• Home  
  •   ಮುಂಡ್ಕೂರು :  ಶ್ರೀ ಗಣೇಶ ವಿಸರ್ಜನಾ ಮೆರವಣಿಗೆ (Mundkur: Shri Ganesh Visarjana procession)
- ಧಾರ್ಮಿಕ

  ಮುಂಡ್ಕೂರು :  ಶ್ರೀ ಗಣೇಶ ವಿಸರ್ಜನಾ ಮೆರವಣಿಗೆ (Mundkur: Shri Ganesh Visarjana procession)

Share:   ಮುಂಡ್ಕೂರು :  ಶ್ರೀ ಗಣೇಶ ವಿಸರ್ಜನಾ ಮೆರವಣಿಗೆ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ (Mundkuru) ಮುಂಡ್ಕೂರು : ಮುಂಡ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ ಶ್ರೀ ಗಣೇಶ ವಿಸರ್ಜನಾ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು.  ಮಧ್ಯಾಹ್ನ ಗಣಪತಿ ದೇವರಿಗೆ ಅಪ್ಪ ಸೇವೆ, ಮಹಾ ಮಂಗಳಾರತಿ ಬಳಿಕ ಅನ್ನಸಂತರ್ಪಣೆ ನೆರವೇರಿತು.  ಸಂಜೆ ಸಾರ್ವಜನಿಕರಿಗೆ ವಿವಿಧ ಆಟೋ ಸ್ಪರ್ಧೆಗಳು ನಡೆಯಿತು. ಮೆರವಣಿಗೆಯಲ್ಲಿ ಹುಲಿ ವೇಷ, ಮರ ಕಾಲು ಕುಣಿತ ವಿವಿಧ ವೇಷಧಾರಿಗಳು  ಡೊಳ್ಳು ಕುಣಿತ, ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ, […]

(Mundkuru) ಮುಂಡ್ಕೂರು : ಮುಂಡ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ ಶ್ರೀ ಗಣೇಶ ವಿಸರ್ಜನಾ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು.

 ಮಧ್ಯಾಹ್ನ ಗಣಪತಿ ದೇವರಿಗೆ ಅಪ್ಪ ಸೇವೆ, ಮಹಾ ಮಂಗಳಾರತಿ ಬಳಿಕ ಅನ್ನಸಂತರ್ಪಣೆ ನೆರವೇರಿತು.

 ಸಂಜೆ ಸಾರ್ವಜನಿಕರಿಗೆ ವಿವಿಧ ಆಟೋ ಸ್ಪರ್ಧೆಗಳು ನಡೆಯಿತು.

ಮೆರವಣಿಗೆಯಲ್ಲಿ ಹುಲಿ ವೇಷ, ಮರ ಕಾಲು ಕುಣಿತ ವಿವಿಧ ವೇಷಧಾರಿಗಳು  ಡೊಳ್ಳು ಕುಣಿತ, ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ, ವಿವಿಧ ಬಗೆಯ ಟ್ಯಾಬ್ಲೋಗಳು ಮೆರವಣಿಗೆಯ ವಿಶೇಷವಾಗಿತ್ತು .

 ಭಾರ್ಗವ ವೇದಿಕೆಯಿಂದ ಹೊರಟ ಗಣಪತಿಯ ಮೃಣ್ಮಯ ಮೂರ್ತಿಯ ವಿಸರ್ಜನಾ ಮೆರವಣಿಗೆ ಪಡಿತ್ತಾರ್, ಜಾರಿಗಕಟ್ಟೆ ಮಾರ್ಗವಾಗಿ ಸಾಗಿ ಸಂಕಲಕರಿಯ ಶಾಂಭವಿ ನದಿಯಲ್ಲಿ ಜಲಸ್ತಂಬನಗೊಳಿಸಲಾಯಿತು.

Leave a comment

Your email address will not be published. Required fields are marked *

eMedia Kannada  @2025. All Rights Reserved.