ನಿರಂತರ ಯೋಗ ಮಾಡುವುದರಿಂದ ಮನುಷ್ಯನ ರೋಗ ದೂರ : ಡಾ. ಎನ್ ಟಿ ಅಂಚನ್
(Padubidri) ಪಡುಬಿದ್ರಿ: ನಿರಂತರ ಯೋಗ ಮಾಡುವುದರಿಂದ ಮನುಷ್ಯನ ದೇಹದಲ್ಲಿ ಯಾವುದೇ ರೀತಿಯ ಖಾಯಿಲೆ ಬಾಧಿಸುವ ಸಾಧ್ಯತೆಗಳಿಲ್ಲ ಎಂದು ಏಎಫ್ಐ ಅಧ್ಯಕ್ಷ ಡಾ. ಎನ್ ಟಿ ಅಂಚನ್ ಹೇಳಿದರು.
ಅವರು ಜೇಸಿ ಪಡುಬಿದ್ರಿ, ಹಟಯೋಗ ಶಿಕ್ಷಣ ಸಮಿತಿ ಪಡುಬಿದ್ರಿ, ಆಯುಷ್ ಫೆಡರೇಶನ್ ಆಫ್ ಇಂಡಿಯಾ ಉಡುಪಿ ಜಿಲ್ಲೆ, ಆಭರಣ ಜ್ಯುವೆಲ್ಲರ್ಸ್ ಪಡುಬಿದ್ರಿ ಇವರ ಜಂಟಿ ಆಶ್ರಯದಲ್ಲಿ ಪಡುಬಿದ್ರಿ ಬಂಟರ ಭವನದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ನಿರಂತರ ಯೋಗ ಮಾಡುವುದರಿಂದ ಔಷಧಿ ರಹಿತವಾಗಿ ಬದುಕಲು ಸಾಧ್ಯ. ದಿನದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಒಂದು ಘಂಟೆ ಯೋಗಕ್ಕೆ ಮೀಸಲಿಡಿ. ಇದರಿಂದ ಔಷಧಿ ಇಲ್ಲದೆ ಆಯುಷ್ಯ ವೃದ್ಧಿ ಹಾಗೂ ಇದ್ದಷ್ಟು ದಿನ ಆರೋಗ್ಯ ವಂತರಾಗಿ ಬದುಕಲು ಸಾಧ್ಯ ಎಂದರು.
ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾಧ್ಯಕ್ಷ ವಿಷ್ಣು ಮೂರ್ತಿ ಆಚಾರ್ಯ ಶಾಂತಿ ಮಂತ್ರ ಪಠಿಸಿ ಉದ್ಘಾಟನೆ ಮಾಡಿದರು.
ಹಠಯೋಗ ಶಿಕ್ಷಣ ಸಮಿತಿಯ ಅಧ್ಯಕ್ಷ ಡಾ. ಮನೋಜ್ ಕುಮಾರ್ ಶೆಟ್ಟಿ ಮತ್ತು ಯೋಗ ತರಬೇತು ದಾರ ಮಕರಂದ ಸಾಲ್ಯಾನ್ ಯೋಗ ಶಿಬಿರ ನಡೆಸಿದರು.
ಜೇಸಿ ಪಡುಬಿದ್ರಿ ಯ ಅಧ್ಯಕ್ಷೆ ಶ್ರುತಿ ಆಚಾರ್, ಯೋಗ ಪಟು ಜಗದೀಶ್ ಆಚಾರ್ಯ, ಪತಂಜಲಿ ಯೋಗ ಪಟು ಸಂತೋಷ್ ಶೆಟ್ಟಿ, ಆಭರಣ ಜ್ಯುವೆಲ್ಲರ್ಸ್ ನ ಪ್ರಬಂಧಕ ವರುಣ್, ಅಂತಾರಾಷ್ಟ್ರೀಯ ಜೇಸಿ ತರಬೇತುದಾರ ವೈ. ಸುಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಜಯ ಶೆಟ್ಟಿ ಪದ್ರ ಕಾರ್ಯಕ್ರಮ ನಿರೂಪಿಸಿದರು.

