• Home  
  • ಪಡುಬಿದ್ರಿ ಬಂಟರ ಸಂಘದಲ್ಲಿ ಆಟಿಡೊಂಜಿ ದಿನ
- ಕರಾವಳಿ - ವಿಡಿಯೋ

ಪಡುಬಿದ್ರಿ ಬಂಟರ ಸಂಘದಲ್ಲಿ ಆಟಿಡೊಂಜಿ ದಿನ

Share: ಪಡುಬಿದ್ರಿ ಬಂಟರ ಸಂಘದಲ್ಲಿ ಆಟಿಡೊಂಜಿ ದಿನ ಬಜ್ಪೆ ಮಹಿಳಾ ಬಂಟ್ಸ್ ಸಂಘದ ಅಧ್ಯಕ್ಷೆ ಪ್ರೊ. ಅಕ್ಷಯ ಆರ್ ಶೆಟ್ಟಿಯವರಿಂದ ಆಟಿ ತಿಂಗಳ ಬಗ್ಗೆ ಪೂರಕ ಮಾಹಿತಿ: ವಿಡಿಯೋ ನೋಡಿ. ಪೂರ್ವಜರು ಆಟಿ ತಿಂಗಳನ್ನು ಕಷ್ಠದಲ್ಲಿ ಕಳೆದು, ಸೊಪ್ಪು ತರಕಾರಿ ತಿನ್ನುತ್ತಿದ್ದರು. ನಾವು ಈಗ ಫ್ಯಾಷನ್‌ ಕಾಲದಲ್ಲಿದ್ದು, ಆ ಸಮಯದ ತಿಂಡಿಗಳನ್ನು ನೆನಪು ಮಾಡಲು ತಿನ್ನುತ್ತಿದ್ದೇವೆ ಎನ್ನುತ್ತಾರೆ ಶ್ರೀಮತಿ ಪ್ರೊ. ಅಕ್ಷಯ ಆರ್. ಶೆಟ್ಟಿ ಇತ್ತೀಚೆಗೆ ಮಾರುಕಟ್ಟೆ ಗಳಲ್ಲಿ ಜಂಕ್ ಫುಡ್ ಅತಿದೊಡ್ಡ ಸಂಖ್ಯೆಯಲ್ಲಿ ಇದ್ದು, ಈಗಿನ […]

ಪಡುಬಿದ್ರಿ ಬಂಟರ ಸಂಘದಲ್ಲಿ ಆಟಿಡೊಂಜಿ ದಿನ

ಬಜ್ಪೆ ಮಹಿಳಾ ಬಂಟ್ಸ್ ಸಂಘದ ಅಧ್ಯಕ್ಷೆ ಪ್ರೊ. ಅಕ್ಷಯ ಆರ್ ಶೆಟ್ಟಿಯವರಿಂದ ಆಟಿ ತಿಂಗಳ ಬಗ್ಗೆ ಪೂರಕ ಮಾಹಿತಿ: ವಿಡಿಯೋ ನೋಡಿ.

ಪೂರ್ವಜರು ಆಟಿ ತಿಂಗಳನ್ನು ಕಷ್ಠದಲ್ಲಿ ಕಳೆದು, ಸೊಪ್ಪು ತರಕಾರಿ ತಿನ್ನುತ್ತಿದ್ದರು. ನಾವು ಈಗ ಫ್ಯಾಷನ್‌ ಕಾಲದಲ್ಲಿದ್ದು, ಆ ಸಮಯದ ತಿಂಡಿಗಳನ್ನು ನೆನಪು ಮಾಡಲು ತಿನ್ನುತ್ತಿದ್ದೇವೆ ಎನ್ನುತ್ತಾರೆ ಶ್ರೀಮತಿ ಪ್ರೊ. ಅಕ್ಷಯ ಆರ್. ಶೆಟ್ಟಿ

ಇತ್ತೀಚೆಗೆ ಮಾರುಕಟ್ಟೆ ಗಳಲ್ಲಿ ಜಂಕ್ ಫುಡ್ ಅತಿದೊಡ್ಡ ಸಂಖ್ಯೆಯಲ್ಲಿ ಇದ್ದು, ಈಗಿನ ಯುವಕ ಯುವತಿಯರು ಈ ಆಹಾರಕ್ಕೆ ಮಾರು ಹೋಗಿ ಅತಿ ಸಣ್ಣ ಪ್ರಾಯದಲ್ಲೇ ಮಾರಕ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಮನೆ ಮದ್ದು, ಮನೆ ಅಡಿಗೆ ಈಗಿನ ಯುವ ಜನಾಂಗಕ್ಕೆ ಒಗ್ಗುವುದಿಲ್ಲ ಎಂದು ಶ್ರೀಮತಿ ಅಕ್ಷಯ ಶೆಟ್ಟಿ ಹೇಳಿದರು.

 ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಮಂಗಳೂರು ಪ್ರಾಧ್ಯಾಪಕಿ ಮತ್ತು ಬಜ್ಪೆ ಮಹಿಳಾ    ಬಂಟ್ಸ್ ಸಂಘದ ಅಧ್ಯಕ್ಷೆ ಪ್ರೊ. ಶ್ರೀಮತಿ ಅಕ್ಷಯ ಆರ್ . ಶೆಟ್ಟಿ ಪಡುಬಿದ್ರಿ ಬಂಟರ ಸಂಘದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದರು.

