• Home  
  • ತೆರೆ ಮೇಲೆ ಬರಲಿದೆ ಸಿಎಂ ಸಿದ್ದರಾಮಯ್ಯ ಜೀವನಾಧಾರಿತ ಸಿನಿಮಾ
- ರಾಜಕೀಯ

ತೆರೆ ಮೇಲೆ ಬರಲಿದೆ ಸಿಎಂ ಸಿದ್ದರಾಮಯ್ಯ ಜೀವನಾಧಾರಿತ ಸಿನಿಮಾ

Share: ತೆರೆ ಮೇಲೆ ಬರಲಿದೆ ಸಿಎಂ ಸಿದ್ದರಾಮಯ್ಯ ಜೀವನಾಧಾರಿತ ಸಿನಿಮಾ  ಬೆಂಗಳೂರು; ಟಗರು, ಮಾಸ್ ಲೀಡರ್ ಎಂದೆಲ್ಲ ಅಭಿಮಾನಿಗಳು ಮತ್ತು ಜನರಿಂದ ಕರೆಸಿಕೊಳ್ಳುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೀವನಾಧಾರಿತ ಸಿನಿಮಾ‌ ತೆರೆಗೆ ಬರಲಿದೆ ಎಂಬ ಮಾತು ವರ್ಷಗಳಿಂದಲೂ‌ ಕೇಳುತ್ತಲೇ ಇದೆ. ಸದ್ಯ, ಈ ಮಾತು ನಿಜವಾಗುವ ಸಮಯ ಬಂದಂತಿದೆ.‌   ರಾಜ್ಯದ 24ನೇ ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯ ಅವರ ಬಯೋಪಿಕ್ ತಯಾರಾಗುತ್ತಿದ್ದು, ಗಂಗಾವತಿ ಮೂಲದ ಹಯಾದ್ ಪಿರ್ ಎಂಬವರು ಈ ಬಯೋಪಿಕ್ ನಿರ್ಮಿಸುತ್ತಿದ್ದಾರೆ ಎನ್ನಲಾಗಿದೆ.  ಇನ್ನು ಈ ಬಯೋಪಿಕ್ […]

ತೆರೆ ಮೇಲೆ ಬರಲಿದೆ ಸಿಎಂ ಸಿದ್ದರಾಮಯ್ಯ ಜೀವನಾಧಾರಿತ ಸಿನಿಮಾ

 ಬೆಂಗಳೂರು; ಟಗರು, ಮಾಸ್ ಲೀಡರ್ ಎಂದೆಲ್ಲ ಅಭಿಮಾನಿಗಳು ಮತ್ತು ಜನರಿಂದ ಕರೆಸಿಕೊಳ್ಳುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೀವನಾಧಾರಿತ ಸಿನಿಮಾ‌ ತೆರೆಗೆ ಬರಲಿದೆ ಎಂಬ ಮಾತು ವರ್ಷಗಳಿಂದಲೂ‌ ಕೇಳುತ್ತಲೇ ಇದೆ. ಸದ್ಯ, ಈ ಮಾತು ನಿಜವಾಗುವ ಸಮಯ ಬಂದಂತಿದೆ.‌

  ರಾಜ್ಯದ 24ನೇ ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯ ಅವರ ಬಯೋಪಿಕ್ ತಯಾರಾಗುತ್ತಿದ್ದು, ಗಂಗಾವತಿ ಮೂಲದ ಹಯಾದ್ ಪಿರ್ ಎಂಬವರು ಈ ಬಯೋಪಿಕ್ ನಿರ್ಮಿಸುತ್ತಿದ್ದಾರೆ ಎನ್ನಲಾಗಿದೆ.

 ಇನ್ನು ಈ ಬಯೋಪಿಕ್ ನಲ್ಲಿ ಸಿದ್ದರಾಮಯ್ಯ ಅವರ ಪಾತ್ರವನ್ನು ದಕ್ಷಿಣ ಭಾರತದ ಖ್ಯಾತ ನಟ ವಿಜಯ್ ಸೇತುಪತಿ ನಿರ್ವಹಿಸಲಿದ್ದಾರೆ.

