• Home  
  •  ದಾವಣಗೆರೆ : ಸೌಮ್ಯಾ ಪೆರ್ನಾಜೆ ಅವರಿಗೆ “ಸರಸ್ವತಿ ಸಾಧಕ ಸಿರಿ” ರಾಷ್ಟ್ರಪ್ರಶಸ್ತಿ ಪ್ರಧಾನ (Davangere: Soumya Pernaje gets National Award “Saraswati Sadhaka Siri”)
- CONGARTULATIONS

 ದಾವಣಗೆರೆ : ಸೌಮ್ಯಾ ಪೆರ್ನಾಜೆ ಅವರಿಗೆ “ಸರಸ್ವತಿ ಸಾಧಕ ಸಿರಿ” ರಾಷ್ಟ್ರಪ್ರಶಸ್ತಿ ಪ್ರಧಾನ (Davangere: Soumya Pernaje gets National Award “Saraswati Sadhaka Siri”)

Share: ದಾವಣಗೆರೆ : ಸೌಮ್ಯಾ ಪೆರ್ನಾಜೆ ಅವರಿಗೆ “ಸರಸ್ವತಿ ಸಾಧಕ ಸಿರಿ” ರಾಷ್ಟ್ರಪ್ರಶಸ್ತಿ ಪ್ರಧಾನ ಪುತ್ತೂರು: ದಾವಣಗೆರೆ ಚೆನ್ನಗಿರಿ ವಿರೂಪಾಕ್ಷ ಕಲ್ಯಾಣ ಮಂಟಪದಲ್ಲಿ ಕನ್ನಡ, ನಾಡು, ನುಡಿ, ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಪ್ರಕಾರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದನ್ನು ಪರಿಗಣಿಸಿ ಕಲಾಕೃತಿ ಸಾಂಸ್ಕೃತಿಕ ಸಂಸ್ಥೆಯು ಸಹಯೋಗದಲ್ಲಿ 70ನೇ ಕನ್ನಡ ನಿತ್ಯೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ಸರಸ್ವತಿ ಸಾಧಕ ಸಿರಿ 2025 ರಾಷ್ಟ್ರ ಪ್ರಶಸ್ತಿಯನ್ನು ಬರಹಗಾರ್ತಿ ಸೌಮ್ಯಾ ಪೆರ್ನಾಜೆಯವರಿಗೆ ಪ್ರದಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಲಾಕೃತಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ […]

ಪುತ್ತೂರು: ದಾವಣಗೆರೆ ಚೆನ್ನಗಿರಿ ವಿರೂಪಾಕ್ಷ ಕಲ್ಯಾಣ ಮಂಟಪದಲ್ಲಿ ಕನ್ನಡ, ನಾಡು, ನುಡಿ, ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಪ್ರಕಾರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದನ್ನು ಪರಿಗಣಿಸಿ ಕಲಾಕೃತಿ ಸಾಂಸ್ಕೃತಿಕ ಸಂಸ್ಥೆಯು ಸಹಯೋಗದಲ್ಲಿ 70ನೇ ಕನ್ನಡ ನಿತ್ಯೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ಸರಸ್ವತಿ ಸಾಧಕ ಸಿರಿ 2025 ರಾಷ್ಟ್ರ ಪ್ರಶಸ್ತಿಯನ್ನು ಬರಹಗಾರ್ತಿ ಸೌಮ್ಯಾ ಪೆರ್ನಾಜೆಯವರಿಗೆ ಪ್ರದಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಲಾಕೃತಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಗಣೇಶ ಶೆಣೈ  ಪ್ರಶಸ್ತಿ ಪ್ರಧಾನಿಸಿದರು.

 ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷರಾದ ನಾಗರಾಜ್ ಬೈರಿ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

  ಮುಖ್ಯ ಅತಿಥಿ ನಾಗೇಶ್ ಕಿಣಿ, ಅಧ್ಯಕ್ಷರು ಶ್ರೀಮತಿ ಸರಸ್ವತಿ ದಾಸಪ್ಪ ಸೇನೆ ಪ್ರತಿಷ್ಠಾನ ಸಾಲಿಗ್ರಾಮ ದಾವಣಗೆರೆ ಡ ನಾ ಗಂಗಾಧರಪ್ಪ, ಮೈಸೂರು ನಾಗರತ್ನ ಎಸ್ ಶೆಟ್ಟಿ, ಸಂಗೀತ ಪ್ರಸನ್ನ ನಾಡಿಗ, ಆಶಾ ಆಡಿಗ ಆಚಾರ್, ಜ್ಯೋತಿ ಗಣೇಶ, ಶ್ರೀಮತಿ ಸರಸ್ವತಿ ದಾಸಪ್ಪ, ಹೆಚ್ ಮಂಜುನಾಥ್, ರಾಘವೇಂದ್ರ ಶೆಣೈ, ಕುಮಾರ್ ಪೆರ್ನಾಜೆ, ಸವಿತಾ ಕೋಡಂದೂರ್   ಹಾಗೂ ವಿವಿಧ ರಾಜ್ಯದ ಗಣ್ಯರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.