• Home  
  • ಪಡುಬಿದ್ರಿ : ಕಂಬಳ ಕ್ಷೇತ್ರದಲ್ಲಿ ಮಿಂಚಿನ ಓಟದ ಕೋಣ “ಚೆನ್ನ” ಇನ್ನಿಲ್ಲ (Padubidri: The lightning race hall “Chenna” is no more in the Kambala constituency)
- ನಿಧನ

ಪಡುಬಿದ್ರಿ : ಕಂಬಳ ಕ್ಷೇತ್ರದಲ್ಲಿ ಮಿಂಚಿನ ಓಟದ ಕೋಣ “ಚೆನ್ನ” ಇನ್ನಿಲ್ಲ (Padubidri: The lightning race hall “Chenna” is no more in the Kambala constituency)

Share: ಪಡುಬಿದ್ರಿ : ಕಂಬಳ ಕ್ಷೇತ್ರದಲ್ಲಿ ಮಿಂಚಿನ ಓಟದ ಕೋಣ “ಚೆನ್ನ” ಇನ್ನಿಲ್ಲ 13 ವರ್ಷದಲ್ಲಿ 150ಕ್ಕೂ ಅಧಿಕ ಚಿನ್ನ ಗೆಲುವಿನ ಮಹತ್ತರ ಸಾಧನೆ ಮಾಡಿದ “ಚೆನ್ನ”  ಪಡುಬಿದ್ರಿ : ಕಂಬಳ ಕ್ಷೇತ್ರದಲ್ಲಿ ಮಿಂಚಿನ ಓಟದ  ಮೂಲಕ ಅಸಂಖ್ಯಾತ ಅಭಿಮಾನಿ ಬಳಗನ್ನು ಹೊಂದಿದ್ದ ಕೊಳಚೂರು ಕೊಂಡೆಟ್ಟು ಸುಕುಮಾರ ಶೆಟ್ಟಿಯವರ ಕೊಂಡಾಟದ ಕೋಣ ಚೆನ್ನ(27) ಗುರುವಾರ ಕೊಳಚೂರಿನಲ್ಲಿ ಇಹಲೋಕ ತ್ಯಜಿಸಿತು.  ನಿರಂತರ ಐದು ವರ್ಷ ಸರಣಿಶ್ರೇಷ್ಠ ಗೌರವ ಪಡೆದು, 13 ವರ್ಷದಲ್ಲಿ 150ಕ್ಕೂ ಅಧಿಕ ಚಿನ್ನ ಗೆಲುವಿನ ಮಹತ್ತರ […]

 ಪಡುಬಿದ್ರಿ : ಕಂಬಳ ಕ್ಷೇತ್ರದಲ್ಲಿ ಮಿಂಚಿನ ಓಟದ  ಮೂಲಕ ಅಸಂಖ್ಯಾತ ಅಭಿಮಾನಿ ಬಳಗನ್ನು ಹೊಂದಿದ್ದ ಕೊಳಚೂರು ಕೊಂಡೆಟ್ಟು ಸುಕುಮಾರ ಶೆಟ್ಟಿಯವರ ಕೊಂಡಾಟದ ಕೋಣ ಚೆನ್ನ(27) ಗುರುವಾರ ಕೊಳಚೂರಿನಲ್ಲಿ ಇಹಲೋಕ ತ್ಯಜಿಸಿತು.

 ನಿರಂತರ ಐದು ವರ್ಷ ಸರಣಿಶ್ರೇಷ್ಠ ಗೌರವ ಪಡೆದು, 13 ವರ್ಷದಲ್ಲಿ 150ಕ್ಕೂ ಅಧಿಕ ಚಿನ್ನ ಗೆಲುವಿನ ಮಹತ್ತರ ಸಾಧನೆ ಮಾಡಿ ಯಜಮಾನರಿಗೆ ಗೌರವ ಒದಗಿಸಿ ಕೊಟ್ಟಿರುವ ಚೆನ್ನ, ಕಂಬಳ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಕ್ರೀಡಾರತ್ನಕ್ಕೆ ಪುರಸ್ಕಾರ ಲಭಿಸಲು ಕಾರಣನಾಗಿದ್ದ.

