ನಿರಂತರ ಪರಿಶ್ರಮ, ಶ್ರದ್ದೆಯಿದ್ದಾಗ ಮಾತ್ರ ಸಾಧಕರಾಗಲು ಸಾಧ್ಯ : ಸ್ವರೂಪ್ ಶೆಟ್ಟಿ
ಬೆಳ್ಮಣ್ ವಿಠೋಭ ಭಜನಾ ಮಂದಿರದಲ್ಲಿ ನಡೆದ ಕರಾಟೆ ಕಪ್ಪುಪಟ್ಟಿ ಪರೀಕ್ಷೆ
(Belman) ಬೆಳ್ಮಣ್ : ಸಾಧನೆ ಎನ್ನುವುದು ಸುಲಭದ ಮಾತಲ್ಲ. ನಿರಂತರ ಪರಿಶ್ರಮ ಹಾಗೂ ಶ್ರದ್ದೆಯಿದ್ದಾಗ ಮಾತ್ರ ಸಾಧಕರಾಗಲು ಸಾಧ್ಯ. ಕರಾಟೆ ಕಲೆ ಇತರ ಎಲ್ಲಾ ಕಲೆಗಳಿಗಿಂದ ಭಿನ್ನವಾಗಿದೆ. ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಇರುವ ಕಲೆಯಾಗಿದ್ದು, ಇದರಿಂದ ದೈಹಿಕ ಹಾಗೂ ಮಾನಸಿಕವಾಗಿಗೂ ಸಾಕಷ್ಟು ಪ್ರಯೋಜನವಿದೆ. ಕರಾಟೆ ಕ್ಷೇತ್ರದಲ್ಲಿ ತೊಡಗಿಕೊಂಡ ವ್ಯಕ್ತಿ ಜೀವನದಲ್ಲಿ ಶಿಸ್ತು ಹಾಗೂ ಗೌರವದಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ ಎಂದು ಯುವ ಉದ್ಯಮಿ ಸ್ವರೂಪ್ ಶೆಟ್ಟಿ ಹೇಳಿದರು.
ಕರಾಟೆ ಬುಡೋಕನ್ ಇಂಟರ್ನ್ಯಾಷನಲ್ ವತಿಯಿಂದ ಕುಬುಡೋ ಬುಡೋಕನ್ ಕರಾಟೆ-ಡು, ಬುಡೋಕನ್ ಕರಾಟೆ ಮತ್ತು ಸೆಲ್ಫ್ ಡಿಫೆನ್ಸ್, ಬುಡೋಕನ್ ಕರಾಟೆ ಹಾಗೂ ಮಾರ್ಷಲ್ -ಡೋ, ಜೆಬಿಎಸ್ ಕ್ರೀಡಾ ಕರಾಟೆ ಅಕಾಡೆಮಿ ಸಹಯೋಗದಲ್ಲಿ ಬೆಳ್ಮಣ್ ವಿಠೋಭ ಭಜನಾ ಮಂದಿರದಲ್ಲಿ ನಡೆದ ರಾಜ್ಯ ಮಟ್ಟದ ಕಪ್ಪು ಪಟ್ಟಿ ಕರಾಟೆ ಪರೀಕ್ಷೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಕರಾಟೆ ಪಟು ರುದ್ರ ಪಾಟೀಲ್ ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಕರಾಟೆ ಶಿಕ್ಷಕ ಸಂಘದ ಅಧ್ಯಕ್ಷ ಮಹಮ್ಮದ್ ನಧೀಮ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬುಡೋಕನ್ ಕರಾಟೆ ಇಂಟರ್ ನ್ಯಾಷನಲ್ನ ಏಷ್ಯನ್ ಮುಖ್ಯ ಶಿಕ್ಷಕ ಬಿ. ಪರಮೇಶ್, ಉಡುಪಿ ಜಿಲ್ಲಾ ಸ್ಪೋಟ್ಸ್ ಅಸೋಸಿಯೇಷನ್ನ ಅಧ್ಯಕ್ಷ ಕೀರ್ತಿ ಜಿ.ಕೆ, ಕುಬುಡೋ ಬುಡೋಕನ್ ಕರಾಟೆ ಅಧ್ಯಕ್ಷ ರವಿಕುಮಾರ ಉದ್ಯಾವರ, ಬುಡೋಕನ್ ಕರಾಟೆ ಮತ್ತು ಸೆಲ್ಫ್ ಡಿಫೆನ್ಸ್ನ ಮುಖ್ಯ ಶಿಕ್ಷಕ ಲಕ್ಷ್ಮೀನಾರಾಯಣ ಆಚಾರ್ಯ, ಜೆಬಿಎಸ್ ಸ್ಪೋರ್ಟ್ಸ್ ಕರಾಟೆ ಅಕಾಡೆಮಿ ಬೆಳಗಾವಿಯ ಮುಖ್ಯ ಶಿಕ್ಷಕ ಮಹಾರುದ್ರ ಯಮ್ಮಿ, ಕುಮುಟಾ ಕರಾಟೆ ಮುಖ್ಯ ಶಿಕ್ಷಕ ಅರವಿಂದ ನಾಯ್ಕ್, ಕರಾಟೆ ಮುಖ್ಯ ಶಿಕ್ಷಕಾರದ ಪ್ರವೀಣ್ ಭಟ್ಟಳ, ವಿಶಾಲ್ ನಾಯ್ಕ್ ಕಾರವಾರ, ವಿಜಯ್ ಶೆಟ್ಟಿ ಬೈಂದೂರು, ಶ್ರೀಧರ್ ಬೈಂದೂರು ಮತ್ತಿತರರು ಉಪಸ್ಥಿತರಿದ್ದರು.
ಸಂಘಟಕ ಹಾಗೂ ಬುಡೋಕನ್ ಕರಾಟೆ ಮತ್ತು ಮಾರ್ಷಲ್ ಆರ್ಟ್ಸ್ ಮುಖ್ಯ ಶಿಕ್ಷಕ ಸತೀಶ್ ಬೆಳ್ಮಣ್ ಸ್ವಾಗತಿಸಿದರು. ವೀಣೇಶ್ ಅಮೀನ್ ಸಾಂತೂರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ರಾಜ್ಯದ ಒಟ್ಟು 80 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದರು.

