• Home  
  • ಮಜೂರು : ಗ್ರೀನ್‌ವುಡ್ ರೆಸಾರ್ಟ್‌ನಲ್ಲಿ ಗೂಡು ದೀಪ ಸ್ಪರ್ಧೆ, ಪ್ರದರ್ಶನ (Goodu deepa Cometition at Majuru Greenwood resort)
- fastival

ಮಜೂರು : ಗ್ರೀನ್‌ವುಡ್ ರೆಸಾರ್ಟ್‌ನಲ್ಲಿ ಗೂಡು ದೀಪ ಸ್ಪರ್ಧೆ, ಪ್ರದರ್ಶನ (Goodu deepa Cometition at Majuru Greenwood resort)

Share: ಮಜೂರು : ಗ್ರೀನ್‌ವುಡ್ ರೆಸಾರ್ಟ್‌ನಲ್ಲಿ ಗೂಡು ದೀಪ ಸ್ಪರ್ಧೆ, ಪ್ರದರ್ಶನ (Kaup) ಕಾಪು, ನ. 13 : ಮಜೂರು ಗ್ರೀನ್‌ವುಡ್ ರೆಸಾರ್ಟ್‌ನಲ್ಲಿ ಜೇಸಿಐ ಕಾಪು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮಜೂರು ಮತ್ತು ಎರ್ಮಾಳು ಟೈಗರ್ಸ್‌ ಸಹಭಾಗಿತ್ವದೊಂದಿಗೆ ನಡೆದ ಗೂಡು ದೀಪ ಪ್ರದರ್ಶನ ಮತ್ತು ಸ್ಪರ್ಧೆಯನ್ನು ಉದ್ಯಮಿ ಪ್ರಭಾಕರ್ ಪೂಜಾರಿ ಕಾಪು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಶಶಿಧರ ಸುವರ್ಣ ಅವರನ್ನು […]

ಮಜೂರು : ಗ್ರೀನ್‌ವುಡ್ ರೆಸಾರ್ಟ್‌ನಲ್ಲಿ ಗೂಡು ದೀಪ ಸ್ಪರ್ಧೆ, ಪ್ರದರ್ಶನ


(Kaup) ಕಾಪು, ನ. 13 : ಮಜೂರು ಗ್ರೀನ್‌ವುಡ್ ರೆಸಾರ್ಟ್‌ನಲ್ಲಿ ಜೇಸಿಐ ಕಾಪು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮಜೂರು ಮತ್ತು ಎರ್ಮಾಳು ಟೈಗರ್ಸ್‌ ಸಹಭಾಗಿತ್ವದೊಂದಿಗೆ ನಡೆದ ಗೂಡು ದೀಪ ಪ್ರದರ್ಶನ ಮತ್ತು ಸ್ಪರ್ಧೆಯನ್ನು ಉದ್ಯಮಿ ಪ್ರಭಾಕರ್ ಪೂಜಾರಿ ಕಾಪು ಉದ್ಘಾಟಿಸಿದರು.
 ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಶಶಿಧರ ಸುವರ್ಣ ಅವರನ್ನು ಸಮ್ಮಾನಿಸಿ, ಗೌರವಿಸಲಾಯಿತು.
 ಸಂಘಟಕ, ಗ್ರೀನ್‌ವುಡ್ ರೆಸಾರ್ಟ್‌ನ ಮಾಲಕ ದೀಪಕ್ ಕುಮಾರ್ ಎರ್ಮಾಳು ಅಧ್ಯಕ್ಷತೆ ವಹಿಸಿದ್ದರು. ರಕ್ಷಣಾಪುರ ಜವನೆರ್ ಸಂಘಟನೆಯ ಅಧ್ಯಕ್ಷ ನವೀನ್ ಶೆಟ್ಟಿ ಪಡುಬಿದ್ರಿ, ಮಾಸ್ಟರ್ ಫೀಸ್ ಫಿಟ್‌ನೆಸ್ ಸೆಂಟರ್‌ನ ಕಿಶೋರ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
 ಸಂಘಟಕರಾದ ಕಾಪು ಜೇಸಿಐ ಅಧ್ಯಕ್ಷೆ ಸುಖಲಾಕ್ಷಿ ಜೆ. ಬಂಗೇರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಚ್ಚಿಲ ವಲಯದ ಮೇಲ್ವಿಚಾರಕಿ ವಿಜಯಾ, ಸುಜಿತ್ ಶೆಟ್ಟಿ ಪಾದೂರು ಉಪಸ್ಥಿತರಿದ್ದರು.
 ಗೂಡು ದೀಪ ಸ್ಪರ್ಧೆಯಲ್ಲಿ ರಕ್ಷಿತ್ ಕುಮಾರ್ ಮಂಗಳೂರು (ಪ್ರಥಮ), ವಿಠಲ ಭಟ್ (ದ್ವಿತೀಯ), ವಿನಾಯಕ್ ಭಟ್ ಮಂಗಳೂರು (ತೃತೀಯ), ಜಗದೀಶ್ ಅಮೀನ್ ಸುಂಕದಕಟ್ಟೆ, ಆದಿತ್ಯ ಗುರುಪುರ ಪ್ರೋತ್ಸಾಹಕ ಬಹುಮಾನ ಗಳಿಸಿದ್ದಾರೆ.

  ಸಾಮಾಜಿಕ ಕಾರ್ಯಕರ್ತ ರಾಮಾಂಜಿ ಉಡುಪಿ, ಪತ್ರಕರ್ತ ರಾಕೇಶ್ ಕುಂಜೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಜೂರು ಒಕ್ಕೂಟದ ಅಧ್ಯಕ್ಷ ಪ್ರಸಾದ್ ಆಚಾರ್ಯ ತೀರ್ಪುಗಾರರಾಗಿ ಸಹಕರಿಸಿದರು.
 ಕಾಪು ಜೇಸಿಐನ ಪೂರ್ವಾಧ್ಯಕ್ಷ ರಮೇಶ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.