• Home  
  • ದ್ವೇಷ ಭಾಷಣ ಪ್ರಕರಣ; ಬಜರಂಗದಳದ ರಘು ಸಹಚರರ ಬಂಧನ
- ಅಪರಾಧ

ದ್ವೇಷ ಭಾಷಣ ಪ್ರಕರಣ; ಬಜರಂಗದಳದ ರಘು ಸಹಚರರ ಬಂಧನ

Share: ಸಕಲೇಶಪುರ; ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂದಿಸಿದಂತೆ ತಲೆಮರೆಸಿಕೊಂಡಿರುವ ಬಜರಂಗದಳದ ರಘುವಿನ ಐವರು ಸಹಚರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಬಗ್ಗೆ ವರದಿಯಾಗಿದೆ. ಬಜರಂಗದಳ ಸಕ್ರಿಯ ಕಾರ್ಯಕರ್ತ ಶ್ರೀಕಾಂತ್, ಶ್ರೀಜೀತ್, ಪ್ರತಾಪ್, ಹಾಗೂ ಇತರೆ ಇಬ್ಬರನ್ನೂ ಬಂದಿಸಲಾಗಿದೆ ಎಂದು ತಿಳಿದು ಬಂದಿದೆ. ಸಕಲೇಶಪುರ ತಾಲೂಕಿನ ವಿವಿಧ ಪ್ರದೇಶದಿಂದ ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ. ರಘು ಬಂಧನಕ್ಕೆ ಶೋಧ ಕಾರ್ಯ ಮುಂದುವರಿದಿದೆ.‌ ಗೋ ಹತ್ಯೆ ತಡೆಯುವಲ್ಲಿ ಪೋಲಿಸ್ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ ಸಕಲೇಶಪುರ ಪಟ್ಟಣದಲ್ಲಿ ಶುಕ್ರವಾರ ನಡೆದ ಬಜರಂಗದಳದ […]

ಸಕಲೇಶಪುರ; ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂದಿಸಿದಂತೆ ತಲೆಮರೆಸಿಕೊಂಡಿರುವ ಬಜರಂಗದಳದ ರಘುವಿನ ಐವರು ಸಹಚರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಬಗ್ಗೆ ವರದಿಯಾಗಿದೆ.

ಬಜರಂಗದಳ ಸಕ್ರಿಯ ಕಾರ್ಯಕರ್ತ ಶ್ರೀಕಾಂತ್, ಶ್ರೀಜೀತ್, ಪ್ರತಾಪ್, ಹಾಗೂ ಇತರೆ ಇಬ್ಬರನ್ನೂ ಬಂದಿಸಲಾಗಿದೆ ಎಂದು ತಿಳಿದು ಬಂದಿದೆ.

ಸಕಲೇಶಪುರ ತಾಲೂಕಿನ ವಿವಿಧ ಪ್ರದೇಶದಿಂದ ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ. ರಘು ಬಂಧನಕ್ಕೆ ಶೋಧ ಕಾರ್ಯ ಮುಂದುವರಿದಿದೆ.‌

ಗೋ ಹತ್ಯೆ ತಡೆಯುವಲ್ಲಿ ಪೋಲಿಸ್ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ ಸಕಲೇಶಪುರ ಪಟ್ಟಣದಲ್ಲಿ ಶುಕ್ರವಾರ ನಡೆದ ಬಜರಂಗದಳದ ಪ್ರತಿಭಟನೆಯಲ್ಲಿ ರಘು, ತರಕಾರಿ, ಮೀನು ಮಾರಾಟ ಮಾಡಲು ಹಿಂದೂಗಳ ಮನೆಯ ಬಳಿ ಬರುವಂತ ವ್ಯಾಪಾರಿಗಳು ಎಚ್ಚರಿಕೆಯಿಂದಿರಿ, ಇಲ್ಲಾಂದ್ರೆ ನಮ್ಮಲ್ಲಿರುವ ಕೋವಿಯೊಳಗಿನ ಗುಂಡು ಹೊರಗಡೆ ಬರುತ್ತೆ, ನಾವು ಕೂಡ ಗುಂಡು ಹಾರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದ.

ಈ ಕುರಿತ ವಿಡಿಯೋ ಕೂಡ ವೈರಲ್ ಆಗಿತ್ತು.

Leave a comment

Your email address will not be published. Required fields are marked *

eMedia Kannada  @2025. All Rights Reserved.