• Home  
  • ಪಡುಬಿದ್ರಿ ದೇಗುಲದ ವಾರ್ಷಿಕ ರಥೋತ್ಸವ ಸಂಪನ್ನ (Padubidri temple’s annual chariot festival completes)
- ಧಾರ್ಮಿಕ

ಪಡುಬಿದ್ರಿ ದೇಗುಲದ ವಾರ್ಷಿಕ ರಥೋತ್ಸವ ಸಂಪನ್ನ (Padubidri temple’s annual chariot festival completes)

Share: (ಚಿತ್ರ ಕೃಪೆ : ರವಿ ಡಿಜಿಟಲ್ಸ್‌, ಪಡುಬಿದ್ರಿ)  ಪಡುಬಿದ್ರಿ ದೇಗುಲದ ವಾರ್ಷಿಕ ರಥೋತ್ಸವ ಸಂಪನ್ನ ಪುರಾಣಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ (Padubidri) ಪಡುಬಿದ್ರಿ: ಪುರಾಣಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮಂಗಳವಾರ ಶ್ರೀ ದೇವರ ರಥಾರೋಹಣ ನೆರವೇರಿತು.  ಶ್ರೀ ಕ್ಷೇತ್ರದ ತಂತ್ರಿ ವೇದಮೂರ್ತಿ ಕಂಬ್ಳೆಕಟ್ಟ ರಾಧಾಕೃಷ್ಣ ಉಪಾಧ್ಯಾಯರವರ ನೇತೃತ್ವದಲ್ಲಿ ಪೂಜಾ ವಿದಿ ವಿಧಾನ ಸಂಪನ್ನಗೊಂಡಿತು.    ಶ್ರೀ ದೇವರಿಗೆ ಉತ್ಸವ ಕಾಲದ ವಿಶೇಷ ಪೂಜಾದಿಗಳು, ನಿತ್ಯ […]

(Padubidri) ಪಡುಬಿದ್ರಿ: ಪುರಾಣಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮಂಗಳವಾರ ಶ್ರೀ ದೇವರ ರಥಾರೋಹಣ ನೆರವೇರಿತು.

 ಶ್ರೀ ಕ್ಷೇತ್ರದ ತಂತ್ರಿ ವೇದಮೂರ್ತಿ ಕಂಬ್ಳೆಕಟ್ಟ ರಾಧಾಕೃಷ್ಣ ಉಪಾಧ್ಯಾಯರವರ ನೇತೃತ್ವದಲ್ಲಿ ಪೂಜಾ ವಿದಿ ವಿಧಾನ ಸಂಪನ್ನಗೊಂಡಿತು.

   ಶ್ರೀ ದೇವರಿಗೆ ಉತ್ಸವ ಕಾಲದ ವಿಶೇಷ ಪೂಜಾದಿಗಳು, ನಿತ್ಯ ಬಲಿ, ಮಹಾಪೂಜೆಯ ಬಳಿಕ ಪಲ್ಲ ಪೂಜೆ ನಡೆದು, ರಥ ಶುದ್ದಿಯ ಬಳಿ ಉತ್ಸವ ಬಲಿ, ದಿಕ್ಷಾಲ ಬಲಿಗಳ ಬಳಿಕ   ವೈ. ಗಣಪತಿ ಭಟ್ ಮೂಲಕವಾಗಿ ಶ್ರೀ ದೇವರ ರಥಾರೋಹಣ ಸಂಪನ್ನಗೊಂಡಿತು. ಬಳಿಕ ಮಹಾ ಅನ್ನ ಸಂತರ್ಪಣೆ ನೆರವೇರಿತು.

   ದೇಗುಲದ ಆನುವಂಶಿಕ ಮೊಕೇಸರ ಪಡುಬಿದ್ರಿ ಬೀಡು ರತ್ನಾಕರ ರಾಜ್ ಅರಸು ಕಿನ್ನಕ್ಕ ಬಲ್ಲಾಳರು, ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ, ಕೊರ್ನಾಯ ಶ್ರೀಪತಿ ರಾವ್, ಕಾರ್ಯ ನಿರ್ವಹಣಾಧಿಕಾರಿ ಕೆ. ರಾಜಗೋಪಾಲ ಉಪಾಧ್ಯಾಯ, ಮುರಳಿನಾಥ ಶೆಟ್ಟಿ, ನಡ್ಸಾಲುಗುತ್ತು ಶ್ರೀನಾಥ ಹೆಗ್ಡೆ, ವೈ. ಸುಕುಮಾರ್, ಜಯ ಶೆಟ್ಟಿ ಪದ್ರ, ನವೀನ್‌ ಚಂದ್ರ ಜೆ. ಶೆಟ್ಟಿ ನವೀನ್‌ಎನ್. ಶೆಟ್ಟಿ ಮಿಥುನ್ ಹೆಗ್ಡೆ, ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ದೇಗುಲದ ಅರ್ಚಕರು, ಸಿಬ್ಬಂದಿ ವರ್ಗ ಮತ್ತಿತರರು ಉಪಸ್ಥಿತರಿದ್ದರು.

 ರಾತ್ರಿ ರಥಾ ಅವರೋಹಣ ಬಲಿ ಸೇವೆ, ಪಲ್ಲಕ್ಕಿ ಬಲಿ ನೆರವೇರಿತು.   

Leave a comment

Your email address will not be published. Required fields are marked *

eMedia Kannada  @2025. All Rights Reserved.