• Home  
  • ಪಡುಬಿದ್ರಿ ಕಡಲ್ಕೊರೆತ : ಮೀನುಗಾರಿಕಾ ಸಚಿವ, ಕಾಪು ಶಾಸಕರ ಭೇಟಿ, ಪರಿಶೀಲನೆ (Padubidri Kadalkoretha : Port Minister, Kaup MLA Visit the spot)
- PROBLEMS

ಪಡುಬಿದ್ರಿ ಕಡಲ್ಕೊರೆತ : ಮೀನುಗಾರಿಕಾ ಸಚಿವ, ಕಾಪು ಶಾಸಕರ ಭೇಟಿ, ಪರಿಶೀಲನೆ (Padubidri Kadalkoretha : Port Minister, Kaup MLA Visit the spot)

Share: ಪಡುಬಿದ್ರಿ ಕಡಲ್ಕೊರೆತ : ಮೀನುಗಾರಿಕಾ ಸಚಿವ, ಕಾಪು ಶಾಸಕರ ಭೇಟಿ, ಪರಿಶೀಲನೆ ಪಡಿಬಿದ್ರಿ: ಕಾಪು ವಿಧಾನಸಭಾ ಕ್ಷೇತ್ರದ ಪಡುಬಿದ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಡಿಪಟ್ಣ ಪರಿಸರದಲ್ಲಿ ವಿಪರೀತ ಕಡಲ್ಕೊರೆತ ಉಂಟಾಗಿ ಕಡಲ ತೀರದಲ್ಲಿರುವ ಮನೆಗಳು ಅಪಾಯದಲ್ಲಿದ್ದು, ಆಪ್ರಯುಕ್ತ ಶನಿವಾರ ಸಂಜೆ ಮೀನುಗಾರಿಕೆ ಮತ್ತು ಬಂದರು ಸಚಿವರಾದ ಮಂಕಾಳ ವೈದ್ಯ ಅವರೊಂದಿಗೆ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು  ಕಡಲ್ಕೊರೆತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.  ಈಗಾಗಲೇ ಕಡಲ್ಕೊರೆತದಿಂದ ಅನೇಕ ತೆಂಗಿನ ಮರಗಳು […]

ಪಡುಬಿದ್ರಿ ಕಡಲ್ಕೊರೆತ : ಮೀನುಗಾರಿಕಾ ಸಚಿವ, ಕಾಪು ಶಾಸಕರ ಭೇಟಿ, ಪರಿಶೀಲನೆ

ಪಡಿಬಿದ್ರಿ: ಕಾಪು ವಿಧಾನಸಭಾ ಕ್ಷೇತ್ರದ ಪಡುಬಿದ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಡಿಪಟ್ಣ ಪರಿಸರದಲ್ಲಿ ವಿಪರೀತ ಕಡಲ್ಕೊರೆತ ಉಂಟಾಗಿ ಕಡಲ ತೀರದಲ್ಲಿರುವ ಮನೆಗಳು ಅಪಾಯದಲ್ಲಿದ್ದು, ಆಪ್ರಯುಕ್ತ ಶನಿವಾರ ಸಂಜೆ ಮೀನುಗಾರಿಕೆ ಮತ್ತು ಬಂದರು ಸಚಿವರಾದ ಮಂಕಾಳ ವೈದ್ಯ ಅವರೊಂದಿಗೆ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು  ಕಡಲ್ಕೊರೆತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

 ಈಗಾಗಲೇ ಕಡಲ್ಕೊರೆತದಿಂದ ಅನೇಕ ತೆಂಗಿನ ಮರಗಳು ಸಮುದ್ರದ ಪಾಲಾಗಿದ್ದು, ಜೊತೆಗೆ ನಡಿಪಟ್ಣ ಬ್ಲೂ ಫ್ಲಾಗ್ ಬೀಚ್ ಸಂಪರ್ಕ ರಸ್ತೆಗೂ ಹಾನಿ ಉಂಟಾಗಿದೆ. ಕಡಲ್ಕೊರೆತ ತಡೆಗೆ ತಕ್ಷಣದಲ್ಲಿ ಅನುದಾನ ಮಂಜೂರು ಮಾಡುವಂತೆ ಶಾಸಕರು ಸಚಿವರ ಬಳಿ ಮನವಿ ಮಾಡಿದರು.

 ಶಾಸಕ ಸುರೇಶ್‌ ಶೆಟ್ಟಿಯವರ ಮನವಿಗೆ ಸ್ಪಂದಿಸಿದ ಮೀನುಗಾರಿಕಾ ಬಂದರು ಸಚಿವರು, ಒಂದು ಕೋಟಿ ಅನುದಾನ ನೀಡುವುದಾಗಿ ತಿಳಿಸಿ ತಕ್ಷಣವೇ ಕಾಮಗಾರಿ ಆರಂಭಿಸುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಕಾಡಿಪಟ್ಣ ಮೊಗವೀರ ಮಹಾಸಭಾ ಅಧ್ಯಕ್ಷ ಅಶೋಕ್, ನಡಿಪಟ್ಣ ಮೊಗವೀರ ಮಹಾಸಭಾ ಅಧ್ಯಕ್ಷ ಗಂಗಾಧರ ಕರ್ಕೇರ, ಗುತ್ತಿಗೆದಾರ ಕಿಶೋರ್ ಕುಮಾರ್ ಗುರ್ಮೆ, ಬ್ಲೂಫ್ಲಾö್ಯಗ್ ಬೀಚ್‌ನ ಪ್ರಬಂಧಕ ವಿಜಯ ಶೆಟ್ಟಿ, ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಶಿಕಲಾ, ಸದಸ್ಯರಾದ ವಿದ್ಯಾ ಶ್ರೀ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶಶಿಕಾಂತ್ ಪಡುಬಿದ್ರಿ ಹಾಗೂ ಹಾಗೂ ಮೀನುಗಾರ ಮುಖಂಡರು, ಸ್ಥಳೀಯರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.