  ಈಗಾಗಲೇ ಚಿತ್ರತಂಡ ಸೇತುಪತಿಯವರನ್ನು ಸಂಪರ್ಕಿಸಿದ್ದು, ಬಯೋಪಿಕ್ ನಲ್ಲಿ ನಟಿಸಲು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.

 ಸಿದ್ದರಾಮಯ್ಯ ಅವರು ತಮ್ಮ ಜೀವನದಲ್ಲಿ ಲಾಯರ್ ಆಗಿ ಪ್ರಾಕ್ಟಿಸ್ ಮಾಡುತ್ತಿದ್ದ ಸಮಯದಿಂದ, ಈಗಿನ ಮುಖ್ಯಮಂತ್ರಿಯಾಗಿರುವ ತನಕದ ವಿಚಾರ ಬಯೋಪಿಕ್ ನಲ್ಲಿ ಇರಲಿದ್ದು, ಇದನ್ನು ವಿಜಯ್ ಸೇತುಪತಿ ನಿರ್ವಹಿಸಲಿದ್ದಾರೆ.

 ಇದರೊಂದಿಗೆ ಬಯೋಪಿಕ್ ನಲ್ಲಿ ಸಿದ್ದರಾಮಯ್ಯ ಅವರ ಪೂರ್ಣ ಜೀವನವನ್ನು ಚಿತ್ರತಂಡ ತೋರಿಸಲು ತಯಾರಿ ನಡೆಸಿದ್ದು, ಸಿದ್ದರಾಮಯ್ಯ ಅವರ ಬಾಲ್ಯ ಹಾಗೂ ಪ್ರೌಡಾವಸ್ಥೆಯ ಪಾತ್ರಕ್ಕೆ ಹೊಸ ಕಲಾವಿದನನ್ನು ಆಯ್ಕೆ ಮಾಡಿಕೊಳ್ಳಲಿದೆ ಎನ್ನಲಾಗಿದೆ.

 ಗೌರಿಬಿದನೂರು ಮೂಲದ ಸತ್ಯ ರತ್ನಂ ಎಂಬವರು ಈ ಬಯೋಪಿಕ್ ನಿರ್ದೇಶನ‌ ಮಾಡುತ್ತಿದ್ದು, ಸದ್ಯ ಫ್ರೀ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಜೊತೆಗೆ ಶಶಾಂಕ್ ಶೇಷಗಿರಿ ಸಂಗೀತ ನೀಡುತ್ತಿದ್ದಾರೆ.

 ಸಿದ್ದರಾಮಯ್ಯ ಅವರು ರಾಜ್ಯದ ಪ್ರಮುಖ ಮತ್ತು ಪ್ರಭಾವಿ ರಾಜಕೀಯ ನಾಯಕರಲ್ಲಿ ಪ್ರಮುಖರು. ಇವರ ವರ್ಚಸ್ಸಿಗೆ ರಾಜ್ಯದಾದ್ಯಂತ ಅದರದ್ದೇ ಆದ ಗೌರವವಿದೆ. ಇದೀಗ ಅವರ ಜೀವನಾಧಾರಿತ ಬಯೋಪಿಕ್ ತೆರೆಗೆ ಬರಲು ಸಜ್ಜಾಗಿದ್ದು, ದೊಡ್ಡ ಮಟ್ಟದಲ್ಲಿ ಈ ಬಯೋಪಿಕ್ ತಯಾರಾಗುತ್ತಿದೆ.

 ಇನ್ನುಳಿದಂತೆ ಬಯೋಪಿಕ್ ಯಾವಾಗ ಬಿಡುಗಡೆಯಾಗಲಿದೆ?, ವಿಜಯ್ ಸೇತುಪತಿ ಹೊರತುಪಡಿಸಿ ಇನ್ಯಾವ ಕಲಾವಿದರು ನಟನೆ ಮಾಡಲಿದ್ದಾರೆ ಎಂಬುದನ್ನೆಲ್ಲ ಇನ್ನಷ್ಟೇ ಕಾದು ನೋಡಬೇಕಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.