• Home  
  • ಪಡುಬಿದ್ರಿ ಕೋಳಿ ಅಂಗಡಿಗೆ ಕನ್ನ; ಸಿಸಿಟಿವಿ ಯಲ್ಲಿ ಸೆರೆ
- ಅಪರಾಧ

ಪಡುಬಿದ್ರಿ ಕೋಳಿ ಅಂಗಡಿಗೆ ಕನ್ನ; ಸಿಸಿಟಿವಿ ಯಲ್ಲಿ ಸೆರೆ

Share: ಪಡುಬಿದ್ರಿ: ಇಲ್ಲಿನ ಕೆಳಗಿನಪೇಟೆಯ ರಾ.ಹೆ 66ರ ಪಕ್ಕದಲ್ಲಿರುವ ಕೋಳಿ ಅಂಗಡಿಯೊಂದಕ್ಕೆ ಕಳ್ಳನೊಬ್ಬ ಒಳ ನುಸುಳಿ ಸಾವಿರಾರು ರೂಪಾಯಿ ಕಳ್ಳತನ ಮಾಡಿ ಪರಾರಿಯಾದ ಘಟನೆ ಶನಿವಾರ ರಾತ್ರಿ ನಡೆದಿದೆ. ಶನಿವಾರ ರಾತ್ರಿ ಸುಮಾರು 10:30ರ ವೇಳೆಗೆ ಅಂಗಡಿಯ ಹಿಂಭಾಗದಲ್ಲಿರುವ ಕೋಳಿ ಶೇಖರಣಾ ಕೊಠಡಿಯ ಎಗ್ಸಾಸ್ಟ್ ಫ್ಯಾನ್ ನ ರಂಧ್ರದೊಳಗಿಂದ ಒಳ ನುಸುಳಿರುವ ಕಳ್ಳ ಕ್ಯಾಶ್ ಕೌಂಟರ್ ನಲ್ಲಿ ಇರಿಸಲಾಗಿದ್ದ ಸಾವಿರಾರು ರೂಪಾಯಿಗಳನ್ನು ಎಗರಿಸಿದ್ದಾನೆ. ಅಂಗಡಿಯ ಎಗ್ಸಾಸ್ಟ್ ಫ್ಯಾನ್ ದುರಸ್ತಿಗೆಂದು ಕೊಡಲಾಗಿದ್ದು ಅದರ ಜಾಗದಲ್ಲಿ ರಂಧ್ರವಿದ್ದು ಮುಚ್ಚಲಾಗಿರಲಿಲ್ಲ. ಸಿಸಿಟಿವಿಯಲ್ಲಿ […]

ಪಡುಬಿದ್ರಿ: ಇಲ್ಲಿನ ಕೆಳಗಿನಪೇಟೆಯ ರಾ.ಹೆ 66ರ ಪಕ್ಕದಲ್ಲಿರುವ ಕೋಳಿ ಅಂಗಡಿಯೊಂದಕ್ಕೆ ಕಳ್ಳನೊಬ್ಬ ಒಳ ನುಸುಳಿ ಸಾವಿರಾರು ರೂಪಾಯಿ ಕಳ್ಳತನ ಮಾಡಿ ಪರಾರಿಯಾದ ಘಟನೆ ಶನಿವಾರ ರಾತ್ರಿ ನಡೆದಿದೆ.

ಶನಿವಾರ ರಾತ್ರಿ ಸುಮಾರು 10:30ರ ವೇಳೆಗೆ ಅಂಗಡಿಯ ಹಿಂಭಾಗದಲ್ಲಿರುವ ಕೋಳಿ ಶೇಖರಣಾ ಕೊಠಡಿಯ ಎಗ್ಸಾಸ್ಟ್ ಫ್ಯಾನ್ ನ ರಂಧ್ರದೊಳಗಿಂದ ಒಳ ನುಸುಳಿರುವ ಕಳ್ಳ ಕ್ಯಾಶ್ ಕೌಂಟರ್ ನಲ್ಲಿ ಇರಿಸಲಾಗಿದ್ದ ಸಾವಿರಾರು ರೂಪಾಯಿಗಳನ್ನು ಎಗರಿಸಿದ್ದಾನೆ. ಅಂಗಡಿಯ ಎಗ್ಸಾಸ್ಟ್ ಫ್ಯಾನ್ ದುರಸ್ತಿಗೆಂದು ಕೊಡಲಾಗಿದ್ದು ಅದರ ಜಾಗದಲ್ಲಿ ರಂಧ್ರವಿದ್ದು ಮುಚ್ಚಲಾಗಿರಲಿಲ್ಲ.

ಸಿಸಿಟಿವಿಯಲ್ಲಿ ಸೆರೆ: ಅಂಗಡಿಯ ಒಳ ನುಸುಳಿರುವ ಕಳ್ಳ ನೇರ ಕ್ಯಾಶ್ ಕೌಂಟರ್ ಗೆ ಬಂದಿದ್ದಾನೆ. ಅಲ್ಲೇ ಇರಿಸಲಾಗಿದ್ದ ಸಿಸಿಟಿವಿಯನ್ನು ತಿರುಗಿಸಿ ಅದರ ಧಿಕ್ಕು ಬದಲಿಸಿದ್ದಾನೆ. ಈ ವೇಳೆ ಸಿಸಿಟಿವಿಯಲ್ಲಿ ಆತನ ಮುಖ ಸೆರೆಯಾಗಿದ್ದು ಕಳ್ಳನನ್ನು ಪತ್ತೆಹಚ್ಚಲು ಪೊಲೀಸರಿಗೆ ಸಹಕಾರಿಯಾಗಲಿದೆ.

ಮೂರನೇ ಬಾರಿ ಕಳ್ಳತನ: ಇದೇ ಅಂಗಡಿಯಲ್ಲಿ ಈ ಮುನ್ನ ಎರಡು ಬಾರಿ ಕಳ್ಳತನ ಗೈಯ್ಯಲಾಗಿದ್ದು ಇದೀಗ ಮೂರನೇ ಬಾರಿ ಕಳ್ಳರು ಕನ್ನ ಹೊಡೆದಿದ್ದಾರೆ. ಸಿಸಿಟಿವಿ ಇರುವ ಬಗ್ಗೆ ತಿಳಿದಿದ್ದರೂ ಕಳ್ಳರು ಯಾವುದೇ ಭಯವಿಲ್ಲದೆ ಕಳ್ಳತನ ನಡೆಸುತ್ತಿದ್ದು ಪೊಲೀಸರು ಕಳ್ಳತನ ತಡೆಗೆ ಮತ್ತಷ್ಟು ಪ್ರಕರ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.