ದೃಶ್ಯ – ಧ್ವನಿ ಸುರುಳಿ ‘ಶ್ರೀ ಸುಮುಖನ ಭಕ್ತ‘ ಸಹಕರಿಸಿದವರಿಗೆ ಸನ್ಮಾನ
ಡಾ. ಜಿ. ಶಂಕರ್ ರವರ 70ನೇ ಜನ್ಮ ದಿನದಂದು ಬಿಡುಗಡೆಗೊಂಡ ಧ್ವನಿ ಸುರುಳಿ
(Udupi) ಉಡುಪಿ : ನಾಡೋಜ ಡಾ. ಜಿ. ಶಂಕರ್ ರವರ 70ನೇ ಜನ್ಮ ದಿನದಂದು ಬಿಡುಗಡೆಗೊಂಡ ದೃಶ್ಯ – ಧ್ವನಿ ಸುರುಳಿ ‘ಶ್ರೀ ಸುಮುಖನ ಭಕ್ತ’ ರಚನೆ ಮಾಡಿದ ಶ್ರೀಮತಿ ಲಲಿತಾ ಯು ಕಾಂಚನ್, ರಾಗ ಸಂಯೋಜಕ ಪ್ರಸನ್ನ ಭಟ್, ನಾಯಕರಾದ ಪ್ರಸನ್ನ ಭಟ್, ಬಾಲಕೃಷ್ಣ ಕೊಡವೂರು, ನಿಹಾರಿಕಾ ಮಲ್ಪೆ ಮತ್ತು ಚಿತ್ರ ಕೃಪೆ ಮಾಡಿದ ಸುರಭಿ ರತನ್ ಇವರನ್ನು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಟ್ರಸ್ಟಿ ಎಸ್ ಕೆ. ಆನಂದ್ ಗೌರವಿಸಿದರು.
ಈ ಸಂದರ್ಭದಲ್ಲಿ ಫ್ಯಾಮಿಲಿ ಟ್ರಸ್ಟಿನ ಶಂಕರ್ ಸಾಲ್ಯಾನ್, ಸಚಿನ್ ಆನಂದ್, ದ.ಕ.ಮೊಗವೀರ ದ. ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್ ಬೆಳ್ಳಂಪಳ್ಳಿ, ಉದಯ ಕುಮಾರ್ ಹಟ್ಟಿಯಂಗಡಿ, ಎಂ.ಎಂ. ಸುವರ್ಣ ಉಪಸ್ಥಿತರಿದ್ದರು.

