• Home  
  • ತೆಂಕ ಎರ್ಮಾಳು ಅಟೋ ರಿಕ್ಷಾ ನಿಲ್ದಾಣಕ್ಕೆ ಸಿಮೆಂಟ್ ಬೆಂಚ್‌ಗಳ ಕೊಡುಗೆ (Donation of Cement Benches to Tenka Yermal Auto Rickshaw Stand)
- social service

ತೆಂಕ ಎರ್ಮಾಳು ಅಟೋ ರಿಕ್ಷಾ ನಿಲ್ದಾಣಕ್ಕೆ ಸಿಮೆಂಟ್ ಬೆಂಚ್‌ಗಳ ಕೊಡುಗೆ (Donation of Cement Benches to Tenka Yermal Auto Rickshaw Stand)

Share: ತೆಂಕ ಎರ್ಮಾಳು ಅಟೋ ರಿಕ್ಷಾ ನಿಲ್ದಾಣಕ್ಕೆ ಸಿಮೆಂಟ್ ಬೆಂಚ್‌ಗಳ ಕೊಡುಗೆ ಎರ್ಮಾಳು : ತೆಂಕ ಎರ್ಮಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಅಟೋ ರಿಕ್ಷಾ ನಿಲ್ದಾಣಕ್ಕೆ ಬಹುದಿನಗಳ ಬೇಡಿಯ ಸಿಮೆಂಟ್ ಬೆಂಚ್‌ಗಳನ್ನು ದಾನಿಯೋರ್ವರು ನೀಡಿದ್ದು, ಈ ಸಂದರ್ಭ ಅವರನ್ನು ಎರ್ಮಾಳು ಅಟೋ ಯೂನಿಯನ್ ವತಿಯ ಸನ್ಮಾನಿಸಿ ಗೌರವಿಸಲಾಯಿತು. ಪೂಂದಾಡು ಕುಟ್ಟಿ ಪೂಜಾರಿಯವರ ಪುತ್ರ ದಿನೇಶ್ ಪೂಜಾರಿಯವರು ಸುಮಾರು ಇಪ್ಪತ್ತು ಸಾವಿರ ರೂಪಾಯಿ ಮೌಲ್ಯದ ನಾಲ್ಕು ಸಿಮೆಂಟ್ ಬೆಂಚ್‌ಗಳನ್ನು ಕೊಡುಗೆಯಾಗಿ ನೀಡಿದ್ದು ಅವರನ್ನು ಅಟೋ ರಿಕ್ಷಾ ಯೂನಿಯನ್ ವತಿಯಿಂದ […]

ತೆಂಕ ಎರ್ಮಾಳು ಅಟೋ ರಿಕ್ಷಾ ನಿಲ್ದಾಣಕ್ಕೆ ಸಿಮೆಂಟ್ ಬೆಂಚ್‌ಗಳ ಕೊಡುಗೆ

ಎರ್ಮಾಳು : ತೆಂಕ ಎರ್ಮಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಅಟೋ ರಿಕ್ಷಾ ನಿಲ್ದಾಣಕ್ಕೆ ಬಹುದಿನಗಳ ಬೇಡಿಯ ಸಿಮೆಂಟ್ ಬೆಂಚ್‌ಗಳನ್ನು ದಾನಿಯೋರ್ವರು ನೀಡಿದ್ದು, ಈ ಸಂದರ್ಭ ಅವರನ್ನು ಎರ್ಮಾಳು ಅಟೋ ಯೂನಿಯನ್ ವತಿಯ ಸನ್ಮಾನಿಸಿ ಗೌರವಿಸಲಾಯಿತು.

ಪೂಂದಾಡು ಕುಟ್ಟಿ ಪೂಜಾರಿಯವರ ಪುತ್ರ ದಿನೇಶ್ ಪೂಜಾರಿಯವರು ಸುಮಾರು ಇಪ್ಪತ್ತು ಸಾವಿರ ರೂಪಾಯಿ ಮೌಲ್ಯದ ನಾಲ್ಕು ಸಿಮೆಂಟ್ ಬೆಂಚ್‌ಗಳನ್ನು ಕೊಡುಗೆಯಾಗಿ ನೀಡಿದ್ದು ಅವರನ್ನು ಅಟೋ ರಿಕ್ಷಾ ಯೂನಿಯನ್ ವತಿಯಿಂದ ಎರ್ಮಾಳು ಅಟೋ ನಿಲ್ದಾಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಎರ್ಮಾಳು ಅಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ಸುರೇಶ್ ಎರ್ಮಾಳ್, ಉಪಾಧ್ಯಕ್ಷ ರಾಜು ಪೂಜಾರಿ, ಕಾರ್ಯದರ್ಶಿ ಭರತ್ ಶೆಟ್ಟಿಗಾರ್, ಕೋಶಾಧಿಕಾರಿ ನದೀಮ್, ತೆಂಕ ಗ್ರಾ.ಪಂ. ಸದಸ್ಯರಾದ ಸಂತೋಷ್, ಮನೋಜ್ ಹಾಗೂ ಅಟೋ ಯೂನಿಯನ್ ಸದಸ್ಯರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.