• Home  
  • ಜಿಲ್ಲಾ ಮಟ್ಟದ ರಾಜ್ಯಶಾಸ್ತ್ರ ಉಪನ್ಯಾಸಕರ ಪುನಃ ಚೇತನ ಕಾರ್ಯಾಗಾರ (Reinvigoration Workshop for District Level Political Science Lecturers)
- Uncategorised

ಜಿಲ್ಲಾ ಮಟ್ಟದ ರಾಜ್ಯಶಾಸ್ತ್ರ ಉಪನ್ಯಾಸಕರ ಪುನಃ ಚೇತನ ಕಾರ್ಯಾಗಾರ (Reinvigoration Workshop for District Level Political Science Lecturers)

Share: ಜಿಲ್ಲಾ ಮಟ್ಟದ ರಾಜ್ಯಶಾಸ್ತ್ರ ಉಪನ್ಯಾಸಕರ ಪುನಃ ಚೇತನ ಕಾರ್ಯಾಗಾರ   ಉಡುಪಿಯ ಡಯಟ್ ಕೇಂದ್ರದಲ್ಲಿ ನಡೆದ ಕಾರ್ಯಕ್ರಮ (Udupi) ಉಡುಪಿ: ಉಡುಪಿ ಜಿಲ್ಲಾ ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆ, ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ, ಉಪನ್ಯಾಸಕರ ಸಂಘ ಮತ್ತು ಡಯಟ್ ಉಡುಪಿ ಜಿಲ್ಲೆ ಇವರ ಸಹಭಾಗಿತ್ವದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ರಾಜ್ಯಶಾಸ್ತ್ರ ಉಪನ್ಯಾಸಕರಿಗಾಗಿ ಉಡುಪಿ ಜಿಲ್ಲಾ ಮಟ್ಟದ ರಾಜ್ಯಶಾಸ್ತ್ರ ವಿಷಯದ ಎರಡು ದಿನಗಳ ಪುನಃಚೇತನ ತರಬೇತಿ ಕಾರ್ಯಾಗಾರ ಉಡುಪಿಯ ಡಯಟ್ […]

(Udupi) ಉಡುಪಿ: ಉಡುಪಿ ಜಿಲ್ಲಾ ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆ, ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ, ಉಪನ್ಯಾಸಕರ ಸಂಘ ಮತ್ತು ಡಯಟ್ ಉಡುಪಿ ಜಿಲ್ಲೆ ಇವರ ಸಹಭಾಗಿತ್ವದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ರಾಜ್ಯಶಾಸ್ತ್ರ ಉಪನ್ಯಾಸಕರಿಗಾಗಿ ಉಡುಪಿ ಜಿಲ್ಲಾ ಮಟ್ಟದ ರಾಜ್ಯಶಾಸ್ತ್ರ ವಿಷಯದ ಎರಡು ದಿನಗಳ ಪುನಃಚೇತನ ತರಬೇತಿ ಕಾರ್ಯಾಗಾರ ಉಡುಪಿಯ ಡಯಟ್ ಕೇಂದ್ರದಲ್ಲಿಎರಡು ದಿನಗಳ ಕಾಲ ನಡೆಯಿತು.

     ಕಾರ್ಯಾಗಾರದಲ್ಲಿ ದ್ವಿತೀಯ ಪಿ ಯು ಸಿ ರಾಜ್ಯಶಾಸ್ತ್ರ ವಿಷಯದ ಪಠ್ಯಕ್ರಮಕ್ಕೆ ಸಂಬಂಧ ಪಟ್ಟ ವಿಷಯಗಳು, ಮಾದರಿ ಪ್ರಶ್ನೆ ಪತ್ರಿಕೆ ತಯಾರಿ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಮುಂಬರುವ ಬೋರ್ಡ್ ಪರೀಕ್ಷೆಯಲ್ಲಿ  ಉತ್ತಿರ್ಣ ಗೊಳಿಸಲು ಕೈಗೊಳ್ಳಬೇಕಾದ ಮಾರ್ಗೋಪಾಯಗಳ ಬಗ್ಗೆ, ನೀಲನಕ್ಷೆ ಮತ್ತು ಮೌಲ್ಯ ಮಾಪನದ ಬಗ್ಗೆ ಹಾಗೂ ಭಾರತದ ಸಂವಿಧಾನದ ಕುರಿತು ಕಾರ್ಯಾಗಾರದಲ್ಲಿ ಸುಮಾರು ಒಂಬತ್ತು ಉಪನ್ಯಾಸಗಳನ್ನು ಪ್ರೊಜೆಕ್ಟರ್ ಸಹಾಯದೊಂದಿಗೆ ಮಂಡಿಸಲಾಯಿತು.

    ಡಾ. ಪ್ರಶಾಂತ್ ನೀಲಾವರ, ಪಾಂಡುರಂಗ, ಪರಮೇಶ್ವರ ಎಂ. ಮೊಗವೀರ, ರಾಘವೇಂದ್ರ ಕಿಣಿ, ಜಗದೀಶ ನಾಯಕ, ವಾಸು ಮೊಗೇರ, ಸುಜಾತಾ ನಾಯ್ಕ್, ಹರೀಶ ನಾಯಕ ಮತ್ತು ದಯಾನಂದ ಡಿ ವಿಷಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

    ಕಾರ್ಯಾಗಾರದಲ್ಲಿ ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಎಲ್ಲ ರಾಜ್ಯಶಾಸ್ತ್ರ ಉಪನ್ಯಾಸಕರು ಹಾಜರಾಗಿದ್ದು, ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು.

    ಪರಮೇಶ್ವರ ಎಂ. ಮೊಗವೀರ ಸರ್ಕಾರಿ ಪದವಿ ಪೂರ್ವ ಕಾಲೇಜು ಉಡುಪಿ Cards ವಾಸು ಮೊಗೇರ ತೆಂಕನೀಡಿಯೂರು ವಿಷಯ ಸಂಯೋಜಕರಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.