  2020 ರ ಅಡ್ಡೆ ಕಂಬಳದಲ್ಲಿ ಹಗ್ಗ ಹಿರಿಯ ವಿಭಾಗದಲ್ಲಿ ಚೆನ್ನ ಓಟ ಕೊನೆಗೊಳಿಸಿದ ಬಳಿಕ 3 ಕಂಬಳಗಳಲ್ಲಿ ನೇಗಿಲು ವಿಭಾಗದಲ್ಲಿ ಸ್ಪರ್ಧೆಗಿಳಿದಿತ್ತು. ಕಳೆದ 3 ವರ್ಷಗಳಿಂದ ಕೊಳಚೂರಿನಲ್ಲಿ ವಿಶ್ರಾಂತಿಯಲ್ಲಿತ್ತು.

4 ರ ಹರೆಯದಲ್ಲಿ ನೇರವಾಗಿ ಕಂಬಳ ಸ್ಪರ್ಧೆಗೆ ಪಾದಾರ್ಪಣೆ ಮಾಡಿ, ಸೆಮಿಫೈನಲ್ ಹಂತಕ್ಕೇರುವ ಮೂಲಕ ಎಲ್ಲರನ್ನು ದಂಗುಬಡಿಸಿದ್ದ ಚೆನ್ನ. ತನ್ನೊಂದಿಗೆ ಜತೆಯಾದ ಕೊಣದೊಂದಿಗೆ 75 ಬಾರಿ ತುರುಸಿನ ಫೈನಲ್ ಸ್ಪರ್ಧೆಯಲ್ಲಿ ಕೊನೇ ಹಂತದಲ್ಲಿ ವಿಡಿಯೋ ವಿನಿಶಿಂಗ್ ತೀರ್ಪಿನಲ್ಲಿ ಗೆಲುವು ಗುರಿಸಾಧಿಸಿ ಸಾಧನೆ ಹಾದಿಯಲ್ಲಿ ಹೊಸ ಇತಿಹಾಸ ಸೃಷ್ಟಿಸಿತ್ತು.

 ಯಾರ ಹೆಸರಿನಲ್ಲಿ ಓಡಿಸಿದರೂ ಅವರಿಗೆ ಒಂದು ಚಿನ್ನ ಗೆದ್ದು ಕೊಡುವುದನ್ನು ಮರೆಯದ ಚೆನ್ನ, ಅಬಾಲ ವೃದ್ಧರಾದಿಯಾಗಿ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದ.

 ಮೂಕ ಪ್ರಾಣಿಯಾದರೂ, ಮಾನವೀಯತೆ ಮೈಗೂಡಿಸಿಕೊಂಡಿರುವ ಸಾಧು ಸ್ವಭಾವದ ಚೆನ್ನ, ಕಂಬಳದ ದಿನ ಹಟ್ಟಿಯಿಂದ ಹೊರಬಂದಂತೆ ಮನೆಯ ತುಳಸೀ ಕಟ್ಟೆಗೆ ಪ್ರದಕ್ಷಿಣೆ ಬಂದು ತಾನು ಸಾಗುವ ವಾಹನವನ್ನೇರಿ ಮಲಗಿ ಬಿಡುವ ಬುದ್ಧಿಮತ್ತೆ ಹೊಂದಿತ್ತು.

