ಡಾ. ಎಂ ಫಾರೂಕ್ ಚಂದ್ರನಗರರವರಿಗೆ ಪ್ರತಿಷ್ಠಿತ ವಫಾ ಸಂಸ್ಥೆಯಿಂದ ಸನ್ಮಾನ
(Kaup) ಕಾಪು : ಉಡುಪಿ-ಮಂಗಳೂರು ನಗರದ ಪ್ರತಿಷ್ಠಿತ ವಫಾ ಸಂಸ್ಥೆಯವರ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಕಾಪುವಿನ ಸಮಾಜ ಸೇವಕ ಡಾ.ಎಂ. ಫಾರೂಕ್ ಉಮ್ಮರಬ್ಬ ಚಂದ್ರನಗರವರನ್ನು ವಫಾ ಸಂಸ್ಥೆಯು ಬೈಕಂಪಾಡಿ ಅಡ್ಕ ಸಭಾಂಗಣದಲ್ಲಿ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಿತು.
ಈ ಸಂದರ್ಭದಲ್ಲಿ ವಫಾ ಸಂಸ್ಥೆಯ ಸ್ಥಾಪಕರಾದ ಅಬ್ದುಲ್ ವಹಾಬ್ ಅಧ್ಯಕ್ಷತೆ ವಹಿಸಿದ್ದರು.
ಅವರು ಮಾತನಾಡಿ, ಡಾ. ಫಾರೂಕ್ ಅವರ ಸಮಾಜ ಸೇವೆಯನ್ನು ಶ್ಲಾಘಿಸಿದ ಅವರು, ಮುಂದೆಯೂ ತಮ್ಮ ಸೇವೆ ಹೀಗೆ ಮುಂದುವರಿಯಲಿ ಎಂದು ಹಾರೈಸಿದರು.
ಈ ಸಂದರ್ಭ ಕೆಪಿಸಿಸಿ ಕಾರ್ಯದರ್ಶಿ ಎಂ. ಎಸ್ ಮೊಹಮ್ಮದ್, ಮಂಗಳೂರು ಮಾಜಿ ಮೆಯರ್ ಅಶ್ರಫ್, ತುಳುವಿನ ಖ್ಯಾತ ಚಿತ್ರನಟ ದೇವಿದಾಸ್ ಕಾಪಿಕಾಡ್, ಸುಮಂತ, ರಾಹುಲ್ ಅಮೀನ್, ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ಅಧ್ಯಕ್ಷ ಶರ್ಫುದ್ದಿನ್ ಶೇಖ್, ಸಾಹಿತಿ ಮುಸ್ತಾಕ್ ಹೆನ್ನಾಬೈಲು, ಪಡುಬಿದ್ರೆ ರೋಟರಿ ಕ್ಲಬ್ ಅಧ್ಯಕ್ಷೆ ತಸ್ನೀನ್ ಅರಾ, ಉಡುಪಿ ಜಿಲ್ಲಾ ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ಯುಸಿ ಶೇಕಬ್ಬ ಉಚ್ಚಿಲ, ವಫಾ ಸಂಸ್ಥೆಯ ಮುಂದಾಳು ಜುನೈದ್ ಉಚ್ಚಿಲ ಮತ್ತಿತರರು ಉಪಸ್ಥಿತರಿದ್ದರು.

