• Home  
  • ಪಡುಬಿದ್ರಿ : ನಡ್ಸಾಲಿನಲ್ಲಿರುವ ಜೈಹಿಂದ್‌ ಟ್ಯೂಬ್ಸ್‌ ಕಂಪನಿಯಿಂದ ಗ್ರಾಮಸ್ಥರಿಗೆ ತೊಂದರೆ, ಜಿಲ್ಲಾಧಿಕಾರಿಯವರಿಗೆ ದೂರು (Padubidri: Villagers complain to the D C about trouble caused by Jaihind Tubes Company in Nadsalu)
- PROBLEMS - ಜಿಲ್ಲಾಡಳಿತ

ಪಡುಬಿದ್ರಿ : ನಡ್ಸಾಲಿನಲ್ಲಿರುವ ಜೈಹಿಂದ್‌ ಟ್ಯೂಬ್ಸ್‌ ಕಂಪನಿಯಿಂದ ಗ್ರಾಮಸ್ಥರಿಗೆ ತೊಂದರೆ, ಜಿಲ್ಲಾಧಿಕಾರಿಯವರಿಗೆ ದೂರು (Padubidri: Villagers complain to the D C about trouble caused by Jaihind Tubes Company in Nadsalu)

Share: ಪಡುಬಿದ್ರಿ : ನಡ್ಸಾಲಿನಲ್ಲಿರುವ ಜೈಹಿಂದ್‌ ಟ್ಯೂಬ್ಸ್‌ ಕಂಪನಿಯಿಂದ ಗ್ರಾಮಸ್ಥರಿಗೆ ತೊಂದರೆ, ಜಿಲ್ಲಾಧಿಕಾರಿಯವರಿಗೆ ದೂರು     (Padubidri) ಪಡುಬಿದ್ರಿ : ಪಡುಬಿದ್ರಿ ನಡ್ಸಾಲು ಗ್ರಾಮದಲ್ಲಿ ಕಾರ್ಯಾಚರಿಸುತ್ತಿರುವ ಸ್ಟೀಲ್ ಉತ್ಪಾದನಾ ಘಟಕ  ಜೈಹಿಂದ್‌ ಟ್ಯೂಬ್ಸ್‌ ಕಂಪನಿ ಹೊರಸೂಸುವ  ರಾಸಾಯನಿಕ ಯುಕ್ತ ಹೊಗೆಯಿಂದ ಸ್ಥಳೀಯ ಜನರಿಗೆ ಹಾಗೂ ಮಕ್ಕಳಿಗೆ ಚರ್ಮದ ಕಾಯಿಲೆಗಳು ಹಾಗೂ ಉಸಿರಾಟದ ಸಮಸ್ಯೆಗಳು ಉಂಟಾಗಿದೆ. ಇದನ್ನು ಶೀಘ್ರವಾಗಿ ಬಗೆಹರಿಸಬೇಕೆಂದು ಎಂದು ಆಗ್ರಹಿಸಿ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿಯ ರಾಜ್ಯಾಧ್ಯಕ್ಷ ರಚನ್‌ ಸಾಲ್ಯಾನ್‌ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ […]

 (Padubidri) ಪಡುಬಿದ್ರಿ : ಪಡುಬಿದ್ರಿ ನಡ್ಸಾಲು ಗ್ರಾಮದಲ್ಲಿ ಕಾರ್ಯಾಚರಿಸುತ್ತಿರುವ ಸ್ಟೀಲ್ ಉತ್ಪಾದನಾ ಘಟಕ  ಜೈಹಿಂದ್‌ ಟ್ಯೂಬ್ಸ್‌ ಕಂಪನಿ ಹೊರಸೂಸುವ  ರಾಸಾಯನಿಕ ಯುಕ್ತ ಹೊಗೆಯಿಂದ ಸ್ಥಳೀಯ ಜನರಿಗೆ ಹಾಗೂ ಮಕ್ಕಳಿಗೆ ಚರ್ಮದ ಕಾಯಿಲೆಗಳು ಹಾಗೂ ಉಸಿರಾಟದ ಸಮಸ್ಯೆಗಳು ಉಂಟಾಗಿದೆ. ಇದನ್ನು ಶೀಘ್ರವಾಗಿ ಬಗೆಹರಿಸಬೇಕೆಂದು ಎಂದು ಆಗ್ರಹಿಸಿ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿಯ ರಾಜ್ಯಾಧ್ಯಕ್ಷ ರಚನ್‌ ಸಾಲ್ಯಾನ್‌ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ ಕೆ ಯವರಿಗೆ ಬುಧವಾರ ಮನವಿ ಸಲ್ಲಿಸಿದ್ದಾರೆ.  

 ಕಂಪನಿಯು ಕಳೆದ 2 ವರ್ಷಗಳಿಂದ  ಕಾರ್ಯ ನಿರ್ವಹಿಸುತ್ತಿದ್ದು, ಈ  ಕಂಪನಿಯಿಂದ ಸ್ಥಳೀಯ ಜನರ  ಅರೋಗ್ಯ  ಸಮಸ್ಯೆಗಳು ದಿನದಿಂದ ದಿನ ಹದಗೆಡುತ್ತಿದೆ.    ಕಂಪನಿಯು ಹೊರ ಬಿಡುತ್ತಿರುವ ಕಲುಷಿತ ನೀರನ್ನು ಕೃಷಿ ಗದ್ದೆಗಳಿಗೆ ಬಿಡುವುದರಿಂದ ಬೆಳೆಗಳು ನಾಶ ವಾಗುತ್ತಿದೆ. ವ್ಯವಸಾಯವನ್ನೆೇ ನಂಬಿ ಜೀವನ ಸಾಗಿಸುತ್ತಿರುವ  ಕೃಷಿಕರಿಗೆ ಕಷ್ಟಕರ ಪರಿಸ್ಥಿತಿ ಎದುರಾಗಿದೆ‌.

 ಈ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ, ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ. ಕಂಪನಿಯ ಸುತ್ತಮುತ್ತ ಬದುಕುತ್ತಿರುವ ಜನರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಿ, ಜೈಹಿಂದ್‌ ಟ್ಯೂಬ್ಸ್‌ ಕಂಪನಿಯಿಂದ ಸ್ಥಳೀಯ ನಿವಾಸಿಗಳಿಗೆ ಯಾವುದೇ ರೀತಿಯ ತೊಂದರೆ  ಹಾಗೂ ಪರಿಸರ ಮಾಲಿನ್ಯ ಆಗದಂತೆ ಸೂಕ್ತ ಕಾನೂನು ಕ್ರಮ ಕೈಗೂಳ್ಳುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

    ಈ ಬಗ್ಗೆ  ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಯವರು ತಕ್ಷಣವೇ ಪರಿಸರ ಇಲಾಖಾಧಿಕಾರಿಗಳ ಜೊತೆ ಕಂಪನಿಗೆ ಭೇಟಿ ನೀಡಿ, ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ರಚನ್‌ ಸಾಲ್ಯಾನ್‌ ತಿಳಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.