ಇವರು ಬಂಟರ ಸಂಘ (ರಿ) ಪಡುಬಿದ್ರಿ, ಬಂಟ್ಸ್ ವೆಲ್ಫೇರ್ ಟ್ರಸ್ಟ್, ಬಂಟರ ಮಹಿಳಾ ವಿಭಾಗ ಪಡುಬಿದ್ರಿ ಇದರ ಆಶ್ರಯದಲ್ಲಿ ಆಟಿದ ಕೂಟ ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

 ಚೆನ್ನೆ ಮಣೆ ಆಟ ಆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

 ಆಟಿ ತಿಂಗಳಲ್ಲಿ ಹೆಚ್ಚು ರೋಗ ಹರಡಿ ಹೆಚ್ಚಿನ ಜನರು ರೋಗಗ್ರಸ್ತರಾಗುವ ದಿನ. ಅದಕ್ಕಾಗಿ ನಮ್ಮ ಹಿರಿಯರು ಈ ತಿಂಗಳಲ್ಲಿ ಆಟಿ ಅಮಾವಾಸ್ಯೆ ದಿನ ಕಷಾಯ, ಮೆತ್ತೆ ಗಂಜಿ ಅಲ್ಲದೆ ನಮ್ಮ ಪರಿಸರ ದಲ್ಲಿ ಸಿಗುವ ಅನೇಕ ಸೊಪ್ಪುಗಳು, ತರಕಾರಿಗಳು ರೋಗ ನಿರೋಧಕ ವಾಗಿ ನಮ್ಮ ದೇಹದಲ್ಲಿ ಕೆಲಸ ಮಾಡುತ್ತದೆ ಎಂದು ಹಿರಿಯರು ಅಡಿಪಾಯ ಹಾಕಿ ಕೊಟ್ಟಿದ್ದಾರೆ.

  ದುರದೃಷ್ಟವಶಾತ್ ಈ ವಿಚಾರಗಳನ್ನು ನಮ್ಮ ಮಕ್ಕಳಿಗೆ ತಿಳಿಸುವಲ್ಲಿ ನಾವು ವಿಫಲರಾಗಿದ್ದೇವೆ. ಈ ಆಧುನಿಕ ಕಾಲದಲ್ಲಿ ಯುವಕರ ಜಾಗೃತಿ ಗಾಗಿ ನಾವು ಈ ಆಟಿ ತಿಂಗಳಲ್ಲಿ ಇಂತಹ ಕಾರ್ಯಕ್ರಮ ನಡೆಸಿ ಜಾಗ್ರತಿ ಗೊಳಿಸಿ ಆರೋಗ್ಯ ರಕ್ಷಣೆ ಮಾಡುವಲ್ಲಿ ಸಹಕಾರ ಮಾಡುವ ಮೂಲಕ ಜಾಗ್ರತಿ ಮೂಡಿಸಲು ಅನುಕೂಲಕರ ಎಂದರು.

 ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ.  ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಮಹಿಳಾ ವಿಭಾಗಾದ್ಯಕ್ಷೆ ಜ್ಯೋತಿ ಎಸ್‌ ಶೆಟ್ಟಿ, ಕಾರ್ಯದರ್ಶಿ ವಾನಿ ರವಿ ಶೆಟ್ಟಿ, ಕೋಶಾಧಿಕಾರಿ ರಶ್ಮಿ ಸುಧಾಕರ ಶೆಟ್ಟಿ,   ಸ್ವಾಗತಿಸಿದರು.ಮಾಜಿ ಜಿಲ್ಲಾ ಪಂಚಾಯತ್‌ ಉಪಾಧ್ಯಕ್ಷೆ  ಶೀಲಾ. ಕೆ ಶೆಟ್ಟಿ, ಬಂಟ್ಸ್ ವೆಲ್ ಫೇರ್ ಟ್ರಸ್ಟ್ ಅದ್ಯಕ್ಷ ವೈ. ಶಶಿಧರ್ ಕೆ. ಶೆಟ್ಟಿ, ಉಪಾಧ್ಯಕ್ಷ ಸಂತೋಷ್‌ ಶೆಟ್ಟಿ ಪಲ್ಲವಿ, ಯುವ ಬಂಟ್ಸ್ ಸಂಘ ಅದ್ಯಕ್ಷ ನವೀನ್ ಎನ್‌ ಶೆಟ್ಟಿ, ರವಿ ಶೆಟ್ಟಿ ಗುಂಡ್ಲಾಡಿ, ಸುರೇಶ್‌ ಶೆಟ್ಟಿ, ವಸಂತ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.

ಮಹಿಳಾ ವಿಭಾಗಾದ್ಯಕ್ಷೆ ಜ್ಯೋತಿ ಎಸ್‌ ಶೆಟ್ಟಿ ಸ್ವಾಗತಿಸಿದರು.

ಅಕ್ಷತಾ ಶೆಟ್ಟಿ ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.