ಅದಾನಿ ಫೌಂಡೇಶನ್‌ಸಿಎಸ್‌ಆರ್: ಪಡುಬಿದ್ರಿ ಗ್ರಾಪಂನಲ್ಲಿ ಸಭಾಂಗಣ ಉದ್ಘಾಟನೆ
ಅದಾನಿ ಫೌಂಡೇಷನ್‌ಸ್ಥಾವರದ ನೆರೆ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಶ್ರಮ : ಕಿಶೋರ್‌ಆಳ್ವಾ
(Padubidri) ಪಡುಬಿದ್ರಿ: ಅದಾನಿ ಫೌಂಡೇಶನ್ ಸಂಸ್ಥೆಯು, ಅದಾನಿ ಪವರ್ ಲಿಮಿಟೆಡ್ – ಉಡುಪಿ ಟಿಪಿಪಿಯ ಸಿಎಸ್‌ಆರ್ ಅನುದಾನದಲ್ಲಿ ಪಡುಬಿದ್ರಿ ಗ್ರಾಮ ಪಂಚಾಯತ್‌ಕಛೇರಿಯ ಸಭಾಂಗಣವನ್ನು 21.84 ಲಕ್ಷ ವೆಚ್ಚದಲ್ಲಿ ನವೀಕರಿಸಿದ್ದು, ಇಂದು ಅದಾನಿ ಸಂಸ್ಥೆಯ ಕಾರ್ಯನಿವಾಹಕ ನಿರ್ದೇಶಕ ಹಾಗೂ ಅಧ್ಯಕ್ಷ ಕಿಶೋರ್ ಆಳ್ವರವರು ಮತ್ತು ಪಡುಬಿದ್ರಿ ಗ್ರಾಮ ಪಂಚಾಯತ್‌ನ ಅಧ್ಯಕ್ಷರಾದ ವೈ. ಶಶಿಕಲಾ ಅವರು ಉದ್ಘಾಟಿಸಿದರು.
ಹೊಸದಾಗಿ ನವೀಕರಿಸಿದ ಸಭಾಂಗಣವನ್ನು ಆಡಳಿತ, ಸಮುದಾಯ ಸಂಪರ್ಕ ಮತ್ತು ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿಯ ಬಹುಮುಖ ಕೇಂದ್ರವಾಗಿಸಲು ವಿನ್ಯಾಸಗೊಳಿಸಲಾಗಿದೆ. ಆಧುನಿಕ ಆಸನ ವ್ಯವಸ್ಥೆ, ವೃತ್ತಿಪರ ವೇದಿಕೆ ಸೌಲಭ್ಯಗಳು, ಉನ್ನತ ಮಟ್ಟದ ಬೆಳಕು ಮತ್ತು ಧ್ವನಿ ವ್ಯವಸ್ಥೆ ಹಾಗೂ ಇತರೆ ಅನುಕೂಲತೆಗಳೊಂದಿಗೆ ಸಜ್ಜುಗೊಂಡಿದೆ.
ಈ ಸ್ಥಳವು ಪಂಚಾಯತ್ ಸಭೆಗಳು, ತರಬೇತಿ ಶಿಬಿರಗಳು, ಕೌಶಲ್ಯಾಭಿವೃದ್ಧಿ ಕಾರ್ಯಾಗಾರಗಳು, ಜಾಗೃತಿ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಗ್ರಾಮಸ್ಥರಿಗೆ ಉಪಯುಕ್ತವಾಗಲಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದಕಿಶೋರ್ ಆಳ್ವ, ಎಲ್ಲೂರು ಗ್ರಾಮದ ಉಷ್ಣ ವಿದ್ಯುತ್ ಸ್ಥಾವರ ಅದಾನಿ ತೆಕ್ಕೆಗೆ ಸೇರಿಸಿದ ನಂತರ, ಅದಾನಿ ಫೌಂಡೇಶನ್ ಸ್ಥಾವರದ ನೆರೆ ಗ್ರಾಮಗಳ ಸಮಗ್ರಅಭಿವೃದ್ಧಿಗಾಗಿ ನಿರಂತರವಾಗಿ ಸಿಎಸ್‌ಆರ್ ಯೋಜನೆಯಲ್ಲಿ ಹೂಡಿಕೆ ಮಾಡುತ್ತಿದೆ. ಅದಾನಿ ಫೌಂಡೇಶನ್‌ನ ಸಿಎಸ್‌ಆರ್ ಯೋಜನೆಗಳು ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದೆ. ಅದಾನಿ ಫೌಂಡೇಶನ್ ಕಾಪು ತಾಲೂಕಿನ ೭ ಗ್ರಾಮ ಪಾಂಚಾಯತ್‌ಗಳ ಸಹಕಾರದಿಂದ ಅವರ ವಾರ್ಷಿಕ ಕ್ರಿಯಾ ಯೋಜನೆಯನ್ವಯ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದೆ. ಪಡುಬಿದ್ರಿ ಗ್ರಾಮ ಪಂಚಾಯತ್‌ಇದುವರೆಗೂ ರೂ. 1.91 ಕೋಟಿ ಮೌಲ್ಯದ ಮೂಲ ಸೌಕರ್ಯ ಅಭಿವೃದ್ಧಿಯ ಪ್ರಯೋಜನ ಪಡೆದಿದೆ ಎಂದು ಹೇಳಿದರು.
ಈ ಸಂದರ್ಭ ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಶಿಕಲಾ, ಮಾಜಿ ಅಧ್ಯಕ್ಷ ರವಿ ಶೆಟ್ಟಿ, ಪಂಚಾಯತ್‌ಅಭಿವೃದ್ಧಿಅಧಿಕಾರಿ ಮಂಜುನಾಥ ಶೆಟ್ಟಿ, ಕಾರ್ಯದರ್ಶಿ ರೂಪಲತಾ, ಉಪಾಧ್ಯಕ್ಷ ಹೇಮಚಂದ್ರ ಸಾಲಿಯಾನ್, ಸದಸ್ಯರಾದ ಶೋಭಾ ಶೆಟ್ಟಿ, ವಿಜಯಲಕ್ಷ್ಮಿ ಆಚಾರ್ಯ, ನವೀನ್ ಶೆಟ್ಟಿ, ಗಣೇಶ ಕೋಟ್ಯಾನ್, ಸಂಜೀವಿ ಪೂಜಾರ್ತಿ, ಗೀತಾ ಪ್ರಭಾಕರ್, ಸುಜಾತ ಆಚಾರ್ಯ, ಭವಾನಿ, ಹರೀಶ್ ಶೆಟ್ಟಿ, ಸಂದೇಶ ಶೆಟ್ಟಿ, ಅಶೋಕ ಪೂಜಾರಿ, ಫಿರೋಝ್, ಮತ್ತುಅಜಿಝ್ ಸೇರಿದಂತೆ ಅದಾನಿ ಪವರ್ ಲಿಮಿಟೆಡ್‌ನ ಅಸೋಸಿಯೇಟ್ ಜನರಲ್ ಮ್ಯಾನೆಜರ್ ರವಿ ಆರ್. ಜೇರೆ, ಅದಾನಿ ಫೌಂಡೇಶನ್‌ನ ಅನುದೀಪ್ ಉಪಸ್ಥಿತರಿದ್ದರು.

