• Home  
  • ದೊಡ್ಡಣಗುಡ್ಡೆ ಶ್ರೀ ರಮಾನಂದ ಗುರೂಜಿ ಅವರಿಗೆ ‘ರಾಷ್ಟ್ರೀಯ ಧಾರ್ಮಿಕ ರತ್ನ ಪ್ರಶಸ್ತಿ’ ಪ್ರದಾನ (Awarded ‘National Religious Gem Award’ to Sri Ramananda Guruji of Dodnagudde)
- ಸಂಘ, ಸಂಸ್ಥೆಗಳು - ಸನ್ಮಾನ, ಅಭಿನಂದನೆ

ದೊಡ್ಡಣಗುಡ್ಡೆ ಶ್ರೀ ರಮಾನಂದ ಗುರೂಜಿ ಅವರಿಗೆ ‘ರಾಷ್ಟ್ರೀಯ ಧಾರ್ಮಿಕ ರತ್ನ ಪ್ರಶಸ್ತಿ’ ಪ್ರದಾನ (Awarded ‘National Religious Gem Award’ to Sri Ramananda Guruji of Dodnagudde)

Share: ದೊಡ್ಡಣಗುಡ್ಡೆ ಶ್ರೀ ರಮಾನಂದ ಗುರೂಜಿ ಅವರಿಗೆ‘ರಾಷ್ಟ್ರೀಯ ಧಾರ್ಮಿಕ ರತ್ನ ಪ್ರಶಸ್ತಿ’ ಪ್ರದಾನ ಸುರ್ವೆ ಕಲ್ಚರಲ್ ಅಕಾಡೆಮಿ ವತಿಯಿಂದ ಕೊಡಲ್ಪಡುವ   ಪ್ರಶಸ್ತಿ (Udupi) ಉಡುಪಿ : ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಆಡಳಿತ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಅವರಿಗೆ ಸುರ್ವೆ ಕಲ್ಚರಲ್ ಅಕಾಡೆಮಿ ವತಿಯಿಂದ ಕೊಡಲ್ಪಡುವ ‘ರಾಷ್ಟ್ರೀಯ ಧಾರ್ಮಿಕ ರತ್ನ ಪ್ರಶಸ್ತಿ’ಪ್ರದಾನ ಸಮಾರಂಭ ಶ್ರೀ ಕ್ಷೇತ್ರ ದೊಡ್ಡಣಗುಡ್ಡೆಯಲ್ಲಿ ನಡೆಯಿತು.     ಪ್ರಶಸ್ತಿ ಪ್ರದಾನ ನೆರವೇರಿಸಿದ ಸುರ್ವೆ ಕಲ್ಚರಲ್ ಅಕಾಡೆಮಿ ಅಧ್ಯಕ್ಷ ರಮೇಶ್ […]

(Udupi) ಉಡುಪಿ : ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಆಡಳಿತ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಅವರಿಗೆ ಸುರ್ವೆ ಕಲ್ಚರಲ್ ಅಕಾಡೆಮಿ ವತಿಯಿಂದ ಕೊಡಲ್ಪಡುವ ‘ರಾಷ್ಟ್ರೀಯ ಧಾರ್ಮಿಕ ರತ್ನ ಪ್ರಶಸ್ತಿ’ಪ್ರದಾನ ಸಮಾರಂಭ ಶ್ರೀ ಕ್ಷೇತ್ರ ದೊಡ್ಡಣಗುಡ್ಡೆಯಲ್ಲಿ ನಡೆಯಿತು.

    ಪ್ರಶಸ್ತಿ ಪ್ರದಾನ ನೆರವೇರಿಸಿದ ಸುರ್ವೆ ಕಲ್ಚರಲ್ ಅಕಾಡೆಮಿ ಅಧ್ಯಕ್ಷ ರಮೇಶ್ ಸುರ್ವೆ ಮಾತನಾಡಿ, ರಮಾನಂದ ಗುರೂಜಿಯವರು ಧಾರ್ಮಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅಪಾರವಾದುದು. ವ್ಯಕ್ತಿಯೋರ್ವ ತನ್ನ ಕಠಿನ ಪ್ರಯತ್ನ, ನಿರಂತರ ಪರಿಶ್ರಮದ ಮೂಲಕ ಏನನ್ನು ಬೇಕಾದರೂ ಸಾಧನೆ ಮಾಡಿ ತೋರಿಸಬಹುದು ಎಂಬುದಕ್ಕೆ ಗುರೂಜಿಯವರು ಜ್ವಲಂತ ಸಾಕ್ಷಿಯಾಗಿದ್ದಾರೆ ಎಂದರು.

    ಚಿತ್ರನಟಿ ಮೀನಾ ಅವರು ಮಾತನಾಡಿ, ಗುರೂಜಿಯವರು ಕೇವಲ ಸಂಕಷ್ಟಗಳಿಗೆ ಪರಿಹಾರ ದೊರಕಿಕೊಡುವುದಲ್ಲದೆ, ಕಂಗೆಟ್ಟವರಿಗೆ ಸಮರ್ಪಕವಾದ ಶಾಶ್ವತ ಪರಿಹಾರ ಸೂಚಿಸುತ್ತಾ ಬಂದಿದ್ದಾರೆ. ಕಳೆದ 15 ವರ್ಷಗಳಿಂದ ಹೆಜ್ಜೆ ಹೆಜ್ಜೆಗೂ ಗುರೂಜಿಯವರ ಮಾರ್ಗದರ್ಶನ ಪಡೆಯುತ್ತಿದ್ದೇನೆ ಎಂದರು.

   ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಉಷಾ ರಮಾನಂದ, ಉದ್ಯಮಿಗಳಾದ ದೀಪಕ್ ಕುಮಾರ್, ಆನಂದ ಬಾಯರಿ, ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್, ಪ್ರಧಾನ ಅರ್ಚಕ ಅನೀಶ್ ಆಚಾರ್ಯ, ನ್ಯಾಯವಾದಿಗಳಾದ ಇ. ಬಾಲಸುಬ್ರಮಣ್ಯ, ಶಿವಪ್ರಸಾದ್ ಹೆಗ್ಡೆ, ಪ್ರಸನ್ನ ಕುಮಾರ್, ಗಣ್ಯರು, ಹಿತೈಷಿಗಳು, ಕ್ಷೇತ್ರದ ಸಿಬಂದಿ, ಭಕ್ತರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.