• Home  
  • ಪಡುಬಿದ್ರಿ :ಅಖಂಡ ಇಪ್ಪತ್ತನಾಲ್ಕು ಗಂಟೆಗಳ ‘ಏಕಾಹ  ಭಜನೆ’ ಗೆ ಚಾಲನೆ (Padubidri: Twenty-four-hour continuous ‘Ekaha Bhajan’ launched)
- ಧಾರ್ಮಿಕ

ಪಡುಬಿದ್ರಿ :ಅಖಂಡ ಇಪ್ಪತ್ತನಾಲ್ಕು ಗಂಟೆಗಳ ‘ಏಕಾಹ  ಭಜನೆ’ ಗೆ ಚಾಲನೆ (Padubidri: Twenty-four-hour continuous ‘Ekaha Bhajan’ launched)

Share: ಪಡುಬಿದ್ರಿ :ಅಖಂಡ ಇಪ್ಪತ್ತನಾಲ್ಕು ಗಂಟೆಗಳ ‘ಏಕಾಹ  ಭಜನೆ’ ಗೆ ಚಾಲನೆ  ಪಾದೆಬೆಟ್ಟು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆದ ಭಜನಾ ಕಾರ್ಯಕ್ರಮ   (Padubidri) ಪಡುಬಿದ್ರಿ : ಶ್ರೀ ಸುಬ್ರಹ್ಮಣ್ಯ ದೇವಸ್ಥಾನ  ಪಾದೆಬೆಟ್ಟು,  ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ  ಪಾದೆಬೆಟ್ಟು, ಶ್ರೀ  ಸುಬ್ರಹ್ಮಣ್ಯ ಯುವಕ-ಯುವತಿ ವೃಂದ ಪಾದೆಬೆಟ್ಟು ಇವರ ಸಹಭಾಗಿತ್ವದಲ್ಲಿ  ಶ್ರೀ ಸುಬ್ರಹ್ಮಣ್ಯನ ನಾಮ ಸ್ಮರಣೆಯೊಂದಿಗೆ ಭಜನೆಯ  ಸಂಸ್ಕೃತಿ ಭಕ್ತಿ ಪಂಥದ ಪರಂಪರೆ  ಚಾಲ್ತಿಯಲ್ಲಿರಬೇಕೆಂಬ ಸಂಕಲ್ಪದೊಂದಿಗೆ  ಶ್ರೀ ಸುಬ್ರಹ್ಮಣ್ಯ ದೇವರಿಗೆ ಒಗ್ಗಟ್ಟಿನ ಮಂತ್ರದೊಂದಿಗೆ  ರಾಗ ತಾಳ ಲಯಗಳ ಶಿಷ್ಟರೂಪವಾಗಿ ಮೂಡಿಬರುವ  ಭಜನೆಯು ಮನೆ, ಮನಸ್ಸಿನ ಪರಿಕಲ್ಪನೆಯನ್ನು ತಿದ್ದುವ ಸಂಕೀರ್ತನೆಯಾಗಿ ತನ್ಮೂಲಕ ಲೋಕ ಕಲ್ಯಾಣವಾಗ ಬೇಕೆಂಬ ಸಂಕಲ್ಪದೊಂದಿಗೆ ಶನಿವಾರ ಸೂರ್ಯೋದಯ ಕಾಲದಿಂದ 23ನೇ ಆಗಸ್ಟ್ ಸೂರ್ಯೋದಯದವರೆಗೆ ಅಖಂಡ ಇಪ್ಪತ್ತನಾಲ್ಕು ಗಂಟೆಗಳ ‘ಏಕಾಹ ಭಜನೆ -2026’ ಕ್ಕೆ ಪಾದೆಬೆಟ್ಟು ಸುಬ್ರಹ್ಮಣ್ಯ ದೇವಳದ ಪ್ರಾಂಗಣದಲ್ಲಿ ಶನಿವಾರ ಪ್ರಾತ: ಕಾಲ ಚಾಲನೆ ದೊರೆಯಿತು.  ಪಾದೆಬೆಟ್ಟು ಸುಬ್ರಹ್ಮಣ್ಯ ದೇವಳದ ಪ್ರಧಾನ ಅರ್ಚಕರಾದ ರಾಘವೇಂದ್ರ ಉಡುಪ ದೀಪ ಬೆಳಗಿಸಿ ಚಾಲನೆ ನೀಡಿದರು.   […]

