ಟಿಕೇಟ್ ಹಗರಣದ ರುವಾರಿ ಚೈತ್ರಾ ಮತ್ತು ತಂಡಕ್ಕೆ ಜೈಲಾಧಿಕಾರಿಯಿಂದ ವಿಚಾರಣಾಧೀನ ಕೈದಿ ನಂಬರ್
ಬೆಂಗಳೂರು : ಬೈಂದೂರಿನ ಉದ್ಯಮಿಯೋರ್ವರಿಗೆ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಬಹು ಕೋಟಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಮತ್ತು ತಂಡ ಇದೀಗ ಪರಪ್ಪನ ಅಗ್ರಹಾರದಲ್ಲಿದ್ದು, ಆರೋಪಿಗಳಿಗೆ ಜೈಲಾಧಿಕಾರಿಗಳು ಕೈದಿ ನಂಬರ್ ನೀಡಿದ್ದಾರೆ.
ಪ್ರಕರಣದ ಎ1 ಆರೋಪಿ ಚೈತ್ರಾಗೆ ನಂಬರ್ 9737 ಆದರೆ ಇನ್ನುಳಿದ ಆರೋಪಿಗಳಾದ ಮೋಹನ್ ಕುಮಾರ್ ಕೈದಿ ನಂಬರ್ 9738, ರಮೇಶ್-9739 ಚೆನ್ನಾ ನಾಯ್ಕ-9740, ಧನರಾಜ್-9741 ಎಂಬ ವಿಚಾರಣಾಧೀನ ಕೈದಿ ನಂಬರನ್ನು ಜೈಲಧಿಕಾರಿಗಳು ನೀಡಿದ್ದಾರೆ.
ಗೋವಿಂದ ಬಾಬು ಪೂಜಾರಿಗೆ 5 ಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಚೈತ್ರಾ & ಗ್ಯಾಂಗ್ ನ್ನು ಸಿಸಿಬಿ ಪೊಲೀಸರು 10 ದಿನಗಳಿಂದ ತಮ್ಮ ಕಸ್ಟಡಿಯಲ್ಲಿ ಇಟ್ಟುಕೊಂಡಿದ್ದರು. ಸೆಪ್ಟೆಂಬರ್ 23 ಕಸ್ಟಡಿ ಅಂತ್ಯವಾಗಿದ್ದರಿಂದ ಬೆಂಗಳೂರಿನ 3ನೇ ಎಸಿಎಂಎಂ ಕೋರ್ಟ್ ಗೆ ವಂಚಕರ ಗ್ಯಾಂಗನ್ನು ಸಿಸಿಬಿ ಪೊಲೀಸರು ಹಾಜರು ಪಡಿಸಿದ್ದರು.
ನ್ಯಾಯಾಲಯವೂ ಚೈತ್ರಾ ಹಾಗೂ ಆಕೆಯ ತಂಡದ ಗಗನ್ ಕಡೂರ್, ಧನರಾಜ್, ರಮೇಶ್, ಶ್ರೀಕಾಂತ್ ಮತ್ತು ಚೆನ್ನನಾಯ್ಕನಿಗೆ ಅಕ್ಟೋಬರ್ 6ರ ತನಕ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದ್ದಾರೆ.
ಈ ಸಂದರ್ಭದಲ್ಲಿ ಚೈತ್ರಾ ನ್ಯಾಯಾಧೀಶರ ಎದುರು ಗಳಗಳನೆ ಕಣ್ಣೀರು ಹಾಕಿದ್ದಳು. ನಂತರ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿತ್ತು.
ಈ ವಂಚಿತರ ಗ್ಯಾಂಗ್ ಪರಪ್ಪನ ಅಗ್ರಹಾರ ಸೇರಿದ್ರೆ, ಮೂರನೇ ಆರೋಪಿ ಹಾಲಶ್ರೀಗೆ ಸೆಪ್ಟೆಂಬರ್29 ರವರೆಗೆ ಸಿಸಿಬಿ ಕಸ್ಟಡಿ ನೀಡಲಾಗಿದೆ.

