• Home  
  • ಬಂಟ್ವಾಳ: ಕಾರಿಂಜ, ನರಹರಿ, ಏರಿಮಲೆ, ನೀಲಿ ದೇವಳದಲ್ಲಿ ತೀರ್ಥಸ್ನಾನ (Bantwala : Theertha snana at Karinja, narahari, Yerimale, Neeli Temple)
- ಧಾರ್ಮಿಕ

ಬಂಟ್ವಾಳ: ಕಾರಿಂಜ, ನರಹರಿ, ಏರಿಮಲೆ, ನೀಲಿ ದೇವಳದಲ್ಲಿ ತೀರ್ಥಸ್ನಾನ (Bantwala : Theertha snana at Karinja, narahari, Yerimale, Neeli Temple)

Share: (Bantwala) ಬಂಟ್ವಾಳ: ಕಾರಿಂಜ, ನರಹರಿ, ಏರಿಮಲೆ, ನೀಲಿ ದೇವಳದಲ್ಲಿ ತೀರ್ಥಸ್ನಾನ  ಬಂಟ್ವಾಳ: ಸಮುದ್ರ ಮಟ್ಟದಿಂದ ಸಾವಿರ ಆಡಿ ಎತ್ತರದ ಪ್ರಕೃತಿ ಸೌಂದರ್ಯದ ಮಡಿಲು. ಭೂಲೋಕದ ಕೈಲಾಸ ನರಹರಿ ಪರ್ವತದಲ್ಲಿ ಹಾಗೂ  ಪುರಾಣ ಪ್ರಸಿದ್ಧ ಮಹತೋಭಾರ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಭಾನುವಾರ ಆಟಿ ಅಮಾವಾಸ್ಯೆಯ ಪವಿತ್ರ ತೀರ್ಥಸ್ನಾನವು ಸಂಭ್ರಮ, ಸಡಗರದಿಂದ ನಡೆಯಿತು. ಸರ್ವರೋಗ ನಿವಾರಕ ಎಂಬ ನಂಬಿಕೆಯಿಂದ ಏಳು ಎಲೆಗಳ ವೃತ್ತಾಕಾರದ ಜೋಡಣೆಯ “ಸಪ್ತವರ್ಣ” ಪಾಲೆಯ ಮರದ ರಸವನ್ನು ಸೂರ್ಯೊದಯದ ಮೊದಲು ಸೇವಿಸುವ ತುಳುನಾಡಿನ ಪಾರಂಪರಿಕೆಯ ದಿನ […]

(Bantwala) ಬಂಟ್ವಾಳ: ಕಾರಿಂಜ, ನರಹರಿ, ಏರಿಮಲೆ, ನೀಲಿ ದೇವಳದಲ್ಲಿ ತೀರ್ಥಸ್ನಾನ

 ಬಂಟ್ವಾಳ: ಸಮುದ್ರ ಮಟ್ಟದಿಂದ ಸಾವಿರ ಆಡಿ ಎತ್ತರದ ಪ್ರಕೃತಿ ಸೌಂದರ್ಯದ ಮಡಿಲು. ಭೂಲೋಕದ ಕೈಲಾಸ ನರಹರಿ ಪರ್ವತದಲ್ಲಿ ಹಾಗೂ  ಪುರಾಣ ಪ್ರಸಿದ್ಧ ಮಹತೋಭಾರ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಭಾನುವಾರ ಆಟಿ ಅಮಾವಾಸ್ಯೆಯ ಪವಿತ್ರ ತೀರ್ಥಸ್ನಾನವು ಸಂಭ್ರಮ, ಸಡಗರದಿಂದ ನಡೆಯಿತು.
 ಸರ್ವರೋಗ ನಿವಾರಕ ಎಂಬ ನಂಬಿಕೆಯಿಂದ ಏಳು ಎಲೆಗಳ ವೃತ್ತಾಕಾರದ ಜೋಡಣೆಯ “ಸಪ್ತವರ್ಣ” ಪಾಲೆಯ ಮರದ ರಸವನ್ನು ಸೂರ್ಯೊದಯದ ಮೊದಲು ಸೇವಿಸುವ ತುಳುನಾಡಿನ ಪಾರಂಪರಿಕೆಯ ದಿನ ಆಟಿ ಅಮಾವಾಸ್ಯೆ ಪವಿತ್ರವಾಗಿದೆ.
 ಮುಂಜಾನೆಯೇ ಅಸಂಖ್ಯಾತ ಭಕ್ತರು ಮುಖ್ಯವಾಗಿ ನವ ವಧುವರರು ನರಹರಿ ಪರ್ವತವನ್ನೇರಿ ಶಂಖ, ಚಕ್ರ, ಗಧಾ, ಪದ್ಮಗಳೆಂಬ ನಾಲ್ಕು ಕೂಪಗಳಲ್ಲಿ ಮಿಂದು ವಿನಾಯಕ ಸದಾಶಿವ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪುನೀತರಾದರು.
 ಅದೇರೀತಿ ಬೃಹತ್‌ ಬಂಡೆಗಳಿಂದ ಆವೃತವಾದ ಗಿರಿಧಾಮದಲ್ಲಿರುವ ಆಕರ್ಷಣೀಯ, ಅತ್ಯಂತ ಪ್ರಾಚೀನವಾದ ಕಾರಿಂಜ ಕ್ಷೇತ್ರದ ದಕ್ಷಿಣ ಭಾಗದ ತಳದಲ್ಲಿರುವ ಗಧಾ ತೀರ್ಥವೆಂಬ ಸರೋವರದಲ್ಲಿ ಭಕ್ತಾಧಿಗಳು ಹಾಗೂ ವಿಶೇಷವಾಗಿ ನವದಂಪತಿಗಳು ಇಲ್ಲಿ ಪುಣ್ಯ ಸ್ನಾನಮಾಡಿ ಪಾರ್ವತಿ ಪರಮೇಶ್ವರರಿಗೆ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು.
 ಭಾನುವಾರವಾದುದರಿಂದ ಎರಡೂ ಕ್ಷೇತ್ರದಲ್ಲಿಯೂ ಮುಂಜಾನೆ ಸುಮಾರು ೩ ಗಂಟೆಯಿಂದಲೇ ಭಕ್ತರು ದೇವಳಕ್ಕಾಗಮಿಸಿ ತೀರ್ಥಸ್ನಾನ ಗೈದು ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದರು.

