ನರ್ಸಿಂಗ್ ವಿದ್ಯಾರ್ಥಿಗಳಿಗಾಗಿ ಆಟಿಸಂ ಸ್ಪೆಕ್ಟ್ರಮ್ ಕುರಿತು ಕಾರ್ಯಾಗಾರ
ಉಡುಪಿಯ ಕಮಲ್ ಎ ಬಾಳಿಗಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ
(Udupi) ಉಡುಪಿ: ಆಟಿಸಂ ಸೊಸೈಟಿ ಆಫ್ ಉಡುಪಿ, ರೋಟರಿ ಕ್ಲಬ್ ಮಣಿಪಾಲ, ಡಾ ಎವಿ ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ, ಕಮಲ್ ಎ ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ, ಮಣಿಪಾಲದ ಆಶ್ರಿತ್ ಕಾಲೇಜ್ ಆಫ್ ನರ್ಸಿಂಗ್ ಮತ್ತು ಮಣಿಪಾಲದ ಆರೋಗ್ಯ ವೃತ್ತಿಪರರ ಕಾಲೇಜು ಸಹಯೋಗದೊಂದಿಗೆ ನರ್ಸಿಂಗ್ ವಿದ್ಯಾರ್ಥಿಗಳಿಗಾಗಿ ಆಟಿಸಂ ಸ್ಪೆಕ್ಟ್ರಮ್ ಅಸ್ವಸ್ಥತೆಗಳ ಕುರಿತು ಕಾರ್ಯಾಗಾರ ಶನಿವಾರ ಉಡುಪಿಯ ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ಕಮಲ್ ಎ ಬಾಳಿಗಾ ಸಭಾಂಗಣದಲ್ಲಿ ನಡೆಯಿತು.
ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ನಿರ್ದೇಶಕರಾದ ಡಾ. ಪಿ.ವಿ. ಭಂಡಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಇಂತಹ ಜಾಗ್ರತಿ ಕಾರ್ಯಕ್ರಮಗಳ ಅವಶ್ಯಕತೆ ಕುರಿತು ಮಾತನಾಡಿದರು.
ಮಣಿಪಾಲ ರೋಟರಿ ಕ್ಲಬ್ ಅಧ್ಯಕ್ಷೆ ಶಶಿಕಲಾ ರಾಜವರ್ಮ ಮತ್ತು ಮೆಲ್ವಿನ್ ಅತಿಥಿಗಳಾಗಿದ್ದರು.
ಡಾ. ಸುಪ್ರಿಯಾ, ಡಾ. ಸುನಿಲ ಜಾನ್, ಕೇಶವ್ ರಾಮ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
ಮಣಿಪಾಲದ ಆಕ್ಯುಪೇಶನಲ್ ಥೆರಪಿ ವಿಧ್ಯಾರ್ಥಿಗಳಿಂದ ಆಟಿಸಂ ಕುರಿತು ಕಿರು ನಾಟಕ ಪ್ರದರ್ಶನಗೊಂಡಿತು.
ಬೇಬಿ ಶ್ರಾವಣಿ ಪ್ರಾರ್ಥಿಸಿದರು. ಆಟಿಸಂ ಸೊಸೈಟಿಯ ಅಧ್ಯಕ್ಷ ಡಾ. ವಿರೂಪಾಕ್ಷ ದೇವರಮನೆ ಸ್ವಾಗತಿಸಿದರು. ಸಫಾನ್ ಕಾರ್ಯಕ್ರಮ ನಿರೂಪಿಸಿದರು. ಕೀರ್ತೇಶ್ ವಂದಿಸಿದರು.

