• Home  
  • ಟೋಲ್‌ ತಪ್ಪಿಸುವ ಸಲುವಾಗಿ ನಕಲಿ ದಾಖಲೆ ಸೃಷ್ಟಿ- ಪ್ರಕರಣ ದಾಖಲು (Creation of Fake document to avoid tollgate : Case registered)
- ಅಪರಾಧ

ಟೋಲ್‌ ತಪ್ಪಿಸುವ ಸಲುವಾಗಿ ನಕಲಿ ದಾಖಲೆ ಸೃಷ್ಟಿ- ಪ್ರಕರಣ ದಾಖಲು (Creation of Fake document to avoid tollgate : Case registered)

Share:   ಟೋಲ್‌ ತಪ್ಪಿಸುವ ಸಲುವಾಗಿ ನಕಲಿ ದಾಖಲೆ ಸೃಷ್ಟಿ– ಪ್ರಕರಣ ದಾಖಲು  ಕೋಟ: ಸಾಸ್ತಾನ ಟೋಲ್‌ನಲ್ಲಿ ಟೋಲ್‌ ತಪ್ಪಿಸುವ ಸಲುವಾಗಿ ನಕಲಿ ದಾಖಲೆ ಸೃಷ್ಟಿಸಿದ್ದು, ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಸ್ತಾನ ಟೋಲ್‌ನಲ್ಲಿ ಕರಿಕಲ್‌ ಕಟ್ಟೆಯಿಂದ ಮಾಬುಕಳದವೆರೆಗೆ ಇರುವ ಸ್ಥಳೀಯ ನಿವಾಸಿಗಳಿಗೆ ಸುಂಕ ವಿನಾಯಿತಿ ಇದೆ. ಇಲ್ಲಿ ಕಾರೊಂದರ ಆರ್‌.ಸಿ.ಯನ್ನು ಸ್ಕ್ಯಾನರ್‌ನಲ್ಲಿ ಪರಿಶೀಲಿಸಿದಾಗ ಆರ್‌ಸಿ ವಿಳಾಸದಲ್ಲಿ ಮಯ್ನಾದಿ ಅಹಮ್ಮದ್‌ ಸಾಹೇಬ ಪಡುಕರೆ ಕೋಟ ಎಂದಿದ್ದು, ಆರ್‌ಸಿ ಪ್ರತಿಯನ್ನು ನೋಡಿದಾಗ ಎಡಿಟ್‌ ಮಾಡಿರುವುದು ಮೇಲ್ನೋಟಕ್ಕೆ […]

  ಟೋಲ್ತಪ್ಪಿಸುವ ಸಲುವಾಗಿ ನಕಲಿ ದಾಖಲೆ ಸೃಷ್ಟಿಪ್ರಕರಣ ದಾಖಲು

 ಕೋಟ: ಸಾಸ್ತಾನ ಟೋಲ್‌ನಲ್ಲಿ ಟೋಲ್‌ ತಪ್ಪಿಸುವ ಸಲುವಾಗಿ ನಕಲಿ ದಾಖಲೆ ಸೃಷ್ಟಿಸಿದ್ದು, ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಸ್ತಾನ ಟೋಲ್‌ನಲ್ಲಿ ಕರಿಕಲ್‌ ಕಟ್ಟೆಯಿಂದ ಮಾಬುಕಳದವೆರೆಗೆ ಇರುವ ಸ್ಥಳೀಯ ನಿವಾಸಿಗಳಿಗೆ ಸುಂಕ ವಿನಾಯಿತಿ ಇದೆ. ಇಲ್ಲಿ ಕಾರೊಂದರ ಆರ್‌.ಸಿ.ಯನ್ನು ಸ್ಕ್ಯಾನರ್‌ನಲ್ಲಿ ಪರಿಶೀಲಿಸಿದಾಗ ಆರ್‌ಸಿ ವಿಳಾಸದಲ್ಲಿ ಮಯ್ನಾದಿ ಅಹಮ್ಮದ್‌ ಸಾಹೇಬ ಪಡುಕರೆ ಕೋಟ ಎಂದಿದ್ದು, ಆರ್‌ಸಿ ಪ್ರತಿಯನ್ನು ನೋಡಿದಾಗ ಎಡಿಟ್‌ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಬಗ್ಗೆ ಪರಿಶೀಲಿಸಿದಾಗ ಕಾರಿನ ಆರ್‌ಸಿ ಮಾಲಕರ ವಿಳಾಸ ಕಾಳಾವರ ಗ್ರಾಮ ಕುಂದಾಪುರ ತಾಲೂಕು ಎಂದಿದ್ದು, ಅನುಮಾನಗೊಂಡು ಹೆಜಮಾಡಿ ಟೋಲ್‌ನಲ್ಲಿ ಪರಿಶೀಲಿಸಿದಾಗ ಅಲ್ಲಿಯೂ ಸಹ ಸ್ಥಳೀಯ ವಿಳಾಸದ ಆರ್‌ಸಿ ನೀಡಿ ವಿನಾಯಿತಿ ಪಡೆದಿರುವುದು ಕಂಡುಬಂದಿದೆ.

 ಆರೋಪಿಯು ಟೋಲ್‌ನಲ್ಲಿ ಸುಂಕ ವಿನಾಯಿತಿ ಪಡೆಯುವ ಉದ್ದೇಶದಿಂದ ಕಾರಿನ ಆರ್‌ಸಿಯ ವಿಳಾಸವನ್ನು ಬದಲಾಯಿಸಿ ಆರ್‌ಸಿಯಲ್ಲಿರುವ ವಿಳಾಸ ತನ್ನ ಸ್ವಂತ ವಿಳಾಸ ಎಂದು ಬಿಂಬಿಸಿ ನಕಲಿ ಆರ್‌ಸಿ ತಯಾರಿಸಿ ಟೋಲ್‌ ಸಂಸ್ಥೆಗೆ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.