• Home  
  •  ನ. 28ರಂದು ಉಡುಪಿಗೆ ಮೋದಿ, ಅಧಿಕೃತವಾಗಿ ಪಿಎಂ ಕಛೇರಿಯಿಂದ ಮಾಹಿತಿ (Modi to visit Udupi on Nov. 28, official information from PM’s office)
- ಧಾರ್ಮಿಕ - ರಾಜಕೀಯ

 ನ. 28ರಂದು ಉಡುಪಿಗೆ ಮೋದಿ, ಅಧಿಕೃತವಾಗಿ ಪಿಎಂ ಕಛೇರಿಯಿಂದ ಮಾಹಿತಿ (Modi to visit Udupi on Nov. 28, official information from PM’s office)

Share: ನ. 28ರಂದು ಉಡುಪಿಗೆ ಮೋದಿ, ಅಧಿಕೃತವಾಗಿ ಪಿಎಂ ಕಛೇರಿಯಿಂದ ಮಾಹಿತಿ ಪುತ್ತಿಗೆ ಮಠದ ಲಕ್ಷಕಂಠ ಗೀತಾ ಪಾರಾಯಣದಲ್ಲಿ ಭಾಗಿ ಆಗಲಿರುವ ಪ್ರಧಾನಿ ಮೋದಿ (Udupi) ಉಡುಪಿ, : ಪರ್ಯಾಯ ಶ್ರೀ ಪುತ್ತಿಗೆ ಮಠದ ಆಯೋಜನೆಯಲ್ಲಿ ಉಡುಪಿಯ ಶ್ರೀ ಕೃಷ್ಣಮಠದಲ್ಲಿ ನಡೆಯುತ್ತಿರುವ ಬೃಹತ್ ಗೀತೋತ್ಸವದ ಪ್ರಯುಕ್ತ ನ. 28ರಂದು ಜರಗಲಿರುವ ಲಕ್ಷಕಂಠ ಗೀತಾ ಪಾರಾಯಣಕ್ಕೆ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಆಗಮಿಸಲಿರುವುದು ದೃಡ ಪಟ್ಟಿದೆ.    ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತಕ್ಕೆ ಅಗತ್ಯ ಸಿದ್ಧತೆಗಳನ್ನು […]

(Udupi) ಉಡುಪಿ, : ಪರ್ಯಾಯ ಶ್ರೀ ಪುತ್ತಿಗೆ ಮಠದ ಆಯೋಜನೆಯಲ್ಲಿ ಉಡುಪಿಯ ಶ್ರೀ ಕೃಷ್ಣಮಠದಲ್ಲಿ ನಡೆಯುತ್ತಿರುವ ಬೃಹತ್ ಗೀತೋತ್ಸವದ ಪ್ರಯುಕ್ತ ನ. 28ರಂದು ಜರಗಲಿರುವ ಲಕ್ಷಕಂಠ ಗೀತಾ ಪಾರಾಯಣಕ್ಕೆ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಆಗಮಿಸಲಿರುವುದು ದೃಡ ಪಟ್ಟಿದೆ.

   ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಪ್ರಧಾನಮಂತ್ರಿ ಕಚೇರಿಯಿಂದ ಸೂಚನೆ ನೀಡಲಾಗಿದೆ.

   ಪ್ರಧಾನಮಂತ್ರಿ ಕಾರ್ಯಾಲಯದಿಂದ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದ್ದು, ಹೆಲಿಪ್ಯಾಡ್ ಸಹಿತ ಅಗತ್ಯ ಸಿದ್ಧತೆ ಮಾಡಿಕೊಳ್ಳುವುದರ ಜತೆಗೆ ಭದ್ರತೆಗೆ ಸಂಬಂಧಿಸಿ ಎಸ್‌ಪಿಜಿ ಸಂಪರ್ಕಕ್ಕೂ ಸೂಚನೆ ನೀಡಲಾಗಿದೆ. ಮುಂದಿನ ಎರಡು ಮೂರು ದಿನಗಳಲ್ಲಿ ಎಸ್‌ಪಿಜಿ ತಂಡವೂ ಉಡುಪಿಗೆ ಆಗಮಿಸಿ ಪ್ರಧಾನಿ ಭೇಟಿಯ ಸಂದರ್ಭ ಆಗಬೇಕಾದ ಭದ್ರತಾ ವ್ಯವಸ್ಥೆಗಳ   ಪರಿಶೀಲನೆ ನಡೆಸಲಿದೆ.

    ಪ್ರಧಾನಿ ಮೋದಿಯವರು ನ. 28ರ ಬೆಳಗ್ಗೆ 8.15ರ ಸುಮಾರಿಗೆ ವಾಯುಪಡೆ ವಿಮಾನದಲ್ಲಿ ದೆಹಲಿಯಿಂದ ಹೊರಟು 11.05ರ ಸುಮಾರಿಗೆ ಮಂಗಳೂರು ವಿಮಾನ ನಿಲ್ದಾಣ ತಲುಪಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಉಡುಪಿಯ ಆದಿಉಡುಪಿ ಹೆಲಿಪ್ಯಾಡ್‌ ಗೆ 11.35ಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ರಸ್ತೆಯ ಮೂಲಕ ಶ್ರೀ ಕೃಷ್ಣಮಠಕ್ಕೆ ಮಧ್ಯಾಹ್ನ 12 ಗಂಟೆಗೆ ಆಗಮಿಸಲಿದ್ದಾರೆ. ಶ್ರೀ ಕೃಷ್ಣಮಠದಲ್ಲಿ ದೇವರ ದರ್ಶನ ಪಡೆದು ಅನಂತರ ಗೀತಾಮಂದಿರಕ್ಕೆ ಭೇಟಿ ನೀಡಿ, ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರೊಂದಿಗೆ ಮಾತುಕತೆ ನಡೆಸಲಿದ್ದಾರೆ.

   ಬಳಿಕ ಪಾರ್ಕಿಂಗ್ ಪ್ರದೇಶದ ಸಮೀಪದಲ್ಲಿ ನಡೆಯಲಿರುವ ಲಕ್ಷಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

   ಮಧ್ಯಾಹ್ನ 1.30ರ ಸುಮಾರಿಗೆ ಉಡುಪಿಯಿಂದ ಹೆಲಿಕಾಪ್ಟರ್ ಮೂಲಕ ಮಂಗಳೂರಿಗೆ ಹೊರಟು, ಅಲ್ಲಿಂದ ವಾಯುಪಡೆ ವಿಮಾನದಲ್ಲಿ ಗೋವಾಗೆ ಪ್ರಯಾಣ ಬೆಳೆಸಲಿದ್ದಾರೆ. ಗೋವಾದಲ್ಲಿ ಪರ್ತಗಾಳಿ ಮಠದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿಯನ್ನು ಪ್ರಧಾನ ಮಂತ್ರಿ ಕಾರ್ಯಾಲಯ ಸ್ಪಷ್ಠ ಪಡಿಸಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.