• Home  
  • ಡಾ. ಎಂ ಫಾರೂಕ್  ಚಂದ್ರನಗರ ರವರಿಗೆ ಸಮಾಜ ಸೇವಾ ಮಾಣಿಕ್ಯ ರಾಷ್ಟ್ರೀಯ ಪ್ರಶಸ್ತಿ ಪ್ರದಾನ (Dr. M Farookh Chandanagara got “Samaja Seva Manikya Award)
- social service

ಡಾ. ಎಂ ಫಾರೂಕ್  ಚಂದ್ರನಗರ ರವರಿಗೆ ಸಮಾಜ ಸೇವಾ ಮಾಣಿಕ್ಯ ರಾಷ್ಟ್ರೀಯ ಪ್ರಶಸ್ತಿ ಪ್ರದಾನ (Dr. M Farookh Chandanagara got “Samaja Seva Manikya Award)

Share:  ಡಾ. ಎಂ ಫಾರೂಕ್  ಚಂದ್ರನಗರ ರವರಿಗೆ ಸಮಾಜ ಸೇವಾ ಮಾಣಿಕ್ಯ ರಾಷ್ಟ್ರೀಯ ಪ್ರಶಸ್ತಿ ಪ್ರದಾನ (Poone) ಪೂಣೆ : ತುಳುಕೂಟ ಪುಣೆಯ ವತಿಯಿಂದ ಬೊಳ್ಳಿ ಪರ್ಬ-2024, ತುಳುನಾಡ ಜಾತ್ರೆ, ತುಳುಕೂಟ ರಜತ ಸಂಭ್ರಮದ ಕಾರ್ಯಕ್ರಮದಲ್ಲಿ ಕಾಪುವಿನ ಸಮಾಜ ಸೇವಕ ಬಟರ್ ಫ್ಲೈ ಗೆಸ್ಟ್ ಹೌಸ್ ಇದರ ಆಡಳಿತ ನಿರ್ದೇಶಕ ಡಾ. ಎಂ ಫಾರೂಕ್ ಉಮ್ಮರಬ್ಬ ಚಂದ್ರನಗರ ಇವರ ಸಮಾಜ ಸೇವೆಯನ್ನು ಪರಿಗಣಿಸಿ ಸಮಾಜ ಸೇವಾ ಮಾಣಿಕ್ಯ ರಾಷ್ಟ್ರೀಯ ಪ್ರಶಸ್ತಿಯನ್ನು ಪುಣೆಯ ಬಾಣೆರ್‌ನ ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ […]

 ಡಾ. ಎಂ ಫಾರೂಕ್  ಚಂದ್ರನಗರ ರವರಿಗೆ ಸಮಾಜ ಸೇವಾ ಮಾಣಿಕ್ಯ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

(Poone) ಪೂಣೆ : ತುಳುಕೂಟ ಪುಣೆಯ ವತಿಯಿಂದ ಬೊಳ್ಳಿ ಪರ್ಬ-2024, ತುಳುನಾಡ ಜಾತ್ರೆ, ತುಳುಕೂಟ ರಜತ ಸಂಭ್ರಮದ ಕಾರ್ಯಕ್ರಮದಲ್ಲಿ ಕಾಪುವಿನ ಸಮಾಜ ಸೇವಕ ಬಟರ್ ಫ್ಲೈ ಗೆಸ್ಟ್ ಹೌಸ್ ಇದರ ಆಡಳಿತ ನಿರ್ದೇಶಕ ಡಾ. ಎಂ ಫಾರೂಕ್ ಉಮ್ಮರಬ್ಬ ಚಂದ್ರನಗರ ಇವರ ಸಮಾಜ ಸೇವೆಯನ್ನು ಪರಿಗಣಿಸಿ ಸಮಾಜ ಸೇವಾ ಮಾಣಿಕ್ಯ ರಾಷ್ಟ್ರೀಯ ಪ್ರಶಸ್ತಿಯನ್ನು ಪುಣೆಯ ಬಾಣೆರ್‌ನ ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಬಂಟರ ಭವನದ ಲತಾ ಸುಧೀರ್ ಶೆಟ್ಟಿ ಆಡಿಟೋರಿಯಂನ ನಾಡೋಜ ಡಾ. ಜಿ ಶಂಕರ್ ವೇದಿಕೆಯಲ್ಲಿ ರಾಜಕೀಯ ಮುಖಂಡರು ಹಾಗೂ ದೇಶ-ವಿದೇಶದ ಗಣ್ಯರ ಸಮ್ಮುಖ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಲಾಯಿತು.

 ಈ ಸಂದರ್ಭ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಮತ್ತು ಕಟೀಲು ಶ್ರೀ ಅನಂತ ಕೃಷ್ಣ ಅಸ್ರಣ್ಣರವರು ಆಶೀರ್ವಚನ ನೀಡಿ ಫಾರುಖ್‌ರವರಿಗೆ ಶುಭ ಹಾರೈಸಿದರು.

  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುಣೆ ತುಳುಕೂಟ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಕಳತ್ತೂರು ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಉಡುಪಿ ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಸ್ಥಾಪಕಾಧ್ಯಕ್ಷ ನಾಡೋಜ ಡಾ. ಜಿ ಶಂಕರ್, ಎಂ.ಆರ್. ಜಿ ಗ್ರೂಪ್ಸ್ ಡಾ. ಪ್ರಕಾಶ್ ಶೆಟ್ಟಿ, ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ,   ತುಳುಕೂಟ ರಜತ ಮಹೋತ್ಸವ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ಪುತ್ತೂರು, ಅಖಿಲ ಭಾರತ ತುಳು ಒಕ್ಕೂಟ ಅಧ್ಯಕ್ಷರಾದ ಎ ಸಿ ಬಂಡಾರಿ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಡಾ. ಕೆ ಧರಣಿದೇವಿ ಮಾಲಗತ್ತಿ, ಅನಿವಾಸಿ ಭಾರತೀಯ ಡಾ. ಡೇವಿಡ್ ಫ್ರಾಂಕ್ ಫೆರ್ನಾಂಡಿಸ್, ಮುನಿಯಾಲು ಟ್ರಸ್ಟ್ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಮುನಿಯಲು, ಉಡುಪಿ ನ್ಯಾಯವಾದಿ ಉಮೇಶ್ ಶೆಟ್ಟಿ ಕಳತ್ತೂರು, ಜಯಕರ ಶೆಟ್ಟಿ ಇಂದ್ರಾಳಿ, ದಕ್ಷಿಣ ಕನ್ನಡ ಮೊಗವೀರ ಸಭಾ ಅಧ್ಯಕ್ಷರಾದ ಶ್ರೀ ಜಯ ಕೋಟ್ಯಾನ್, ತುಳುಕೂಟ ಪುಣೆ ಉಪಾಧ್ಯಕ್ಷರಾದ ಉದಯ ಶೆಟ್ಟಿ ಕಳತ್ತೂರು, ಪ್ರ.ಕಾರ್ಯದರ್ಶಿ ರೋಹಿತ್ ಡಿ ಶೆಟ್ಟಿ ನಗ್ರಿಗುತ್ತು, ರವಿಶಂಕರ್ ಶೆಟ್ಟಿ ಬಡಾಜೆ ಬಂಟ್ವಾಳ, ಭಾರತ್ ಕೋ ಆಪರೇಟಿವ್ ಮುಂಬೈ ಕಾರ್ಯಧ್ಯಕ್ಷ ಸೂರ್ಯಕಾಂತ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.