• Home  
  • ನಿಟ್ಟೆ : ಬ್ರಾಂಚ್ ಅಸೋಸಿಯೇಷನ್, ವಿದ್ಯಾರ್ಥಿ ಚಟುವಟಿಕೆ ಉದ್ಘಾಟನೆ (Nitte: Branch Association, student activity inauguration)
- ಶಾಲಾ ಕಾಲೇಜು - ಸಂಘ, ಸಂಸ್ಥೆಗಳು

ನಿಟ್ಟೆ : ಬ್ರಾಂಚ್ ಅಸೋಸಿಯೇಷನ್, ವಿದ್ಯಾರ್ಥಿ ಚಟುವಟಿಕೆ ಉದ್ಘಾಟನೆ (Nitte: Branch Association, student activity inauguration)

Share: ನಿಟ್ಟೆ : ಬ್ರಾಂಚ್ ಅಸೋಸಿಯೇಷನ್, ವಿದ್ಯಾರ್ಥಿ ಚಟುವಟಿಕೆ ಉದ್ಘಾಟನೆ ನಿಟ್ಟೆಯ ಎನ್ಎಂಎಎಂಐಟಿಯಲ್ಲಿ ನಡೆದ ಕಾರ್ಯಕ್ರಮ (Nitte) ನಿಟ್ಟೆ:  ಬ್ರಾಂಚ್ ಅಸೋಸಿಯೇಷನ್ ಮತ್ತು ವಿದ್ಯಾರ್ಥಿಗಳ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ನಿಟ್ಟೆಯ ಎನ್ಎಂಎಎಂಐಟಿಯ ಬಿ.ಸಿ. ಆಳ್ವ ಕ್ರೀಡಾ ಸಂಕೀರ್ಣದ ಸದಾನಂದ ಸಭಾಂಗಣದಲ್ಲಿ ನಡೆಯಿತು. ಕಾಗ್ನಿಜೆಂಟ್ ಟೆಕ್ನಾಲಜಿ ಸೊಲ್ಯೂಷನ್ಸ್ ಇಂಡಿಯಾದ ಹಿರಿಯ ವ್ಯವಸ್ಥಾಪಕ  ನಿಟ್ಟೆ ಕಾಲೇಜಿನ ಹಳೆಯ ವಿದ್ಯಾರ್ಥಿ ವಿಜೇಶ್ ಕಾಮತ್ ಉದ್ಘಾಟಿಸಿದರು. ಅವರು ಮಾತನಾಡಿ, ವಿದ್ಯಾರ್ಥಿಗಳ ವೃತ್ತಿ ಜೀವನವನ್ನು ರೂಪಿಸುವಲ್ಲಿ ನಾವೀನ್ಯತೆ, ನಾಯಕತ್ವ ಮತ್ತು ತಂಡದ ಕೆಲಸದ ಮಹತ್ವ […]

(Nitte) ನಿಟ್ಟೆ:  ಬ್ರಾಂಚ್ ಅಸೋಸಿಯೇಷನ್ ಮತ್ತು ವಿದ್ಯಾರ್ಥಿಗಳ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ನಿಟ್ಟೆಯ ಎನ್ಎಂಎಎಂಐಟಿಯ ಬಿ.ಸಿ. ಆಳ್ವ ಕ್ರೀಡಾ ಸಂಕೀರ್ಣದ ಸದಾನಂದ ಸಭಾಂಗಣದಲ್ಲಿ ನಡೆಯಿತು.

ಕಾಗ್ನಿಜೆಂಟ್ ಟೆಕ್ನಾಲಜಿ ಸೊಲ್ಯೂಷನ್ಸ್ ಇಂಡಿಯಾದ ಹಿರಿಯ ವ್ಯವಸ್ಥಾಪಕ  ನಿಟ್ಟೆ ಕಾಲೇಜಿನ ಹಳೆಯ ವಿದ್ಯಾರ್ಥಿ ವಿಜೇಶ್ ಕಾಮತ್ ಉದ್ಘಾಟಿಸಿದರು.

ಅವರು ಮಾತನಾಡಿ, ವಿದ್ಯಾರ್ಥಿಗಳ ವೃತ್ತಿ ಜೀವನವನ್ನು ರೂಪಿಸುವಲ್ಲಿ ನಾವೀನ್ಯತೆ, ನಾಯಕತ್ವ ಮತ್ತು ತಂಡದ ಕೆಲಸದ ಮಹತ್ವ ಬಹಳಷ್ಟು ಇದೆ. ವಿವಿಧ ಸವಾಲುಗಳನ್ನು ಜೀವನದಲ್ಲಿನ ಅವಕಾಶಗಳಾಗಿ ರೂಪಿಸಿಕೊಳ್ಳಬಹುದಾಗಿದೆ. ವಿವಿಧ ಕೌಶಲ್ಯಗಳನ್ನು ಹೆಚ್ಚಿಸುವುದರೊಂದಿಗೆ ನಾವು ಸಾಮಾಜಿಕ ಸಂಸ್ಕಾರಗಳನ್ನು ಬೆಳೆಸಿಕೊಳ್ಳುವುದು ಅತಿ ಅಗತ್ಯ ಎಂದರು.

  ಎನ್ಎಂಎಎಂಐಟಿ ಪ್ರಾಂಶುಪಾಲ ಡಾ.ನಿರಂಜನ್ ಎನ್. ಚಿಪ್ಲುಂಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಕ್ರಿಯಾತ್ಮಕ ಜಗತ್ತಿನಲ್ಲಿ ನಿರಂತರ ಕಲಿಕೆ ಮತ್ತು ಕೌಶಲ್ಯ ಅಭಿವೃದ್ಧಿಯ ಅಗತ್ಯ ಹೆಚ್ಚುತ್ತಿದೆ. ಸಂಘ ನೇತೃತ್ವದ ಉಪಕ್ರಮಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವಲ್ಲಿ ವಿವಿಧ ಇಲಾಖೆಗಳ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು.  ಸಮಗ್ರ ಬೆಳವಣಿಗೆಗಾಗಿ ಇಂತಹ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ 15 ವಿಭಾಗಗಳ ವಿದ್ಯಾರ್ಥಿ ಪದಾಧಿಕಾರಿಗಳಿಗೆ ವಿಭಾಗಗಳ ಬ್ಯಾಡ್ಜ್ ಗಳನ್ನು ವಿತರಿಸಲಾಯಿತು.

 ಸ್ಟೂಡೆಂಟ್ ವೆಲ್ಫೇರ್ ವಿಭಾಗದ ಡೀನ್ ಡಾ. ನರಸಿಂಹ ಕೆ. ಬೈಲ್ಕೇರಿ ನೂತನ ವಿದ್ಯಾರ್ಥಿ ನಾಯಕರಿಗೆ ಪ್ರಮಾಣ ವಚನ ಬೋಧಿಸಿದರು.

ಎನ್ಎಂಎಎಂಐಟಿ ಉಪ ಪ್ರಾಂಶುಪಾಲ ಡಾ. ನಾಗೇಶ್ ಪ್ರಭು ಸ್ವಾಗತಿಸಿದರು. ವಿದ್ಯಾರ್ಥಿನಿ ಐಶ್ವರ್ಯ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ವಿದ್ಯಾರ್ಥಿಗಳಾದ ಮಯೂರ್ ಪಿ ಮತ್ತು ಶರಣ್ಯ ಗಣೇಶ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

  ಸಮಾರಂಭದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.