ನಾಲ್ವರು ಯಜಮಾನರು

ಬೆಳುವಾಯಿ ಪೈರಿನಿಂದ ಕಾಂತಾವರ ಗ್ರಾಮದ ಬೈದೊಟ್ಟು ಪ್ರಕಾಶ್ ಪೂಜಾರಿ ಮನೆಗೆ ತಂದಿದ್ದ ಎರಡು ವರ್ಷದ ಚೆನ್ನ, ಬಳಿಕ ಕಡಂದಲೆ ಕಾಳು ಪಾಣಾರ, ಬಾರ್ಕೂರು ಶಾಂತಾರಾಮ ಶೆಟ್ಟಿ, ಪ್ರಸ್ತುತ ೧೮ ವರ್ಷಗಳಿಂದ ಕೊಳಚೂರು ಕೊಂಡೆಟ್ಟು ಸುಕುಮಾರ ಶೆಟ್ಟಿಯವರ ಪ್ರೀತಿಯ ಕೋಣವಾಗಿ ಬೆಳೆದಿತ್ತು.

  ತನ್ನೊಂದಿಗೆ ಜೋಡಿಯಾದ ಕೋಣದ ಜತೆ 2004 ರಿಂದ 2009ರವರೆಗೆ ನೇಗಿಲು ಕಿರಿಯ, ಹಿರಿಯ ಹಾಗೂ ಹಗ್ಗ ಹಿರಿಯ ವಿಭಾಗಗಳಲ್ಲಿ ಚಿನ್ನದ ಬೇಟೆ ಮೂಲಕ ಸತತ ಐದು ವರ್ಷ ತನ್ನ ಯಜಮಾನರಿಗೆ ಸರಣಿಶ್ರೇಷ್ಠ ಗೌರವ ತಂದುಕೊಡುವಲ್ಲಿ ಯಶಸ್ವಿಯಾಗಿತ್ತು.

 ನಕ್ರೆ ಜಯಕರ ಮಡಿವಾಳ, ಅಳದಂಗಡಿ ರವಿ ಕುಮಾರ್, ಮರೋಡಿ ಶ್ರೀಧರ್, ಮಾರ್ನಾಡ್ ರಾಜೇಶ್, ಹಕ್ಕೇರಿ ಸುರೇಶ್ ಶೆಟ್ಟಿ, ಅಳದಂಗಡಿ ಸತೀಶ್ ದೇವಾಡಿಗ, ಪಣಪೀಲು ಸಾಧು ಶೆಟ್ಟಿ ಸಹಿತ ದೀರ್ಘಕಾಲ ಪಲಿಮಾರು ದೇವೇಂದ್ರ ಕೋಟ್ಯಾನ್ ಚೆನ್ನ ಜೋಡಿ ಕೋಣಗಳನ್ನು ಓಡಿಸಿದ್ದರು.

  ಸಾಧನೆಗಾಗಿ ಅಭಿಮಾನಿಗಳಿಂದ ಹಲವಾರು ಕಡೆ ಸನ್ಮಾನಿಸಲ್ಪಟ್ಟಿದ್ದ ಚೆನ್ನನನ್ನು ಒಂದು ಕಿರು ಚಿತ್ರದ ಚಿತ್ರೀಕರಣಕ್ಕೂ ಬಳಸಲಾಗಿತ್ತು. ಕಳೆದ ತಿಂಗಳು ಸಾಂತೂರು ಪಿಲಾರು ಸಂಘಟನೆಯಿಂದ ಕೊನೆಯದಾಗಿ ಸನ್ಮಾನಿಸಲ್ಪಟ್ಟಿತ್ತು.

 ಚೆನ್ನನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಬೆಳಗ್ಗಿನಿಂದಲೇ ಅಭಿಮಾನಿಗಳು ಆಗಮಿಸಿ ಅಂತಿಮ ದರ್ಶನ ಪಡೆದರು. ಅವಿಭಜಿತ ಜಲ್ಲಾ ಕಂಬಳ ಸಮಿತಿ ಪದಾಧಿಕಾರಿಗಳು ಹಾಗೂ ಕಂಬಳಾಭಿಮಾನಿಗಳು ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.