ಎರ್ಮಾಳು ಕುದ್ರೋಟ್ಟು ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ
(Yermal) ಎರ್ಮಾಳು ; ಎರ್ಮಾಳು ಕುದ್ರೋಟ್ಟು ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ವತಿಯಿಂದ ಭಾನುವಾರ ಗರಡಿ ಆವರಣದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭ 15 ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು ಹಾಗೂ ಸಾಧಕರಿಗೆ ಸನ್ಮಾನ ನೆರವೇರಿತು.
ಈ ಸಂದರ್ಭ ಎರ್ಮಾಳು ಕುದ್ರೋಟ್ಟು ಬ್ರಹ್ಮ ಬೈದರ್ಕಳ ಗರಡಿ ಅಧ್ಯಕ್ಷ ಸುಖೇಶ್ ಪೂಜಾರಿ, ಉಪಾಧ್ಯಕ್ಷ ವಸಂತ ಪೂಜಾರಿ, ಕಾರ್ಯದರ್ಶಿ ರಮೇಶ್ ಜಿ. ಅಂಚನ್, ಕೋಶಾಧಿಕಾರಿ ಸುನಿಲ್ ಪೂಜಾರಿ, ಕೋಟಿ ಚೆನ್ನಯ ಯುವ ಬಿಲ್ಲವ ಬಳಗದ ಅಧ್ಯಕ್ಷ ಸತೀಶ್ ಪೂಜಾರಿ ಮೂಡಬೆಟ್ಟು, ಕಾರ್ಯದರ್ಶಿ ರೋಹಿತ್, ಕೋಶಾಧಿಕಾರಿ ಅಕ್ಷಯ್, ಉಪಾಧ್ಯಕ್ಷ ಸುಜಿತ್ ಪೂಜಾರಿ, ಬೈದಶ್ರೀ ಮಹಿಳಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಸಬಿತಾ ಸೋಮನಾಥ್, ಉಪಾಧ್ಯಕ್ಷೆ ಶ್ರೀಮತಿ ನಿರ್ಮಲಾ, ಕಾರ್ಯದರ್ಶಿ ಶ್ರೀಮತಿ ಶಕುಂತಲಾ ಶಶಿ, ಕೋಶಾಧಿಕಾರಿ ಶ್ರೀಮತಿ ಶಕುಂತಲಾ ಶಶಿಧರ್, ಗುರಿಕಾರ ಶಂಕರ ಪೂಜಾರಿ, ಗರಡಿ ಮನೆ ಶಶಿ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

