ಟೈಮಿಂಗ್ ವಿವಾದ : ಪಡುಬಿದ್ರಿ ಹೆದ್ದಾರಿಗೆ ಬಸ್ ಅಡ್ಡವಿಟ್ಟ ಬಸ್ ಚಾಲಕ
5 April 2024
0 Comments
173 Views
Share: ಟೈಮಿಂಗ್ ತಗಾದೆ, ದೂರು ಪ್ರತಿದೂರು: ಹೆದ್ದಾರಿಗೆ ಬಸ್ ಅಡ್ಡ ಇಟ್ಟ ಚಾಲಕ (Driver blocked the bus in Paubidri Highway) ಟೈಮಿಂಗ್ ತಗಾದೆ, ದೂರು ಪ್ರತಿದೂರು: ಹೆದ್ದಾರಿಗೆ ಬಸ್ ಅಡ್ಡ ಇಟ್ಟ ಚಾಲಕ ಪಡುಬಿದ್ರಿ, ಎ. 5: ಕಾಪುವಿನ ಟೈಂ ಕೀಪರ್ ಶರತ್ ಹಾಗೂ ಖಾಸಗಿ ಬಸ್ ಚಾಲಕ ಅಜೀಜ್ ಮಧ್ಯೆ ಟೈಮಿಂಗ್ ಕುರಿತಾಗಿ ನಡೆದಿದ್ದ ವಾಗ್ವಾದ ಮುಂದುವರಿದು ಪಡುಬಿದ್ರಿ ತಲುಪಿದ ಸರ್ವಿಸ್ ಬಸ್ ಎಂಎಂಎಸ್ಗೆ ಟೈಂ ಕೀಪರ್ ಶರತ್ ಅಡ್ಡ ನಿಂತಾಗ ಕುಪಿತಗೊಂಡ […]
Share:
ಟೈಮಿಂಗ್ತಗಾದೆ, ದೂರುಪ್ರತಿದೂರು: ಹೆದ್ದಾರಿಗೆಬಸ್ಅಡ್ಡಇಟ್ಟಚಾಲಕ (Driver blocked the bus in Paubidri Highway)
ಪಡುಬಿದ್ರಿ, ಎ. 5: ಕಾಪುವಿನ ಟೈಂ ಕೀಪರ್ ಶರತ್ ಹಾಗೂ ಖಾಸಗಿ ಬಸ್ ಚಾಲಕ ಅಜೀಜ್ ಮಧ್ಯೆ ಟೈಮಿಂಗ್ ಕುರಿತಾಗಿ ನಡೆದಿದ್ದ ವಾಗ್ವಾದ ಮುಂದುವರಿದು ಪಡುಬಿದ್ರಿ ತಲುಪಿದ ಸರ್ವಿಸ್ ಬಸ್ ಎಂಎಂಎಸ್ಗೆ ಟೈಂ ಕೀಪರ್ ಶರತ್ ಅಡ್ಡ ನಿಂತಾಗ ಕುಪಿತಗೊಂಡ ಚಾಲಕ ಅಜೀಜ್ ತನ್ನ ಮಾಲಕರಿಗೆ ಕರೆ ಮಾಡಿ, ಬಳಿಕ ಬಸ್ಸನ್ನೇ ಹೆದ್ದಾರಿಗಡ್ಡವಾಗಿ ನಿಲ್ಲಿಸಿ ಬಸ್ ತಂಗುದಾಣದಲ್ಲಿ ‘ವಿಶ್ರಾಂತಿ’ ಪಡೆದ ವಿಲಕ್ಷಣ ಘಟನೆಯು ಗುರುವಾರ ಅಪರಾಹ್ನದ ವೇಳೆ ನಡೆದಿದೆ.
ಈ ಕುರಿತಾಗಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರುಗಳು ದಾಖಲಾಗಿವೆ.
ಸುಮಾರು ೫ನಿಮಿಷಗಳ ಕಾಲ ನಡೆದಿದ್ದ ಈ ಪ್ರಹಸನದಲ್ಲಿ ಪಡುಬಿದ್ರಿ ಪೊಲೀಸರ ಮಧ್ಯಪ್ರವೇಶದವರೆಗೂ ಉಡುಪಿ - ಮಂಗಳೂರು ಏಕಮುಖ ರಸ್ತೆಯಲ್ಲಿ ಹೆದ್ದಾರಿ ವಾಹನ ಸಂಚಾರಕ್ಕೆ ತೊಡಕಾಗಿತ್ತು.
ಈ ಕುರಿತಾದ ವೀಡಿಯೋ ತುಣುಕು ಸೋಶಿಯಲ್ ಮೀಡಿಯಾದಲ್ಲೂ ವೈರಲ್ ಆಗಿದೆ.