂರುಲ್ ಹುದಾ ಮಸ್ಜಿದ್‌ನ ಅಧ್ಯಕ್ಷ ಅಬ್ದುಲ್ ಹಮೀದ್ ಮಿಲಾಫ್ ಅಧ್ಯಕ್ಷತೆ ವಹಿಸಲಿದ್ದು, ಕನ್ನಂಗಾರ್ ಜುಮಾ ಮಸೀದಿ ಖತೀಬ್ ಮುಹಮ್ಮದ್ ಅಶ್ರಫ್ ಸಖಾಫಿ ಕಿನ್ಯಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

   ಅಬ್ದುಲ್ ರಝಾಕ್ ಅಬ್ರಾರಿ ಪತ್ತನಂತಿಟ್ಟ ಪ್ರಭಾಷಣ ಮಾಡಲಿದ್ದಾರೆ. ಮುಖ್ಯ ಪ್ರಭಾಷಣಕಾರರಾಗಿ ಖ್ಯಾತ ವಾಗ್ಮಿ ಹಾಫಿಳ್ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಕೇರಳ ಇವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

  ಜನವರಿ 19 ರಂದು ಜಲಾಲಿಯ್ಯ ರಾತೀಬ್ ನಡೆಯಲಿದ್ದು, ಸಯ್ಯದ್ ಮುಖ್ತಾರ್ ತಂಙಳ್ ನೇತೃತ್ವ ವಹಿಸಲಿದ್ದಾರೆ.

  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವೈಟ್ ಸ್ಟೋನ್, ಕೆ.ಎಸ್.ಎ ಇದರ  ಬಿ.ಎಂ. ಶರೀಫ್ ಎಂ.ಡಿ, ಮಾಜಿ ಸಚಿವರಾದ ವಿನಯಕುಮಾ‌ರ್ ಸೊರಕೆ, ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್,  ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ,  ಅಝಾದ್ ನ್ಯಾಷನಲ್ ಗ್ರೂಪ್ ತೀರ್ಥಹಳ್ಳಿ ಅಬ್ದುಲ್ ಕಲಾಂ, ಕಾಪು ಪೊಲೀಸ್‌ ವೃತ್ತ ನಿರೀಕ್ಷಕ ಅಜ್ಮತ್‌ ಅಲಿ,  ಅಭಿವೃದ್ಧಿ ಸಮಿತಿ ಬಿಜೆಎಂ ಮಲ್ಲಾರು-ಮಜೂರು ಇದರ ಅಧ್ಯಕ್ಷ ಶರ್ಪುದ್ದೀನ್ ಶೇಖ್, ಅಂಕೋಲ ಯು.ಕೆ.ಆರ್. ಫಿಶರೀಸ್ ಇದರ ಬಾಬ ಮೂಸಾ, ಕಣ್ಣಂಗಾರ್ ಜುಮಾ ಮಸ್ಜಿದ್ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್,  ಪ್ರಧಾನ ಕಾರ್ಯದರ್ಶಿ  ಹಾಜಿ ಶೇಖ್ ಅಬ್ದುಲ್ಲಾ ಮಿನಾ, ಮುಸ್ಲಿಮ್ ಜಮಾಅತ್ ಕಣ್ಣಂಗಾರ್ ಇದರ ಅಧ್ಯಕ್ಷ ಹಾಜಿ ಮೊಯ್ದು ಬಿಲೀಫ್ ಕಣ್ಣಂಗಾರ್, ಬಹು। ಮಹಮೂದ್ ಸಅದಿ ಸದರ್ ಮುಅಲ್ಲಂ ಕಣ್ಣಂಗಾರ್, ಜನಾಬ್ ಆರೀಫ್ ಖಾಸಿಂ, ಜನಾಬ್ ಶರೀಫ್ ಷಾ, ಜನಾಬ್ ಅಕ್ರಮ್ ಹಾಜಿ  ಮೂಡಿಗೆರೆ, ಜನಾಬ್ ಕೆ. ಎಮ್ ಅಬ್ದುಲ್ಲಾ ಕೌಸರ್ ಗ್ರೂಪ್ ಮೂಡಿಗೆರೆ, ಬಹು। ಹುಸೈನ್ ಉಸ್ತಾದ್ ನೂರುಲ್ ಹುದಾ ಮದ್ರಸ, ಎನ್.ಎಸ್. ರೋಡ್ ಬೇಂಗಳೆ, ಜನಾಬ್ ಫಕ್ರುದ್ದೀನ್ ಹಾಜಿ ಮಾಜಿ ಅಧ್ಯಕ್ಷರು, ನೂರುಲ್ ಹುದಾ ಮದ್ರಸ, ಎನ್.ಎಸ್. ರೋಡ್ ಬೇಂಗಳೆ, ಬಹು। ಮುಹಮ್ಮದ್ ಸ್ವಾದಿಕ್ ಮದನಿ ಅಧ್ಯಾಪಕರು, ನೂರುಲ್ ಹುದಾ ಮದ್ರಸ,  ಮತ್ತು ಧಾರ್ಮಿಕ, ಸಾಮಾಜಿಕ, ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ.

   ಪತ್ರಿಕಾಗೋಷ್ಠಿಯಲ್ಲಿ ನೂರುಲ್ ಹುದಾ ಮಸ್ಜಿದ್‌ನ ಅಧ್ಯಕ್ಷ ಅಬ್ದುಲ್ ಹಮೀದ್ ಮಿಲಾಫ್, ಪ್ರಧಾನ ಕಾರ್ಯದರ್ಶಿ ಸಿದ್ದೀಕ್, ಕೋಶಾಧಿಕಾರಿ ಇಲ್ಯಾಸ್‌, ಬದ್ರುದ್ದೀನ್‌, ಸಾದಿಕ್‌, ಶರೀಫ್‌, ಖಾಸಿಂ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.