(Padubidri) ಪಡುಬಿದ್ರಿ : ಶ್ರೀ ಸುಬ್ರಹ್ಮಣ್ಯ ದೇವಸ್ಥಾನ 

ಪಾದೆಬೆಟ್ಟು,  ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ  ಪಾದೆಬೆಟ್ಟು, ಶ್ರೀ  ಸುಬ್ರಹ್ಮಣ್ಯ ಯುವಕ-ಯುವತಿ ವೃಂದ ಪಾದೆಬೆಟ್ಟು ಇವರ ಸಹಭಾಗಿತ್ವದಲ್ಲಿ  ಶ್ರೀ ಸುಬ್ರಹ್ಮಣ್ಯನ ನಾಮ ಸ್ಮರಣೆಯೊಂದಿಗೆ ಭಜನೆಯ  ಸಂಸ್ಕೃತಿ ಭಕ್ತಿ ಪಂಥದ ಪರಂಪರೆ  ಚಾಲ್ತಿಯಲ್ಲಿರಬೇಕೆಂಬ ಸಂಕಲ್ಪದೊಂದಿಗೆ  ಶ್ರೀ ಸುಬ್ರಹ್ಮಣ್ಯ ದೇವರಿಗೆ ಒಗ್ಗಟ್ಟಿನ ಮಂತ್ರದೊಂದಿಗೆ  ರಾಗ ತಾಳ ಲಯಗಳ ಶಿಷ್ಟರೂಪವಾಗಿ ಮೂಡಿಬರುವ  ಭಜನೆಯು ಮನೆ, ಮನಸ್ಸಿನ ಪರಿಕಲ್ಪನೆಯನ್ನು ತಿದ್ದುವ ಸಂಕೀರ್ತನೆಯಾಗಿ ತನ್ಮೂಲಕ ಲೋಕ ಕಲ್ಯಾಣವಾಗ ಬೇಕೆಂಬ ಸಂಕಲ್ಪದೊಂದಿಗೆ ಶನಿವಾರ ಸೂರ್ಯೋದಯ ಕಾಲದಿಂದ 23ನೇ ಆಗಸ್ಟ್ ಸೂರ್ಯೋದಯದವರೆಗೆ ಅಖಂಡ ಇಪ್ಪತ್ತನಾಲ್ಕು ಗಂಟೆಗಳ ‘ಏಕಾಹ ಭಜನೆ -2026’ ಕ್ಕೆ ಪಾದೆಬೆಟ್ಟು ಸುಬ್ರಹ್ಮಣ್ಯ ದೇವಳದ ಪ್ರಾಂಗಣದಲ್ಲಿ ಶನಿವಾರ ಪ್ರಾತ: ಕಾಲ ಚಾಲನೆ ದೊರೆಯಿತು.

 ಪಾದೆಬೆಟ್ಟು ಸುಬ್ರಹ್ಮಣ್ಯ ದೇವಳದ ಪ್ರಧಾನ ಅರ್ಚಕರಾದ ರಾಘವೇಂದ್ರ ಉಡುಪ ದೀಪ ಬೆಳಗಿಸಿ ಚಾಲನೆ ನೀಡಿದರು.

  ಈ ಸಂದರ್ಭ ದೇವಳದ ಮೊಕ್ತೇಸರ ಜಿತೇಂದ್ರ ಶೆಟ್ಟಿ, ಸುಬ್ರಹ್ಮಣ್ಯ ಯುವಕ ವೃಂದದ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಯುವತಿ ವೃಂದ ಅಧ್ಯಕ್ಷೆ ಗೀತಾ ಪ್ರಭಾಕರ್‌, ಸುಬ್ರಹ್ಮಣ್ಯ ಭಜನಾ ಮಂಡಳಿ ಪ್ರಮುಖರಾದ ಹರೀಶ್ ಕುಮಾರ್ ಶೆಟ್ಟಿ, ವಿದ್ಯಾಧರ ಶೆಟ್ಟಿ, ರಾಘವೇಂದ್ರ ಆಚಾರ್ಯ, ಸುಬ್ರಹ್ಮಣ್ಯ ಆಚಾರ್ಯ, ಸುಬ್ರಹ್ಮಣ್ಯ ಉಡುಪ, ವಿಷ್ಣುಮೂರ್ತಿ ಆಚಾರ್ಯ, ಸದಾನಂದ  ಪೂಜಾರಿ ಮುಂಬೈ, ಚಂದ್ರಶೇಖರ, ಸದಾನಂದ ಪೂಜಾರಿ, ಸುರೇಶ್ ಪೂಜಾರಿ, ರಂಜಿತಾ ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.