 ದೇವಳದಲ್ಲೇ ಭಕ್ತರಿಗೆ ಹಾಲೆಯ ಕೆತ್ತೆ ಕಷಾಯ ವಿತರಿಸಲಾಯಿತು. ದೇವಳದ ಪ್ರಮುಖರು, ಹಲವಾರು ಗಣ್ಯರು ಈ ಸಂದರ್ಭ ಉಪಸ್ಥಿತರಿದ್ದರು.
ಏರಮಲೆಯಲ್ಲಿ ತೀರ್ಥಸ್ನಾನ:
ನರಿಕೊಂಬು ಗ್ರಾಮದ ಶ್ರೀಕ್ಷೇತ್ರ ಏರಮಲೆ ಕಾಡೆದಿ ಭದ್ರಕಾಳಿ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆಯ ವಿಶೇಷ ತೀರ್ಥಸ್ನಾನವು ನಡೆಯಿತು.
 ಬ್ರಾಹ್ಮೀ ಮುಹೂರ್ತ 5.00 ಗಂಟೆಗೆ : ಗರ್ಭಗೃಹದ ಬಾಗಿಲು ತೆರೆದು ದೇವರಿಗೆ ಅಭಿಷೇಕ ನಡೆದ ಬಳಿಕ ಮಧ್ಯಾಹ್ನ 12.00 ಗಂಟೆ ತನಕ ಭಕ್ತಾಧಿಗಳಿಗೆ ಅಭಿಷೇಕ ಜಲದ ತೀರ್ಥಸ್ನಾನ, ದೇವರ ದರ್ಶನ, ವೀಳ್ಯದೆಲೆ -ಅಡಿಕೆ ಸಮರ್ಪಣೆಗೆ ಅವಕಾಶ ನೀಡಲಾಗಿತ್ತು.

ಸಾವಿರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು.ದೇವಳದ ಟ್ರಸ್ಟಿಗಳು ಉಪಸ್ಥಿತರಿದ್ದರು.
ಅದೇ ರೀತಿ ವಾಮದಪದವಿನ ನೀಲಿ ನೀಲಕಂಠೇಶ್ವರ ದೇವಳದಲ್ಲಿಯೂ ಆಟಿ ಅಮಾವಾಸ್ಯೆಯ ಪ್ರಯುಕ್ತ  ಕ್ಷೇತ್ರದ ಕಲ್ಲಮರಾಯಿ ಕೆರೆಯಲ್ಲಿ ಸ್ಥಳೀಯ ಭಕ್ತಾದಿಗಳು ತೀರ್ಥಸ್ನಾನಗೈದು ಪುನೀತರಾದರು.

ದೇವಳದ ಆಡಳಿತ ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.

2 Comments

  1. Anitha Mendonca

    4 August 2024

    So nice. God bless you all. I visited here 40 years back. thank you.

    • Admin

      4 August 2024

      OH NICE PALCE MADAM

Leave a comment

Your email address will not be published. Required fields are marked *

eMedia Kannada  @2025. All Rights Reserved.