• Home  
  • ದಕ್ಷಿಣ ಕನ್ನಡ ಮೊಗವೀರ ಹಿತ ಸಾಧನ ವೇದಿಕೆ ವತಿಯಿಂದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ (DK Mogveera Hitha Sadhana vedike organize Prathibha Puraskara, honor for achivers)
- ಸಂಘ, ಸಂಸ್ಥೆಗಳು

ದಕ್ಷಿಣ ಕನ್ನಡ ಮೊಗವೀರ ಹಿತ ಸಾಧನ ವೇದಿಕೆ ವತಿಯಿಂದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ (DK Mogveera Hitha Sadhana vedike organize Prathibha Puraskara, honor for achivers)

Share: ದಕ್ಷಿಣ ಕನ್ನಡ ಮೊಗವೀರ ಹಿತ ಸಾಧನ ವೇದಿಕೆ ವತಿಯಿಂದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ (Uchila) ಉಚ್ಚಿಲ: ದಕ್ಷಿಣ ಕನ್ನಡ ಮೊಗವೀರ ಹಿತ ಸಾಧನ ವೇದಿಕೆಯ ವತಿಯಿಂದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಭಾನುವಾರ ಮೊಗವೀರ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮವನ್ನು ಮುಂಬಯಿ ಮೊಗವೀರ ಬ್ಯಾಂಕಿನ ಮಾಜಿ ನಿರ್ದೇಶಕಿ ಹಾಗೂ ನಿವೃತ್ತ ಶಿಕ್ಷಕಿ ಶ್ರೀಮತಿ ಯಶೋಧಾ ನಾರಾಯಣ ಪುತ್ರನ್‌ ಉದ್ಘಾಟಿಸಿದರು. ಅವರು ಈ […]

ದಕ್ಷಿಣ ಕನ್ನಡ ಮೊಗವೀರ ಹಿತ ಸಾಧನ ವೇದಿಕೆ ವತಿಯಿಂದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ

(Uchila) ಉಚ್ಚಿಲ: ದಕ್ಷಿಣ ಕನ್ನಡ ಮೊಗವೀರ ಹಿತ ಸಾಧನ ವೇದಿಕೆಯ ವತಿಯಿಂದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಭಾನುವಾರ ಮೊಗವೀರ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮವನ್ನು ಮುಂಬಯಿ ಮೊಗವೀರ ಬ್ಯಾಂಕಿನ ಮಾಜಿ ನಿರ್ದೇಶಕಿ ಹಾಗೂ ನಿವೃತ್ತ ಶಿಕ್ಷಕಿ ಶ್ರೀಮತಿ ಯಶೋಧಾ ನಾರಾಯಣ ಪುತ್ರನ್‌ ಉದ್ಘಾಟಿಸಿದರು.

ಅವರು ಈ ಸಂದರ್ಭ ಮಾತನಾಡಿ, ನಮ್ಮ ಕಲಿಕೆಗೆ ಧನ ಸಹಾಯ ಮಾಡುವ ಸಂಸ್ಥೆಯನ್ನು ಎಂದಿಗೂ ಮರೆಯಬಾರದು. ನಮ್ಮ ಕಲಿಕಾ ನಂತರದ ದಿನದಲ್ಲಿ ನಮ್ಮ ಗಳಿಕೆಯ ಒಂದಂಶವನ್ನು ನಾವು ಲಾಭ ಪಡೆದ ಸಂಸ್ಥೆಗೆ ನೀಡಿದಾಗ ಸಿಗುವ ಆನಂದ ಅಪರಿಮಿತವಾಗಿದೆ ಎಂದು ಹೇಳಿದರು.

ದಕ್ಷಿಣ ಕನ್ನಡ ಮೊಗವೀರ ಹಿತ ಸಾಧನ ವೇದಿಕೆಯ ಅಧ್ಯಕ್ಷ ಸರ್ವೋತ್ತಮ ಕುಂದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕೇತು ಮರಕಾಲ ಮನೆ ದಿ. ಸಂಕಪ್ಪ ಪುತ್ರನ್‌ ಸ್ಮಾರಕ ದತ್ತಿ ನಿಧಿ ಮತ್ತು ಇತರ ದತ್ತಿನಿಧಿಗಳಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಸಹಾಯ ವಿತರಿಸಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.

ಕೊಪ್ಪಳದಿಂದ ಶಿರೂರುವರೆಗಿನ300 ವಿದ್ಯಾರ್ಥಿಗಳಿಗೆ ಸುಮಾರು 4 ಲಕ್ಷ ರೂ ವಿದ್ಯಾರ್ಥಿವೇತನ ವಿತರಿಸಲಾಯಿತು.

ವೇದಿಕೆಯಲ್ಲಿ ಮಹಾಲಕ್ಷ್ಮೀ ವಿದ್ಯಾ ಸಂಸ್ಥೆಯ ಸಂಚಾಲಕ  ಎಚ್‌ ಗಂಗಾಧರ ಕರ್ಕೇರಾ ಹೊಸಬೆಟ್ಟು, ಪ್ರಧಾನ ಕಾರ್ಯದರ್ಶಿ ಸುಧಾಕರ ಕರ್ಕೇರ, ಉದ್ಯಮಿ ಯು. ಗಣೇಶ್‌, ಜೆ.ಪಿ ರಾಮ ಶ್ರೀಯಾನ್‌, ಹೇಮಾನಂದ ಕೆ ಪುತ್ರನ್‌, ಸಮಿತಿಯ ಉಪಾಧ್ಯಕ್ಷರಾದ ಸತೀಶ್‌ ಆರ್‌ ಸಾಲ್ಯಾನ್‌, ಎಚ್‌ ರವಿ ಕುಂದರ್‌, ಕೋಶಾಧಿಕಾರಿ ವೇದವ್ಯಾಸ ಬಂಗೇರ, ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಗಿರಿಧರ ಸುವರ್ಣ ಮೂಳೂರು, ಮೊಗವೀರ ಮಹಾಜನ ಸಂಘದ ಪ್ರಧಾನ ಕಾರ್ಯದರ್ಶಿ ಶರಣ್‌ ಕುಮಾರ್‌ ಮಟ್ಟು, ಶಾಲಾ ಪ್ರಾಂಶುಪಾಲೆ ಶ್ರೀಮತಿ ನವ್ಯ ವೇದಿಕೆಯಲ್ಲಿದ್ದರು.  

ಗಂಗಾಧರ ಎಚ್ ಕರ್ಕೆರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್ ಡಿ ಬಂಗೇರ ಸ್ವಾಗತಿಸಿದರು. ದಿವಾಕರ ಹೆಜ್ಮಾಡಿ ನಿರೂಪಿಸಿದರು ಮತ್ತು ಸುಧಾಕರ ಕರ್ಕೇರಾ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.