• Home  
  • ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ವಿವಿಧ ಘಟಕಗಳಿಂದ ಮಹಿಳಾ ದಿನಾಚರಣೆ (Women’s Day celebrated by various units of Padubidri Billava Samaj Seva Sangha)
- ಸಹಾಯ ಹಸ್ತ

ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ವಿವಿಧ ಘಟಕಗಳಿಂದ ಮಹಿಳಾ ದಿನಾಚರಣೆ (Women’s Day celebrated by various units of Padubidri Billava Samaj Seva Sangha)

Share: ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ವಿವಿಧ ಘಟಕಗಳಿಂದ ಮಹಿಳಾ ದಿನಾಚರಣೆ   ಕಟಪಾಡಿಯ ಕಾರುಣ್ಯ ವೃದ್ಧಾಶ್ರಮದಲ್ಲಿ ವಿಶ್ವ ಮಹಿಳಾ ದಿನಾಚರಣೆ  (Padubidri) ಪಡುಬಿದ್ರಿ: ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ (ರಿ.), ನಾರಾಯಣ ಗುರು ಮಹಿಳಾ ಮಂಡಳಿ, ಕಲ್ಪತರು ಸ್ವಸಹಾಯ ಸಂಘದ ಸದಸ್ಯರು ಗುರುವಾರ ಕಟಪಾಡಿಯ ಕಾರುಣ್ಯ ವೃದ್ಧಾಶ್ರಮದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಿದರು.   ಮಹಿಳಾ ದಿನಾಚರಣೆಯ ಅಂಗವಾಗಿ ಆಶ್ರಮ ವಾಸಿಗಳಿಗೆ ಹಣ್ಣು ಹಂಪಲುಗಳನ್ನು  ವಿತರಿಸಿ, ಊಟೋಪಚಾರಕ್ಕಾಗಿ ರೂ. 10,000 ಧನ ಸಹಾಯ […]

 (Padubidri) ಪಡುಬಿದ್ರಿ: ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ (ರಿ.), ನಾರಾಯಣ ಗುರು ಮಹಿಳಾ ಮಂಡಳಿ, ಕಲ್ಪತರು ಸ್ವಸಹಾಯ ಸಂಘದ ಸದಸ್ಯರು ಗುರುವಾರ ಕಟಪಾಡಿಯ ಕಾರುಣ್ಯ ವೃದ್ಧಾಶ್ರಮದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಿದರು.

  ಮಹಿಳಾ ದಿನಾಚರಣೆಯ ಅಂಗವಾಗಿ ಆಶ್ರಮ ವಾಸಿಗಳಿಗೆ ಹಣ್ಣು ಹಂಪಲುಗಳನ್ನು  ವಿತರಿಸಿ, ಊಟೋಪಚಾರಕ್ಕಾಗಿ ರೂ. 10,000 ಧನ ಸಹಾಯ ನೀಡಲಾಯಿತು.

  ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್ ರವರು ವ್ಯವಸ್ಥಿತವಾಗಿ ವೃದ್ಧರನ್ನು ಪಾಲನೆ ಪೋಷಣೆ ಮಾಡುತ್ತಿರುವ ಆಶ್ರಮದ ಸಂಚಾಲಕರಿಗೆ ಅಭಿನಂದನೆ ತಿಳಿಸಿದರು.

  ಶ್ರೀಮತಿ ಕಲ್ಯಾಣಿ ರವಿ ಅಂಚನ್ ರವರು ಆಶ್ರಮದ ಬಗ್ಗೆ ಮಾತನಾಡಿದರು.

 ಈ ಸಂದರ್ಭ ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಸುಜಾತಾ ಹರೀಶ್, ಕಾರ್ಯದರ್ಶಿ ಶ್ರೀಮತಿ ನೀತಾ ಗುರುರಾಜ್ ಉಪಸ್ಥಿತರಿದ್ದರು.

 ಉಪಸ್ಥಿತರಿದ್ದ ಎಲ್ಲಾ ಸದಸ್ಯರು ಆಶ್ರಮ ವಾಸಿಗಳೊಂದಿಗೆ ಕಾಲಕಳೆದು, ಅವರ ಪ್ರೀತಿ, ಆಶೀರ್ವಾದ ಪಡೆದುಕೊಂಡರು.

Leave a comment

Your email address will not be published. Required fields are marked *

eMedia Kannada  @2025. All Rights Reserved.