ಬಂಟಕಲ್ ತಾಂತ್ರಿಕ ಕಾಲೇಜಿಗೆ ನ್ಯಾಕ್ ತಂಡ ಭೇಟಿ
(Bantakal) ಬಂಟಕಲ್: ಬಂಟಕಲ್ಲಿನ ಶ್ರಿ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯಕ್ಕೆ ಎರಡನೇ ಬಾರಿ ನ್ಯಾಕ್ ಮಾನ್ಯತೆ ನೀಡುವ ಸಲುವಾಗಿ, ಪರಿಣಿತರ ತಂಡ ಕಾಲೇಜಿಗೆ ಭೇಟಿ ನೀಡಿತು.
ಹರಿಯಾಣದ ಓಂ ಸ್ಟರ‍್ಲಿಂಗ್ ಗ್ಲೋಬಲ್ ವಿಶ್ವವಿದ್ಯಾನಿಲಯದ ಸಹ ಕುಲಪತಿಗಳಾದ ಡಾ. ರಾಜೇಂದ್ರ ಸಿಂಗ್ ಚಿಲ್ಲರ್ ತಂಡದ ಅಧ್ಯಕ್ಷರಾಗಿದ್ದರು.
ಇವರ ಜೊತೆಗೆ ಪುಣೆಯ ಸಿಂಬಯೋಸಿಸ್ ತಾಂತ್ರಿಕ ಮಹಾವಿದ್ಯಾಲಯದ ಡಾ. ಆನಂದ್ ಕುಮಾರ್ ಪಾಂಡೆ ಮತ್ತು ಮುಂಬಯಿ ವಿಶ್ವವಿದ್ಯಾನಿಲಯದ ರತ್ನಗಿರಿ ಕೇಂದ್ರದ ನಿರ್ದೇಶಕರಾದ ಡಾ. ಕಿಶೋರ್ ಸುಖಾತಂಕರ್ ತಂಡದ ಸದಸ್ಯರಾಗಿ ಕಾಲೇಜಿಗೆ ಭೇಟಿ ನೀಡಿದ್ದಾರೆ.
ಎರಡು ದಿನಗಳ ಕಾಲ ಕಾಲೇಜಿನ ಮೂಲ ಸೌಕರ್ಯ ತಪಾಸಣೆ ಮತ್ತು ದಾಖಲಾತಿಗಳ ಪರಿಶೀಲನೆಯ ಜೊತೆಗೆ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು, ಪೋಷಕರು ಮತ್ತು ಉದ್ಯೋಗದಾತರ ಜೊತೆಗೆ ಸಂವಾದ ನಡೆಸಿದರು.
ಸಂಜೆ ನಡೆದ ನ್ಯಾಕ್ ತಂಡದ ಭೇಟಿಯ ಮುಕ್ತಾಯ ಸಭೆಯಲ್ಲಿ ತಂಡದ ಅಧ್ಯಕ್ಷರು ಕಳೆದ ಐದು ವರ್ಷಗಳಲ್ಲಿ ಉತ್ತಮ ಗುಣÀಮಟ್ಟದ ಶಿಕ್ಷಣವನ್ನು ಕೊಡುವುದರಲ್ಲಿ ಕಾಲೇಜಿನ ಪರಿಶ್ರಮವನ್ನು ಶ್ಲಾಘಿಸಿದರು. ಇದೇ ಸಂಧರ್ಭದಲ್ಲಿ ಅವರು ಸಂಶೋಧನೆಯ ಕುರಿತು ಸಂಸ್ಥೆಯು ಹೆಚ್ಚಿನ ಗಮನ ಹರಿಸಬೇಕೆಂದು ಸಲಹೆಯಿತ್ತರು.
ಸಭೆಯಲ್ಲಿ ತಂಡದ ಅಧ್ಯಕ್ಷರು, ಸಂಸ್ಥೆಯು ಮತ್ತಷ್ಟು ಉನ್ನತ ಮಟ್ಟಕ್ಕೇರಲು ತೆಗೆದುಕೊಳ್ಳಬೇಕಾದ ಕ್ರಮಗಳು ಮತು ಸಲಹೆ ಸೂಚನೆಗಳನ್ನೊಳಗೊಂಡ ವರದಿಯನ್ನು ಪ್ರಾಂಶುಪಾಲರಿಗೆ ಹಸ್ತಾಂತರಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಫ್ರೊ. ತಿರುಮಲೇಶ್ವರ ಭಟ್ ಉಪಸ್ಥಿತರಿದ್ದು, ಕಾಲೇಜಿನ ಆಂತರಿಕ ಗುಣಮಟ್ಟ ಖಾತ್ರಿ ಘಟಕದ ಸಂಚಾಲಕರಾದ ಡಾ. ಸುದರ್ಶನ್ ರಾವ್. ಕೆ ವಂದಿಸಿದರು.

