• Home  
  • ಪತ್ರಕರ್ತ ಜನಾರ್ದನ್​ ಕೊಡವೂರುರವರಿಗೆ ಮಹರ್ಷಿ ವಾಲ್ಮೀಕಿ ಸಮ್ಮಾನ್​ ಪ್ರಶಸ್ತಿ ಪ್ರದಾನ (Journalist Janardhan Kodavooru presented with Maharishi Valmiki Samman Award)
- ಸಂಘ, ಸಂಸ್ಥೆಗಳು - ಸನ್ಮಾನ, ಅಭಿನಂದನೆ

ಪತ್ರಕರ್ತ ಜನಾರ್ದನ್​ ಕೊಡವೂರುರವರಿಗೆ ಮಹರ್ಷಿ ವಾಲ್ಮೀಕಿ ಸಮ್ಮಾನ್​ ಪ್ರಶಸ್ತಿ ಪ್ರದಾನ (Journalist Janardhan Kodavooru presented with Maharishi Valmiki Samman Award)

Share: ಪತ್ರಕರ್ತ ಜನಾರ್ದನ್​ ಕೊಡವೂರುರವರಿಗೆ ಮಹರ್ಷಿ ವಾಲ್ಮೀಕಿ ಸಮ್ಮಾನ್​ ಪ್ರಶಸ್ತಿ ಪ್ರದಾನ ವಾಲ್ಮೀಕಿ ನಾಡುಕಂಡ ಶ್ರೇಷ್ಠ ಸಂತ : ಉಡುಪಿ ಶಾಸಕ ಯಶ್ಪಾಲ್​ ಸುವರ್ಣ (Udupi) ಉಡುಪಿ: ವಾಲ್ಮೀಕಿ ನಾಡುಕಂಡ ಶ್ರೇಷ್ಠ ಸಂತ. ಬದುಕಿನಲ್ಲಿ ಪರಿವರ್ತನೆ ಮೂಲಕ ವ್ಯಕ್ತಿ ಎಷ್ಟು ಉನ್ನತ ಸ್ಥಾನಕ್ಕೆ ತಲುಪಬಹುದು ಎಂಬುದಕ್ಕೆ ವಾಲ್ಮೀಕಿ ಮಾದರಿ. ಅವರ ಆದರ್ಶಗಳನ್ನು ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಉಡುಪಿ ಶಾಸಕ ಯಶ್ಪಾಲ್​ ಸುವರ್ಣ ಹೇಳಿದರು.​   ಮಹರ್ಷಿ ವಾಲ್ಮೀಕಿ ಸಂದ ಆಶ್ರಯದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಸಮ್ಮಾನ್​ […]

(Udupi) ಉಡುಪಿ: ವಾಲ್ಮೀಕಿ ನಾಡುಕಂಡ ಶ್ರೇಷ್ಠ ಸಂತ. ಬದುಕಿನಲ್ಲಿ ಪರಿವರ್ತನೆ ಮೂಲಕ ವ್ಯಕ್ತಿ ಎಷ್ಟು ಉನ್ನತ ಸ್ಥಾನಕ್ಕೆ ತಲುಪಬಹುದು ಎಂಬುದಕ್ಕೆ ವಾಲ್ಮೀಕಿ ಮಾದರಿ. ಅವರ ಆದರ್ಶಗಳನ್ನು ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಉಡುಪಿ ಶಾಸಕ ಯಶ್ಪಾಲ್​ ಸುವರ್ಣ ಹೇಳಿದರು.​

  ಮಹರ್ಷಿ ವಾಲ್ಮೀಕಿ ಸಂದ ಆಶ್ರಯದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಸಮ್ಮಾನ್​ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

   ಈ ಸಂದರ್ಭದಲ್ಲಿ ​ಸಂಘಟಕ, ಹಿರಿಯ ಛಾಯಾಚಿತ್ರ ಪತ್ರಕರ್ತ ಜನಾರ್ದನ್​ ಕೊಡವೂರು ಅವರಿಗೆ ಮಹರ್ಷಿ ವಾಲ್ಮೀಕಿ ಸಮ್ಮಾನ್​​ 2025 ಪ್ರಶಸ್ತಿ ನೀಡಿ ಗೌರವಿಸಲಾಯಿತು.​

   ಸಂಸತಿ ವಿಶ್ವ ಪ್ರತಿಷ್ಠಾನ ಸ್ಥಾಪಕ ಉಡುಪಿ ವಿಶ್ವನಾಥ ಶೆಣೈ ಅಧ್ಯಕ್ಷತೆ ವಹಿಸಿದ್ದರು. ​ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್ ಅಭಿನಂದನಾ ಮಾತುಗಳನ್ನಾಡಿದರು. 

    ಜಿಲ್ಲಾ ಸಹಕಾರಿ ಯೂನಿಯನ್​ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಗಾಂಧಿ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ. ಹರೀಶ್ಚಂದ್ರ, ಕಸಾಪ ​ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್​ ಎಚ್​.ಪಿ., ಗ್ರಾಮೀಣ ಬ್ಯಾಂಕ್​ ಹಿರಿಯ ವ್ಯವಸ್ಥಾಪಕ ಕೆ. ರಾ​ಘವೇಂದ್ರ ಉಪಾಧ್ಯಾಯ, ಜಿಲ್ಲಾ ಕನಕದಾಸ ಸೇವಾ ಸಂ​ಘದ ನಿಕಟಪೂರ್ವ ಅಧ್ಯಕ್ಷ ಹನುಮಂತ ಆಡಿನ​, ಮಹರ್ಷಿ ವಾಲ್ಮೀಕಿ​ ಸಂಘದ ಗೋಪಾಲ್​ ದೇವದುರ್ಗ​,​ ಪೂರ್ಣಿಮಾ ಜನಾರ್ದನ್, ರಂಜನಿ ವಸಂತ್, ಪದ್ಮಾಸಿನಿ, ವಸಂತ್, ದೀಪಾ ಕರ್ಕಿ  ಉಪಸ್ಥಿತರಿದ್ದರು.

​    ಸಾಹಿತಿ ಡಾ. ನಿಕೇತನ ಉಪನ್ಯಾಸ ನೀಡಿದರು.

   ವಾಲ್ಮೀಕಿ ಸಂದ ಗೌರವಾಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಸ್ವಾಗತಿಸಿದರು. ರಾ​ಘವೇಂದ್ರ ಪ್ರಭು ನಿರೂಪಿಸಿದರು. ರಾಜೇಶ್​ ಭಟ್​ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.