ತೊಕ್ಕೊಟ್ಟುವಿನಲ್ಲಿ ರೌಡಿ ಶೀಟರ್ ಬರ್ಬರ ಹತ್ಯೆ
ಕಿನ್ಯಾ ಅಜ್ಜಿನಡ್ಕ ನಿವಾಸಿ ಆರಿಫ್ (46) ಕೊಲೆಯಾದವರು.
(Thokkottu) ತೊಕ್ಕೊಟ್ಟು : ದಕ್ಷಿಣ ಕನ್ನಡ ಜಿಲ್ಲೆಯ ತೊಕ್ಕೊಟ್ಟುವಿನಲ್ಲಿ ಇಂದು ಬೆಳಿಗ್ಗೆ ರೌಡಿಶೀಟರ್ ಒಬ್ಬನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಘಟಿಸಿದೆ.
ಕಿನ್ಯಾ ಅಜ್ಜಿನಡ್ಕ ನಿವಾಸಿ ಆರಿಫ್ (46) ಯಾನೆ ಟ್ಯಾಬ್ಲೆಟ್ ಆರೀಫ್ ಕೊಲೆಯಾದವರು.
ಇಂದು ಬೆಳಿಗ್ಗೆ ಅವರು ಬೈಕಿನಲ್ಲಿ ಬರುತ್ತಿದ್ದಾಗ ಅವರನ್ನು ಫ್ಲೈ ಓವರ್ ಬಳಿ ಅಡ್ಡಗಟ್ಟಿದ ಆರೋಪಿಗಳು ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ.
ಆರಿಫ್ ಹತ್ತಾರು ಅಪರಾಧ ಪ್ರಕರಣಗಳಲ್ಲಿ ಭಾಗಿ ಆಗಿದ್ದು, ಅವರನ್ನು ರೌಡಿ ಶೀಟರ್ ಎಂದು ಘೋಷಿಸಲಾಗಿದೆ ಎಂದು ತಿಳಿದುಬಂದಿದೆ.
ಉನ್ನತ ಪೊಲೀಸ್ ಅಧಿಕಾರಿಗಳು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

