• Home  
  • ಕರ್ನಾಟಕಸೌಜನ್ಯಾ ಪ್ರಕರಣದ ನ್ಯಾಯ ಸಿಗೋವರೆಗೂ ಧರ್ಮಸ್ಥಳಕ್ಕೆ ಬರಲ್ಲ – ದುನಿಯಾ ವಿಜಯ್
- ಅಪರಾಧ

ಕರ್ನಾಟಕಸೌಜನ್ಯಾ ಪ್ರಕರಣದ ನ್ಯಾಯ ಸಿಗೋವರೆಗೂ ಧರ್ಮಸ್ಥಳಕ್ಕೆ ಬರಲ್ಲ – ದುನಿಯಾ ವಿಜಯ್

Share: ಕರ್ನಾಟಕಸೌಜನ್ಯಾ ಪ್ರಕರಣದ ನ್ಯಾಯ ಸಿಗೋವರೆಗೂ ಧರ್ಮಸ್ಥಳಕ್ಕೆ ಬರಲ್ಲ – ದುನಿಯಾ ವಿಜಯ್  ಬೆಂಗಳೂರು; ಸುಮಾರು 11 ವರ್ಷಗಳ ಹಿಂದೆ ನಡೆದ ದರ್ಮಸ್ಥಳದ ಸೌಜನ್ಯಾ ಕೊಲೆ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಸೌಜನ್ಯಾ ಕೇಸ್ ಬಗ್ಗೆ ಈಗಾಗಲೇ ಹಲವು ಗಣ್ಯರು, ಸೆಲೆಬ್ರಿಟಿಗಳು ಮಾತನಾಡಿದ್ದು, ನಟ ದುನಿಯ ವಿಜಯ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.  ಸೌಜನ್ಯಾ ಆತ್ಮಕ್ಕೆ ನ್ಯಾಯ ಸಿಗುವವರೆಗೂ ಧರ್ಮಸ್ಥಳ ಮಂಜುನಾಥನ ದರ್ಶನ ಮಾಡಕೂಡದು ಎನಿಸುತ್ತದೆ ಎಂದು ವಿಜಯ್ ಬರೆದುಕೊಂಡಿದ್ದಾರೆ.  ಈ ಕುರಿತು ಫೇಸ್ ಬುಕ್ ಖಾತೆಯಲ್ಲಿ […]

ಕರ್ನಾಟಕಸೌಜನ್ಯಾ ಪ್ರಕರಣದ ನ್ಯಾಯ ಸಿಗೋವರೆಗೂ ಧರ್ಮಸ್ಥಳಕ್ಕೆ ಬರಲ್ಲ – ದುನಿಯಾ ವಿಜಯ್

 ಬೆಂಗಳೂರು; ಸುಮಾರು 11 ವರ್ಷಗಳ ಹಿಂದೆ ನಡೆದ ದರ್ಮಸ್ಥಳದ ಸೌಜನ್ಯಾ ಕೊಲೆ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಸೌಜನ್ಯಾ ಕೇಸ್ ಬಗ್ಗೆ ಈಗಾಗಲೇ ಹಲವು ಗಣ್ಯರು, ಸೆಲೆಬ್ರಿಟಿಗಳು ಮಾತನಾಡಿದ್ದು, ನಟ ದುನಿಯ ವಿಜಯ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

 ಸೌಜನ್ಯಾ ಆತ್ಮಕ್ಕೆ ನ್ಯಾಯ ಸಿಗುವವರೆಗೂ ಧರ್ಮಸ್ಥಳ ಮಂಜುನಾಥನ ದರ್ಶನ ಮಾಡಕೂಡದು ಎನಿಸುತ್ತದೆ ಎಂದು ವಿಜಯ್ ಬರೆದುಕೊಂಡಿದ್ದಾರೆ.

 ಈ ಕುರಿತು ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಪ್ರತಿ ವರ್ಷ ಧರ್ಮಸ್ಥಳಕ್ಕೆ ತೆರಳುವುದು ವಾಡಿಕೆಯಾಗಿತ್ತು. ಆದರೆ ಸೌಜನ್ಯಾ ಪ್ರಕರಣದ ಬೆಳವಣಿಗೆ ಮನಸ್ಸಿಗೆ ಘಾಸಿ ಉಂಟು ಮಾಡಿದೆ. ಸೌಜನ್ಯಾ ಮತ್ತು ಆಕೆಯ ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೆ ಮಂಜುನಾಥನ ದರ್ಶನ ಮಾಡಕೂಡದು ಎನಿಸುತ್ತಿದೆ. ಸತ್ಯ ಎಂಬುದು ಸೂರ್ಯನ ಬೆಳಕಿನಂತೆ. ಯಾರೂ ಹೆಚ್ಚು ಸಮಯ ಮರೆಮಾಚಲಾಗದು ಎಂದು ಬುದ್ದ ಹೇಳಿದ್ದಾರೆಂದು ವಿಜಯ್ ಬರೆದುಕೊಂಡಿದ್ದಾರೆ.

  ಉಜಿರೆ ಎಸ್.ಡಿ.ಎಂ. ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಸೌಜನ್ಯಾ ಮೇಲೆ ಅಕ್ಟೋಬರ್ 9, 2012ರಂದು ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಆರೋಪಿ ಸಂತೋಷ್ ರಾವ್ ನನ್ನು ಇತ್ತೀಚೆಗೆ ಖುಲಾಸೆಗೊಳಿಸಲಾಗಿತ್ತು.

Leave a comment

Your email address will not be published. Required fields are marked *

eMedia Kannada  @2025. All Rights Reserved.